ಮೂಡಿಗೆರೆ ತಾಲ್ಲೂಕಿನ ಬಣಕಲ್ ಬಾಲಿಕಾ ಮರಿಯ ಚರ್ಚ್ ವತಿಯಿಂದ ಬಣಕಲ್‍ನಲ್ಲಿ ಇತ್ತೀಚೆಗೆ ಸ್ವಚ್ಛತಾ ಅಭಿಯಾನ ನಡೆಯಿತು.
ಬಣಕಲ್‍ನ ಸುಣ್ಣದಗೂಡು, ಚರ್ಚ್ ರಸ್ತೆ ಹಾಗೂ ಬಣಕಲ್ ಪಟ್ಟಣದಲ್ಲಿ ಗಿಡಗಂಟಿಗಳನ್ನು ಕಡಿದು ಪ್ಲಾಸ್ಟಿಕ್ ತ್ಯಾಜ್ಯ ಮುಂತಾದವುಗಳನ್ನು ಹೆಕ್ಕಿ ಸ್ವಚ್ಛಗೊಳಿಸಲಾಯಿತು.
ಈ ಸಂದರ್ಭದಲ್ಲಿ ಬಾಲಿಕಾ ಮರಿಯ ಚರ್ಚಿನ ವಿಚಾರಣೆಯ ಧರ್ಮಗುರು ಫಾ.ಪ್ರೇಮ್ ಲಾರೆನ್ಸ್ ಡಿಸೋಜ, ಮುಖಂಡರಾದ ಬಿ.ಶಿವರಾಮ ಶೆಟ್ಟಿ, ವರ್ತಕ ರೊನಾಲ್ಡ್ ಮೋನಿಸ್, ಧರ್ಮಗುರು ಫಾ. ತೋಮಸ್ ಕಲಘಟಗಿ, ಚರ್ಚಿನ ಐಸಿವೈಎಂ ಯುವ ಘಟಕ, ಕ್ರೈಸ್ತರ ಅಭಿವೃದ್ಧಿ ಸಂಘದ ಸದಸ್ಯರು ಹಾಗೂ ಕ್ರೈಸ್ತ ಭಕ್ತಾಧಿಗಳು, ಮಕ್ಕಳು ಹಾಜರಿದ್ದರು.


