ಮೂಡಿಗೆರೆ ತಾಲೂಕಿನ ತಳವಾರ ಗ್ರಾಮದಲ್ಲಿ ಕಾಡಾನೆ ಸೆರೆಯಾಗಿದೆ.
ಮೂರು ಕಾಡಾನೆಗಳನ್ನು ಸೆರೆ ಹಿಡಿಯಲು ನಡೆಯುತ್ತಿರುವ ಕಾರ್ಯಾಚರಣೆಯಲ್ಲಿ ಇಂದು ಮಧ್ಯಾಹ್ನ ಎರಡನೇ ಆನೆ ಸೆರೆಯಾಗಿದೆ.
ಮೊನ್ನೆ ಸೋಮವಾರ ಒಂದು ಆನೆಯನ್ನು ಸೆರೆಹಿಡಿಯಲಾಗಿತ್ತು.
ತಳವಾರ ಸಮೀಪ ದಟ್ಟ ಅರಣ್ಯದಲ್ಲಿ ಇಂದು ಮಧ್ಯಾಹ್ನ ಆನೆ ಸೆರೆಯಾಗಿದೆ. ಸೆರೆಯಾಗಿರುವ ಆನೆ ತುಂಬಾ ಬಲಿಷ್ಠವಾಗಿದೆ ಎನ್ನಲಾಗಿದೆ.
ಕಳೆದ ಮೂರು ದಿನಗಳಿಂದ ಆನೆಗೆ ಅರವಳಿಕೆ ಚುಚ್ಚುಮದ್ದು ಹಾಕಲು ಹರಸಾಹಸ ಪಡಲಾಗುತ್ತಿತ್ತು.
ಸಾಕಾನೆಗಳಲ್ಲಿ ಒಂದು ಆನೆ ಅನಾರೋಗ್ಯದಿಂದ ವಾಪಾಸಾಗಿದ್ದು, ಉಳಿದಿರುವ ಐದು ಆನೆಗಳನ್ನು ಬಳಸಿಯೇ ಕಾರ್ಯಾಚರಣೆ ಮುಂದುವರಿಸಲಾಗಿದೆ..
ವರದಿ- ತಳವಾರ ಪ್ರಸನ್ನ



