October 17, 2026
;
IMG-20261014-WA0095

 

 

ಕೇರಳ ಮಾದರಿಯಲ್ಲಿ ರಾಜ್ಯ ಸರ್ಕಾರದಡಿ ಪ್ರತ್ಯೇಕ ತೋಟಗಾರಿಕಾ ನಿರ್ದೇಶನಾಲಯ ಸ್ಥಾಪನೆ,  ಪಿಎಂಎಫ್‍ಬಿವೈ ಅಡಿಯಲ್ಲಿ ತೋಟಗಾರಿಕಾ ಬೆಳೆಗಳನ್ನು ಸೇರ್ಪಡೆಗೊಳಿಸಬೇಕು.  ಅಭಿವೃದ್ಧಿ ಸಾಲಗಳ ಮೇಲಿನ ಶೇ. 0.5ಮುದ್ರಾಂಕ ಶುಲ್ಕ ಮನ್ನಾ ಮಾಡುವುದು, ಯಾಂತ್ರೀಕರಣಕ್ಕೆ ಹೆಚ್ಚಿನ ನೆರವು ನೀಡಬೇಕೆಂದು ಕೆಪಿಎ ರಾಜ್ಯ ಸಮ್ಮೇಳನ ಸರ್ಕಾರದ ಗಮನ ಸೆಳೆದಿದೆ.

ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಷನ್ಸ್ 68ನೆಯ ವಾರ್ಷಿಕ ಮಹಾಸಭೆ ಚಿಕ್ಕಮಗಳÀೂರು ನಗರ ಹೊರವಲಯದ ಸೆರಾಯ್ ಹೋಟೇಲ್ ಸಭಾಂಗಣದಲ್ಲಿ ಅಧ್ಯಕ್ಷ ಎಂ.ಸಲ್ಮಾನ್‍ಬಶೀರ್ ನೇತೃತ್ವದಲ್ಲಿ ಸೋಮವಾರ ನಡೆಯಿತು.  ಕಾಫಿ, ಚಹಾ, ಏಲಕ್ಕಿ, ಮೆಣಸು, ರಬ್ಬರ್ ಮತ್ತು ಅವಕಾಡೋ ಮತ್ತಿತರ ತೋಟಗಾರಿಕಾ ಕ್ಷೇತ್ರದ ಪ್ರಮುಖ ಸವಾಲುಗಳು ಹಾಗೂ ಬೇಡಿಕೆಗಳ ಕುರಿತಂತೆ ಸಮಗ್ರವಾಗಿ ಚರ್ಚಿಸಿತು.

ಪ್ರಧಾನಮಂತ್ರಿ ಫಸಲ್ ಭೀಮಾಯೋಜನೆಯಡಿಯಲ್ಲಿ ತೋಟಗಾರಿಕಾ ಬೆಳೆಗಳನ್ನು ಸೇರಿಸಿ ಸರ್ಕಾರದ ಸಹಾಯಧನದೊಂದಿಗೆ ಬೆಳೆವಿಮೆ ಪಡೆಯಲು ಅನುಕೂಲ ಕಲ್ಪಿಸಬೇಕೆಂದು ಭಾರತ ಸರ್ಕಾರವನ್ನು ಕೋರಲಾಗಿದೆ.  ಯಾಂತ್ರೀಕರಣ ಸಬ್ಸಿಡಿಗಳು, ಮೌಲ್ಯವರ್ಧನೆ ಮತ್ತು ಮರುನಾಟಿ ಕುರಿತು ಕೇಂದ್ರೀಕೃತ ನೀತಿಗಳನ್ನು ರೂಪಿಸಲು ಕೇರಳಾ ಮಾದರಿಯಲ್ಲಿ ಪ್ರತ್ಯೇಕ ತೋಟಗಾರಿಕಾ ನಿರ್ದೇಶನಾಲಯವನ್ನು ರಾಜ್ಯ ಸರ್ಕಾರದಡಿಯಲ್ಲಿ ಸ್ಥಾಪಿಸುವಂತೆ ಕೆಪಿಎ ಪ್ರಸ್ತಾವನೆ ಮಂಡಿಸಿದೆ.

ಏಕ ಕಿಟಕಿ ದೂರುಪರಿಹಾರ ವ್ಯವಸ್ಥೆ, ಯಾಂತ್ರೀಕರಣ ಮತ್ತು ಮರುನಾಟಿಗೆ ಹೆಚ್ಚುವರಿ ಸಹಾಯಧನ, ಹವಾಮಾನ ಸಂಬಂಧಿತ ವಿಮಾ ವ್ಯವಸ್ಥೆ, ಮಾರುಕಟ್ಟೆ ವಿಸ್ತರಣೆ ಮತ್ತು ಮೌಲ್ಯವರ್ಧನೆಗೆ ಅನುದಾನದ ಬೆಂಬಲವನ್ನು ಸಮ್ಮೇಳನ ಕೋರಿದೆ.  ಪಶ್ಚಿಮಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶ ಕರಡು ಅಧಿಸೂಚನೆಗಳಿಗೆ ನಿರಂತರವಾಗಿ ಔಪಚಾರಿಕ ಆಕ್ಷೇಪಣೆಗಳು ಮತ್ತು ರಚನಾತ್ಮಕ ಸಲಹೆಗಳನ್ನು ಮಾನ್ಯ ಮಾಡಬೇಕೆಂದು ಆಗ್ರಹಿಸಿದೆ.

ಮಾನವ ವನ್ಯಜೀವಿ ಸಂಘರ್ಷ ನಿರ್ವಹಣೆಗೆ ಹೆಚ್ಚುವರಿ ಅನುದಾನ, ನೀರುಕೊಯ್ಲಿ ಮತ್ತು ಸಂರಕ್ಷಣೆಗೆ ನೆರವು, ಮಲೆನಾಡುಜಿಲ್ಲೆಗಳಲ್ಲಿ ರಸ್ತೆಗಳ ದುರಸ್ಥಿ ಮತ್ತು ನಿರ್ವಹಣೆಗಾಗಿ ರಾಜ್ಯಸರ್ಕಾರವನ್ನು ಗಮನಸೆಳೆದಿರುವ ಕೆಪಿಎ ರಾಜ್ಯಸಮ್ಮೇಳನ, ತೋಟನಿರ್ವಹಣೆ ದುಬಾರಿಯಾಗಿರುವ ಹಿನ್ನಲೆಯಲ್ಲಿ ಯಾಂತ್ರೀಕರಣ ಸೇರಿದಂತೆ ಸ್ಪರ್ಧಾತ್ಮಕ ನಿರ್ವಹಣೆಗೆ ನೆರವು ನೀಡಬೇಕೆಂದು ಬೇಡಿಕೆ ಮಂಡಿಸಿದೆ.

ಕಾಫಿ ಮಂಡಳಿಯ ಕಾರ್ಯದರ್ಶಿ ಮತ್ತು ಸಿಇಓ ಎಂ.ಕುಮಾರರಾವ್ ಜ್ಯೋತಿ ಬೆಳಗುವ ಮೂಲಕ ಸಮ್ಮೇಳನ ಉದ್ಘಾಟಿಸಿ ಮಾತನಾಡಿ ಕಾಫಿಗೆ ಸಂಬಂಧಪಟ್ಟ ಎಲ್ಲ ಸಂಸ್ಥೆಗಳ ಸಹಯೋಗದೊಂದಿಗೆ ತೋಟಗಾರಿಕಾ ಕ್ಷೇತ್ರದ ಬಲವರ್ಧನೆಗೆ ಪ್ರಯತ್ನಿಸುತ್ತಿರುವುದಾಗಿ ನುಡಿದರು.  ಸಮ್ಮೇಳನದ ಅಭಿಪ್ರಾಯಗಳನ್ನು ಸಂಬಂಧಪಟ್ಟವರ ಗಮನಕ್ಕೆ ತರುವುದರ ಜೊತೆಗೆ ಬೆಳೆಗಾರರಿಗೆ ಹೆಚ್ಚಿನ ಆರ್ಥಿಕ ಬೆಂಬಲ ಒದಗುವಂತೆ ಪ್ರಯತ್ನಿಸುವುದಾಗಿ ಭರವಸೆಯಿತ್ತರು.

ಉಪಾಸಿ ಸಹಯೋಗದೊಂದಿಗೆ ಕೆಪಿಎ ತಾಂತ್ರಿಕ ಗೋಷ್ಠಿಗಳನ್ನು ಪವರ್ ಪಾಯಿಂಟ್‍ನೊಂದಿಗೆ ಆಯೋಜಿಸಲಾಗಿತ್ತು.  ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ವಿ.ವಿ. ಎಚ್‍ಓಡಿ ಡಾ.ಎಂ.ಎಸ್.ನಾಗರಾಜ್ ನೆಲದ ಮಣ್ಣು ಮತ್ತು ಹವಾಮಾನ ಸಮತೋಲನ ಕುರಿತಂತೆ ಸಂವಾದಿಸಿದರು.

ಉಪಾಸಿ ಕಾಫಿ ಉಪಸಮಿತಿ ಅಧ್ಯಕ್ಷ ಸಹದೇವ ಬಾಲಕೃಷ್ಣ ಸಂಚಾಲಕತ್ವದಲ್ಲಿ ಕಾಫಿ ಮತ್ತಿತರ ತೋಟಗಾರಿಕೆಯ ವಿವಿಧ ಮಗ್ಗಲುಗಳ ಬಗ್ಗೆ ವಿಚಾರ ವಿನಿಮಯ ನಡೆದಿದ್ದು ನಿಶಾಂತ್ ಆರ್.ಗುರ್ಜರ್, ಕೋಮಲಾಸಬ್ಲೆ ಮತ್ತು ಡಿ.ಎಸ್.ಶರವಣ ಪಾಲ್ಗೊಂಡಿದ್ದರು.

ಮುಂದಿನ ದಶಕದಲ್ಲಿ  ಕಾಫಿ ಉದ್ಯಮದ ಸ್ಥಿತಿಗತಿಗಳ ತಾಂತ್ರಿಕ ಬದಲಾವಣೆ ಕುರಿತಂತೆ ವರುಣ್‍ಮುಂದ್ರಾ ಬೆಳೆಗಾರರೊಂದಿಗೆ ಸಮಾಲೋಚನೆ ನಡೆಸಿದರು.

ಉಪಾಸಿ ಅಧ್ಯಕ್ಷ ಅಭಿಷೇಕಪೋದ್ದಾರ್  ಮಾತನಾಡಿದರು.  ಕೆಪಿಎ ಅಧ್ಯಕ್ಷ ಎಂ.ಸಲ್ಮಾನ್‍ಬಶೀರ್ ಸ್ವಾಗತಿಸಿ,  ಸಹದೇವ್ ನಿರೂಪಿಸಿ. ಉಪಾಧ್ಯಕ್ಷ ಎಂ.ಸಿ.ಕರಿಯಪ್ಪ ವಂದಿಸಿದರು.

 

 

Leave a Reply

Your email address will not be published. Required fields are marked *