October 12, 2026
;
suddi-1 (3)

 

 

ಕೈಗೆ ಗಾಯವಾದರೆ, ಜ್ವರ ಬಂದರೆ ತಕ್ಷಣ ಆಸ್ಪತ್ರೆಗೆ ಹೋಗುತ್ತೇವೆ. ಆದರೆ ಮನಸ್ಸಿಗೆ ಗಾಯವಾದರೆ, ನೋವಾದರೆ ನಾವು ಯಾರಿಗೂ ಹೇಳುವುದಿಲ್ಲ. ಯಾಕೆಂದರೆ ನಾಚಿಕೆ ಸ್ವಭಾವ ಎಂಬ ಭಯವಿದ್ದು, ಮುಕ್ತವಾಗಿ ಒತ್ತಡವನ್ನು ಬಹಿರಂಗಪಡಿಸುವುದು ಒಳಿತು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ವಿ.ಹನುಮಂತಪ್ಪ ಹೇಳಿದರು.

ಚಿಕ್ಕಮಗಳೂರು ನಗರದ ಸಂತ ಜೋಸೆಫರ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಜಿಲ್ಲಾಡಳಿತ, ಜಿ.ಪಂ., ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಾನಸಿಕ ಕಾರ್ಯ ಕ್ರಮ ಘಟಕ ಸಹಯೋಗದಲ್ಲಿ ಹಮ್ಮಿಕೊಂಡಿದ್ಧ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜ್ವರದಂತೆ, ಮಾನಸಿಕ ಒತ್ತಡವು ಇದೂ ಒಂದು ಕಾಯಿಲೆ. ಖಿನ್ನತೆ, ಆತಂಕ ಇವುಗಳಿಗೆ ಚಿಕಿತ್ಸೆಯಿದೆ. ಮನೋ ವೈದ್ಯರ ತೆರಳಿ ಮುಕ್ತವಾಗಿ ಚರ್ಚಿಸಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು. ಇಂದು ನಾವು ಮೊಬೈಲ್ ನಲ್ಲಿ ಎಲ್ಲರೊಂದಿಗೆ ಇದ್ದೇವೆ. ಆದರೆ ಮನೆಯವರೊಂದಿಗೆ ಇಲ್ಲ. ದಿನಕ್ಕೆ ಒಂದು ಗಂಟೆ ಮೊಬೈಲ್ ಇಲ್ಲದೇ ಕುಟುಂಬ, ಸ್ನೇಹಿತರೊಂದಿಗೆ ಕಳೆದರೆ ಮನಸ್ಸು ಹಗುರವಾಗಲಿದೆ ಎಂದರು.

ಮನುಷ್ಯನ ಮನಸ್ಸು ಆರೋಗ್ಯವಾಗಿದ್ದರೆ ಮಾತ್ರ ಚೆನ್ನಾಗಿ ಒದಲು, ಆಡಲು ಸಾಧ್ಯ. ಆದ್ದರಿಂ ದ ಹೆಚ್ಚು ಮೊಬೈಲ್‍ಗೆ ದಾಸರಾಗದೇ, ಚೆನ್ನಾಗಿ ನಿದ್ರೆಮಾಡಿ, ನಿಮ್ಮ ಮನಸ್ಸಿನ ಕೆಲವು ಗೊಂದಲಗಳನ್ನು ಪಾ ಲಕರು ಅಥವಾ ಶಿಕ್ಷಕರೊಂದಿಗೆ ಹಂಚಿಕೊಳ್ಳಿ ಎಂದ ಅವರು ಮಾನಸಿಕ ಆರೋಗ್ಯವೇ ನಿಜವಾದ ಆರೋಗ್ಯ ಎಂ ದು ತಿಳಿಸಿದರು.

ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿ ಡಾ. ಎಂ.ಶಶಿಕಲಾ ಮಾತನಾಡಿ ದೇಶದಲ್ಲಿ ಇಂದಿ ನ ಕಾಲಘಟ್ಟದಲ್ಲಿ ಪ್ರತಿಯೊಬ್ಬರಿಗೂ ಮಾನಸಿಕ ಒತ್ತಡವಿದೆ. ವಿದ್ಯಾರ್ಥಿಗಳಿಗೆ ಅಂಕದ ಒತ್ತಡವಾದರೆ, ಕೆಲವ ರಿಗೆ ಸಂಸಾರದ ಒತ್ತಡ, ಯುವಕರಿಗೆ ಕೆಲಸದ ಒತ್ತಡ. ಹೀಗಾಗಿ ಒತ್ತಡ ನಿವಾರಿಸಿಕೊಂಡು ಬದು ಕುವುದೇ ನಿಜವಾದ ಲಕ್ಷಣ ಎಂದು ಹೇಳಿದರು.

ಮನುಷ್ಯನ ಮಾನಸಿಕ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ವಿಶ್ವಸಂಸ್ಥೆ ಜಗತ್ತಿನಾದ್ಯಂತ ಮಾನಸಿಕ ಆರೋಗ್ಯ ಜಾಗೃತಿ ಹಮ್ಮಿಕೊಂಡು ಅರಿವು ಮೂಡಿಸುತ್ತಿದೆ. ಈ ಮಾನಸಿಕ ಒತ್ತಡದಿಂದ ಬಳಲುವವರು ಸಣ್ಣ ದರಲ್ಲೇ ಪರಿಹರಿಸಿಕೊಳ್ಳಬೇಕು. ನಿರ್ಲಕ್ಷಿಸಿದರೆ ಭವಿಷ್ಯದಲ್ಲಿ ಹೆಮ್ಮರವಾಗಿ ಬೆಳೆದು ಮೈ, ಮನಸ್ಸು ಉಲ್ಬಣವಾ ಗುತ್ತದೆ ಎಂದು ಎಚ್ಚರಿಸಿದರು.

ಮಾನಸಿಕ ರೋಗ ತಜ್ಞ ಡಾ. ಕೆ.ಎಸ್.ವಿನಯಕುಮಾರ್ ಮಾತನಾಡಿ ಔಷಧಿ ದೇಹದ ನೋವನ್ನು ಕಡಿ ಮೆ ಮಾಡುತ್ತದೆ. ಆದರೆ ಒಂದು ಒಳ್ಳೆಯ ಮಾತು ಮನಸ್ಸಿನ ನೋವನ್ನು ಗುಣಪಡಿಸುತ್ತದೆ. ಮಾನಸಿಕ ಆರೋಗ್ಯ ಎಂದರೆ ಸಮಸ್ಯೆ ಇಲ್ಲದಿರುವುದಲ್ಲ, ಸಮಸ್ಯೆಯನ್ನು ದೈರ್ಯವಾಗಿ ಎದುರಿಸುವ ಶಕ್ತಿಯಿದ್ದು, ಅಂ ಜದೇ ಮುನ್ನುಗ್ಗಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂತ ಜೋಸೆಫರ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ವಿನ್ಸೆಂ ಟ್ ಕಾರ್ಡೋಜ, ಮಾನಸಿಕ ಆರೋಗ್ಯ ಕಾರ್ಯಕ್ರಮ ಘಟಕದ ಮನಶಾಸ್ತ್ರಜ್ಞ ನವೀನಕುಮಾರ್, ಜಿಲ್ಲಾಸ್ಪತ್ರೆ ಸರ್ಜನ್ ದೇವರಾಜ್, ಜಿಲ್ಲಾ ಉಪ ಆರೋಗ್ಯ ಶಿಕ್ಷಣಾಧಿಕಾರಿ ಹೆಚ್.ಎಸ್.ಜಲಜಾಕ್ಷಿ, ಮನೋ ಸಾಮಾಜಿಕ ಕಾರ್ಯಕರ್ತ ಎಸ್.ಹೆಚ್.ಜಯಣ್ಣ, ತಂಬಾಕು ನಿಯಂತ್ರಣ ಕೋಶದ ದಿನೇಶ್, ರಾಘವೇಂದ್ರ ಮುಂತಾದ ವರಿದ್ದರು.

 

 

Leave a Reply

Your email address will not be published. Required fields are marked *