October 12, 2026
;
suddi-2 (3)

 

 

ಭಾರತೀಯ ಸೈನಿಕರು ರಾಷ್ಟ್ರದ ಹೆಮ್ಮೆಯ ಕಿರೀಟ. ಯುದ್ಧದ ಕಠಿಣ ಪರಿ ಸ್ಥಿತಿಯಲ್ಲೂ ಬೆನ್ನು ತೋರಿಸಿ ಓಡಿಹೋಗದೇ, ಧೈರ್ಯವಾಗಿ ಶತೃಗಳ ಎದೆಸೀಳುವ ಅಭೂತ ಶಕ್ತಿ ಭಾ ರತೀಯ ಯೋಧರಯಲ್ಲಿದೆ ಎಂದು ವಿಧಾನ ಪರಿಷತ್ ಸದಸ್ಯ ಡಾ.ಸಿ.ಟಿ.ರವಿ ಹೇಳಿದರು.

ಚಿಕ್ಕಮಗಳೂರು ನಗರದ ಪಾಂಚಜನ್ಯ ಕಚೇರಿಯಲ್ಲಿ ಗುರುವಾರ ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದಿಂದ ಆ ಯೋಜಿಸಿದ್ಧ ಸೇವಾ ಸಂಕಲ್ಪ ಅಭಿಯಾನದ ಅಂಗವಾಗಿ ನಿವೃತ್ತ ಸೈನಿಕರಿಗೆ ಗೌರವ ಸಮರ್ಪಣೆ ಕಾರ್ಯ ಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ದೇಶಸೇವೆಯೇ ಉಸಿರೆಂದು ಭಾವಿಸಿ, ಹಗಲಿರುಳೆನ್ನದೇ ರಾಷ್ಟ್ರದ ಗಡಿ ಕಾಯುವ ಯೋಧರಿಗೆ ದೊಡ್ಡ ನಮನ. ಪ್ರಾಣದ ಹಂಗುತೊರೆದು, ಮೈಕೊರೆವ ಚಳಿಯಲ್ಲೂ ಶೃತವನ್ನು ಭಾರತ ನೆಲದಿಂದ ಹೊರಹಾಕುವ ಸಾಹಸ ಜಗತ್ತಿನ ಚರಿತ್ರೆಯಲ್ಲಿ ಅವಿಸ್ಮರಣಿಯವಾಗಿದೆ ಎಂದು ತಿಳಿಸಿದರು.

ಒಂದು ಕಾಲದಲ್ಲಿ ಭಾರತೀಯ ಸೈನಿಕರಿಗೆ ವೃತ್ತಿಗನುಗುಣವಾಗಿ ಸವಲತ್ತಿರಲಿಲ್ಲ. ಆದರೆ ಮೋದಿ ಸಕಾ ್ರ ಅಧಿಕಾರಕ್ಕೆ ಬಂದ ಮೇಲೆ ಬುಲೆಟ್ ಪ್ರೂಪ್ ಜಾಕೇಟ್ಸ್, ಅತ್ಯಾಧುನಿಕ ತಂತ್ರಜ್ಞಾನ ಸಶಸ್ತ್ರಗಳು ನೀಡಿದ್ದು, ಮೇಕ್ ಇಂಡಿಯಾ ಮುಖೇನಾ ಸ್ವದೇಶದಲ್ಲೇ ಶಸ್ತ್ರಗಳನ್ನು ಉತ್ಪಾದಿಸುವ ಜೊತೆಗೆ ವಿದೇಶಕ್ಕೂ ರಫ್ತು ಮಾ ಡಿ ದೊಡ್ಡ ಉದ್ಯಮವನ್ನು ಆರಂಭಿಸಿತು ಎಂದರು.

ಭಾರತದ ಭೂ ಸೈನಿಕರು ರಾಷ್ಟ್ರದ ಒಂದು ದೊಡ್ಡ ಶಕ್ತಿ. ಅಕ್ಕಪಕ್ಕದ ದೇಶದ ಕೆಲವು ಸೈನಿಕರು ಸಣ್ಣಪು ಟ್ಟ ಯುದ್ಧಕ್ಕೆ ಸುಸ್ತಾಗುತ್ತಾರೆ. ಆದರೆ ಭಾರತೀಯ ಸೈನಿಕ ಅಂದುಕೊಂಡ ಗುರಿ ತಲುಪುವವರೆಗೂ, ದೇಹದ ಲ್ಲಿ ಎಷ್ಟೇ ಧಣಿವಿದ್ದರೂ ಅಂಜದೇ, ಅಳುಕದೇ ಮುನ್ನುಗ್ಗಿ ಹೋರಾಡುವ ಆತ್ಮಬಲವಿದೆ ಎಂದರು.

ಲಾಲ್‍ಬಹದ್ದೂರ್ ಶಾಸ್ತ್ರಿ ಜೈ ಜವಾನ್, ಜೈಕಿಸಾನ್ ಎಂಬ ಘೋಷವಾಕ್ಯ ಮೊಳಗಿಸಿ ಇಬ್ಬರಿಗೂ ಗೌರ ವಿಸಿದರು. ಪ್ರಧಾನಿ ನರೇಂದ್ರ ಮೋದಿಯವರು ಕಳಂಕರಹಿತ, ಕಪ್ಪುಚುಕ್ಕೆ ಇಲ್ಲದೇ ಸತತ 25 ವಸ ಂತಗಳ ನ್ನು ಪೂರೈಸಿರುವುದು ನಿಜಕ್ಕೂ ಒಂದು ದೊಡ್ಡ ಸವಾಲಾಗಿದ್ದು 76ರ ವಯಸ್ಸಿನಲ್ಲೂ 26ರಂತೆ ಕರ್ತವ್ಯ ನಿ ರ್ವಹಿಸುತ್ತಿರುವುದು ಸುಲಭದ ಮಾತಲ್ಲ ಎಂದು ಹೇಳಿದರು.

ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಜಿಲ್ಲಾಧ್ಯಕ್ಷ ಅಬ್ದುಲ್ ಕಬೀರ್ ಮಾತನಾಡಿ ಪ್ರಧಾನಿಗಳ ನಿರಂತರ ಆಡಳಿತದ ಸೇವಾ ಸಂಕಲ್ಪ ಅಭಿಯಾನದ ಅಂಗವಾಗಿ ಸಸಿನೆಡುವುದು, ದೇವಸ್ಥಾನ, ಮಸೀದಿ ಸ್ವಚ್ಚತೆಯನ್ನು ಮಾಡಿದ್ದು ವಿಶೇಷವಾಗಿ ಅಲ್ಪಸಂಖ್ಯಾತ ಮೋರ್ಚಾದಿಂದ ಮಾಜಿ ಸೈನಿಕರು ಮತ್ತು ಕುಟುಂಬಸ್ಥರಿಗೆ ಗೌರವಿ ಸಲಾಗುತ್ತಿದೆ ಎಂದರು.

ಮಾಜಿ ಸೈನಿಕರ ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ್ ಮಾತನಾಡಿ ರಾಷ್ಟ್ರದ ಸೈನಿಕರು ಸೇವೆಯೇ ಪರ ಮಧರ್ಮ ಎಂದು ಬಾಳಿದವರು. ವಿಕಸಿತ ಹಾಗೂ ಆತ್ಮನಿರ್ಭಾರ ಭಾರತ ಮಾಡುವುದೇ ಪ್ರತಿಯೊಬ್ಬರ ಧ್ಯೇ ಯವಾಗಬೇಕು. ಇದು ರಾಜಕೀಯ ಪ್ರಚಾರವಲ್ಲ. ಯುವಶಕ್ತಿ ರಾಷ್ಟ್ರ ನಿರ್ಮಾಣಕ್ಕೆ ತೊಡಗಿಸಿಕೊಳ್ಳುವುದು ಮುಖ್ಯ ಕಾರ್ಯ ಎಂದರು.

ಬಿಜೆಪಿ ನಗರಾಧ್ಯಕ್ಷ ಪುಷ್ಪರಾಜ್ ಮಾತನಾಡಿ ಪ್ರಾಮಾಣಿಕ, ಪಾರದರ್ಶಕ ಆಡಳಿತ ನೀಡುತ್ತಿರುವ ನೆಚ್ಚಿ ನ ಪ್ರಧಾನಿ ನರೇಂದ್ರ ಮೋದಿಯವರ ಸೇವೆ ಅತ್ಯುತ್ತಮವಾಗಿದೆ. ರಾಷ್ಟ್ರದ ಸದೃಢ ನಾಯಕತ್ವ ಮೋದಿಯವ ರಿಂದ ಸಾಧ್ಯವಾಗಿದ್ದು ಇನ್ನಷ್ಟು ದಿನಗಳು ಆರೋಗ್ಯ ಹಾಗೂ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಲೆಂಬ ಕಾ ರಣಕ್ಕೆ ಸೇವಾ ಸಂಕಲ್ಪ ದಿನವನ್ನು ಎಲ್ಲೆಡೆ ಆಚರಿಸಲಾಗುತ್ತಿದೆ ಎಂದರು.

ಇದೇ ವೇಳೆ ಸುಮಾರು 15ಕ್ಕೂ ಹೆಚ್ಚು ನಿವೃತ್ತ ಸೈನಿಕರಿಗೆ ಸೇವಾ ಸಂಕಲ್ಪ ದಿನದ ಪ್ರಯುಕ್ತ ಗೌರವಿ ಸಲಾಯಿತು. ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ್‍ಶೆಟ್ಟಿ, ರಾಜ್ಯ ಎಸ್ಸಿ ಮೋರ್ಚಾ ಕಾ ರ್ಯದರ್ಶಿ ಸೀತರಾಮಭರಣ್ಯ, ಹಿರಿಯ ಮುಖಂಡ ಕೋಟೆ ರಂಗನಾಥ್, ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾ ಉಪಾಧ್ಯಕ್ಷ ಬೆನಡಿಕ್ಟ್ ಜೇಮ್ಸ್, ಪ್ರಧಾನ ಕಾರ್ಯದರ್ಶಿಗಳಾದ ರಾಬರ್ಟ್, ನಜೀರ್ ಇದ್ದರು.

 

 

Leave a Reply

Your email address will not be published. Required fields are marked *