ಶಿಶಿಲ ಬೈರಾಪುರ ರಸ್ತೆ ಅಭಿವೃದ್ಧಿಪಡಿಸ ಬೇಕೆಂಬುದು ಶಿಶಿಲ ,ಶಿಬಾಜೆ, ಅರಸಿನಮಕ್ಕಿ, ಹತ್ಯಡ್ಕ ಕೊಕ್ಕಡ ಗ್ರಾಮದ ಜನರ ಬಹಳ ವರ್ಷದ ಬೇಡಿಕೆ ಈ ಬಗ್ಗೆ ಸರಕಾರದ ಗಮನ ಸೆಳೆಯಲು ಅರಸಿನಮಕ್ಕಿಯಲ್ಲಿ ದಿನಾಂಕ 02/11/2026 ರಂದು ಬೃಹತ್ ಹಕ್ಕೊತ್ತಾಯ ಸಮಾವೇಶ ನಡೆಸುವುದಾಗಿ ನಿರ್ಣಯಿಸಲಾಯಿತು.
ಸಮಾಲೋಚನಾ ಸಭೆಯ ಅಧ್ಯಕ್ಷತೆಯನ್ನು ಕೆ ಜಿ ಗೋಖಲೆ ವಹಿಸಿದ್ದರು. ಬೈರಾಪುರ ಶಿಶಿಲ ರಸ್ತೆ ಹೋರಾಟ ಸಮಿತಿಯ ಅಧ್ಯಕ್ಷರಾದ ಜಿ ಹೆಚ್ ಹಾಲಪ್ಪಗೌಡ್ರು, ನಿವೃತ ಇಂಜಿನಿಯರ್ ಶಿವ ಪ್ರಕಾಶ್, ರಾಜ್ಯ ಜೆಡಿಎಸ್ ಕಾರ್ಯದರ್ಶಿ ನಿಡುವಾಳೆ ಚಂದ್ರು, ಮೊಯ್ದೀನ್, ಅರಸಿನಮಕ್ಕಿ, ಸಿ ಎ ಬ್ಯಾಂಕ್ ನಿರ್ದೇಶಕರಾದ ಧರ್ಮರಾಜ ಅಡ್ಕಾಡಿ, ಶಿಶಿಲ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸಂದೀಪ್ ಎ .ಎಸ್. ಶಿಶಿಲೇಶ್ವರ ದೇವಸ್ಥಾನ ಅಬಿವೃದ್ಧಿ ಸಮಿತಿ ಅಧ್ಯಕ್ಷ ಸೂರಜ್ ನೆಲ್ಲಿತಾಯ, ಚಾಮುಂಡೇಶ್ವರಿ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಕೆ ರಾಮಚಂದ್ರ, ಶಿಶಿಲೇಶ್ವರ ದೇವಸ್ಥಾನ ಆಡಳಿತ ಸಮಿತಿ ಸದಸ್ಯ ಶ್ರೀಧರ್ ರಾವ್, ನಿಡ್ಲೆ ಸೇವಸಹಕಾರಿ ಬ್ಯಾಂಕ್ ಅಧ್ಯಕ್ಷ ಧನಂಜಯ ಗೌಡ, ಉದ್ಯಮಿ ಕೆ ನರಸಿಂಹ ಗೌಡ,ಉಪಸ್ಥಿತರಿದ್ದರು,
ಇದೆ ಸಂದರ್ಭದಲ್ಲಿ ಹಕ್ಕೊತ್ತಾಯ ಸಮಿತಿ ರಚನೆ ಮಾಡಲಾಯಿತು, ಅಧ್ಯಕ್ಷ ರಾಗಿ ರಾಘವೇಂದ್ರ ನಾಯಕ್, ಕಾರ್ಯದರ್ಶಿ ಯಾಗಿ ಧರ್ಮರಾಜ ಅಡ್ಕಾಡಿ ಇವರನ್ನು ಆಯ್ಕೆ ಮಾಡಲಾಯಿತು ಉಳಿದಂತೆ ಶಿಶಿಲ, ಶಿಬಾಜೆ, ಹತ್ಯಡ್ಕ, ಕಳೆಂಜ, ರೇಕ್ಯಾ ಕೊಕ್ಕಡ ಗ್ರಾಮಗಳಿಂದ ಸಂಚಾಲಕರನ್ನು ಆಯ್ಕೆ ಮಾಡಲಾಯಿತು.



