ಶ್ರೀ ದುರ್ಗಾ ಸೇವಾ ಸಮಿತಿ ಮೂಡಿಗೆರೆ ವತಿಯಿಂದ ಆಯೋಜಿಸಿದ್ದ ಪಟ್ಟಣದಲ್ಲಿ ಆಯೋಜಿಸಿದ್ದ 23ನೇ ವರ್ಷದ ನವರಾತ್ರಿ ಉತ್ಸವದ ಅಂತಿಮ ದಿನ ಬುಧವಾರ ಸಂಜೆ ಶ್ರೀ ದುರ್ಗಾಮಾತೆಯ ವಿಗ್ರಹದ ವೈಭವದ ಮೆರವಣಿಗೆ, ದುಷ್ಟಶಕ್ತಿ ದಹನ ಹಾಗೂ ಮಹಿಳೆಯರ ನೃತ್ಯ ವಿಸರ್ಜನೆ ಸಂಭ್ರಮಕ್ಕೆ ಸಾಕ್ಷಿಯಾಯಿತು.
ನವರಾತ್ರಿ ಉತ್ಸವದ ಅಂಗವಾಗಿ ಶ್ರೀ ದುರ್ಗಾಮಾತೆಯ ವಿಗ್ರಹವನ್ನು ನಗರದ ಪ್ರಮುಖ ಬೀದಿಗಳಲ್ಲಿ ಮಂಗಳವಾದ್ಯ ಹಾಗೂ ಡಿಜೆ ಸಂಗೀತದೊಂದಿಗೆ ಮೆರವಣಿಗೆ ನಡೆಸಲಾಯಿತು.

ಪಟ್ಟಣದ ಲಯನ್ಸ್ ವೃತ್ತದಲ್ಲಿ ದುಷ್ಟಶಕ್ತಿ ದಹನ ಹಾಗೂ ಕಾರ್ಯಕ್ರಮದ ವೈಭವದ ಕ್ಷಣವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಮಂದಿ ಭಕ್ತರು ಸ್ಥಳದಲ್ಲಿ ಜಮಾಯಿಸಿದ್ದರು.
ಡಿಜೆ ಸಂಗೀತಕ್ಕೆ ಮಹಿಳೆಯರು ಭರ್ಜರಿಯಾಗಿ ಹೆಜ್ಜೆ ಹಾಕಿ ಸಂಭ್ರಮಿಸಿದರು. ಬಳಿಕ ದುರ್ಗಾಮಾತೆಯ ವಿಗ್ರಹವನ್ನು ಮೆರವಣಿಗೆಯ ಮೂಲಕ ಪಟ್ಟಣದ ಸುಂಡಿಕೆರೆ ಹಳ್ಳದಲ್ಲಿ ವಿಸರ್ಜನೆ ಮಾಡಲಾಯಿತು.


