October 22, 2026
;
mahisa

 

 

ಆಲ್ದೂರು ಅಂಬೇಡ್ಕರ್ ಹೋರಾಟ ವೇದಿಕೆ, ಮಹಿಷಾಸುರ ಬಂಧುತ್ವ ಸಮಿತಿ, ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಬುಧವಾರ ಪಟ್ಟಣದಲ್ಲಿ ಮಹಿಷಾಸುರ ಬಂಧುತ್ವ ಕಾರ್ಯಕ್ರಮ ನಡೆಯಿತು.

ಪಟ್ಟಣದ ಬ್ಯಾಂಕ್ ಆಫ್ ಬರೋಡ ಮುಂಭಾಗದಿಂದ ಮಹಿಷ ಮಂಡಲದ ಅರಸ ಮಹಿಷಾಸುರ ಬ್ಯಾನರ್ ಮತ್ತು ಬೇಸ್ ಬ್ಯಾಂಡ್ ಮೂಲಕ ಪ್ರಾರಂಭವಾದ ಮೆರವಣಿಗೆ ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ಪುತ್ತಳಿಗೆ ಮಾಲಾರ್ಪಣೆ ಮಾಡಿದ ಬಳಿಕ ಅಬ್ಬಾಸಿಯ ಬಯಲು ರಂಗಮಂದಿರದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿದ ಬಹುಜನ ಸಮಾಜ ಪಾರ್ಟಿ ಜಿಲ್ಲಾಧ್ಯಕ್ಷ ಪಿ.ಪರಮೇಶ್ವರರವರು ಮಾತನಾಡಿ ಈ ದೇಶದ ಮೂಲನಿವಾಸಿಗಳಾದ ದಲಿತರು ಮತ್ತು ಆದಿವಾಸಿಗಳು ನಮ್ಮ ಇತಿಹಾಸವನ್ನು ಅರಿಯದೆ ಪರಕೀಯ ರು ನಮ್ಮ ಮೇಲೆ ಹೇರಿರುವ ಶೋಷಣೆ ಸಂಸ್ಕೃತಿಯನ್ನು ನಮ್ಮದೇಯೆಂದು ಪರಿಭಾವಿಸಿಕೊಂಡು ಆಚರಿಸುತ್ತಿರುವುದು ನಮ್ಮ ದುರಂತವೆಂದರು.ಮಹಿಷಾಸುರ ನಮ್ಮ ಆದಿ ದ್ರಾವೀಡ ರಾಜನಾಗಿದ್ದು ಆತನ ಬಗ್ಗೆ ಕಪೋಲಕಲ್ಪಿತ ಮಿಥ್ಯೆಗಳನ್ನು ಪ್ರಚಾರ ಮಾಡಯತ್ತಿದ್ದಾರೆಂದು ಹೇಳಿದರು.

ಪ್ರಧಾನ ಭಾಷಣಕಾರರದ ವಸಂತಕುಮಾರ್ ಕೆ.ಜೆ ,ಸಹಾಯಕ ಪ್ರಾಧ್ಯಾಪಕರು ಕನ್ನಡ ವಿಭಾಗ ಐ.ಡಿ.ಎಸ್.ಜಿ ಕಾಲೇಜು ಚಿಕ್ಕಮಗಳೂರು ಇವರು ವಿಸ್ತಾರವಾಗಿ ಮಹಿಷಾಸುರ ದೊರೆಯ ಬಗ್ಗೆ ಮಾತನಾಡಿ ಮಹಿಷಾಸುರ ನಿಂದಾಗಿ ಯೇ  ಮಹಿಷಮಂಡಲ ಮೈಸೂರಾಯಿತುಯೆಂದರು.ಮಹಿಷಾಸುರನ ಆಳ್ವಿಕೆಯ ಕಾಲದಲ್ಲಿ ಕೃಷಿ ಮತ್ತು ಹೈನುಗಾರಿಕೆ ವಿಫುಲವಾಗಿತ್ತು ಇಂಥ ಸುಭಿಕ್ಷವಾದ ಆದಿದ್ರಾವಿಡ ದಲಿತ ರಾಜ್ಯವನ್ನು ಮೋಸದಿಂದ ವಶಮಾಡಿಕೊಂಡ ಅಂದಿನ  ದುರುಳರು ಮಹಿಷ ಒಬ್ಬ ರಾಕ್ಷಸ,ದುರುಳನೆಂದು ಸುಳ್ಳು ಕಥೆ ಹರಡಿ ಇದೇ ಸತ್ಯವೆಂದು ನಂಬಿಸಿ ದಲಿತ ಆದಿವಾಸಿಗಳು ಭೂಮಿ ಮತ್ತು ಅಧಿಕಾರವಂಚಿತರಾದೆವೆಂದರು.

ಅಂಬೇಡ್ಕರ್ ಹೋರಾಟ ವೇದಿಕೆ ಅಧ್ಯಕ್ಷ ಹೆಚ್, ನವರಾಜು ಪ್ರಾಸ್ತಾವಿಕವಾಗಿ ಮಾತನಾಡಿದರು.

ದೇವರಹಳ್ಳಿ, ಉಮೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ವ್ಯವಸ್ಥಾಪಕ ಸಮಿತಿಯ ಉಪಾಧ್ಯಕ್ಷ ಗಾಳಿ ಗಂಡಿ ಸುಂದರ್, ಕಾರ್ಯದರ್ಶಿ ಸುರೇಶ್, ಖಜಾಂಚಿ ಮಂಜಪ್ಪ, ಮುಖಂಡರುಗಳಾದ ದೋಣ ಗುಡಿಗೆ ನಾಗೇಶ್, ತುಡುಕೂರು ಯೋಗೇಶ್, ಹೆಡದಾಳು ಕುಮಾರ್, ಕಠಾರದಹಳ್ಳಿ ಗಣೇಶ್, ಬಿಎಸ್ಪಿ ಬ್ಲಾಕ್ ಸಮಿತಿ ಅಧ್ಯಕ್ಷ ಧರ್ಮೇಶ್, ಪದಾಧಿಕಾರಿಗಳಾದ ಚಂಡಗೋಡು ವಸಂತ್, ಮಲ್ಲಿಕಾರ್ಜುನ್, ದಲಿತ ಸಂಘಟನೆಗಳ ಮುಖಂಡರುಗಳು ಕಾರ್ಯಕರ್ತರಗಳು ಭಾಗವಹಿಸಿದ್ದರು.

 

 

Leave a Reply

Your email address will not be published. Required fields are marked *