November 17, 2026
;
IMG-20261115-WA0288

 

 

ಮಾದಕ ವ್ಯಸನದ ದುಷ್ಪರಿಣಾಮಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಿ, ವ್ಯಸನಮುಕ್ತ ಸಮಾಜ ನಿರ್ಮಿಸುವ ಉದ್ದೇಶದಿಂದ ಮುಹಿಯ್ಯುದ್ದೀನ್ ಜುಮ್ಮಾ ಮಸೀದಿ ವತಿಯಿಂದ ಭಾನುವಾರ ಜನಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಮಧ್ಯಾಹ್ನ 2.30ಕ್ಕೆ ಮಸೀದಿ ಆವರಣದಿಂದ ಆರಂಭಗೊಂಡ ಜಾಗೃತಿ ಜಾಥಾ ಬಣಕಲ್ ಪೊಲೀಸ್ ಠಾಣೆವರೆಗೆ ತೆರಳಿ ಮರಳಿ ಮಸೀದಿ ಆವರಣ ತಲುಪಿತು. ಬಳಿಕ ನಡೆದ ಸಭಾ ಕಾರ್ಯಕ್ರಮ ಸಂಜೆ 5 ಗಂಟೆಯವರೆಗೆ ನಡೆಯಿತು.

ಮಂಗಳೂರಿನ ಪ್ರೇರಕ ವಾಗ್ಮಿ ರಫೀಕ್ ಮಾಸ್ಟರ್, ಮೂಡಿಗೆರೆ ಪೊಲೀಸ್ ವೃತ್ತ ನಿರೀಕ್ಷಕ ರಾಜಶೇಖರ್, ಬಣಕಲ್ ಠಾಣಾಧಿಕಾರಿ ದಿಲೀಪ್ ಕುಮಾರ್, ಚಕ್ಕಮಕ್ಕಿಯ ಖಲಂದರಿಯ ಸಂಸ್ಥೆಯ ಪ್ರಾಂಶುಪಾಲ ಸಫ್ವಾನ್ ಫೈಝಿ ಹಾಗೂ ಆರೋಗ್ಯ ಇಲಾಖೆಯ ಇಮ್ರಾನ್ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾತನಾಡಿದರು.

ಮಾದಕ ವ್ಯಸನದಿಂದ ಆರೋಗ್ಯ, ಕುಟುಂಬ ಹಾಗೂ ಸಮಾಜದ ಮೇಲೆ ಉಂಟಾಗುವ ದುಷ್ಪರಿಣಾಮಗಳು, ಯುವಜನತೆ ವ್ಯಸನಗಳಿಂದ ದೂರವಿರಬೇಕಾದ ಅಗತ್ಯ ಮತ್ತು ಮಾದಕ ವಸ್ತುಗಳ ನಿಯಂತ್ರಣದಲ್ಲಿ ಸಾರ್ವಜನಿಕರ ಜವಾಬ್ದಾರಿಯ ಕುರಿತು ಅರಿವು ಮೂಡಿಸಲಾಯಿತು.

ಮುಹಿಯ್ಯುದ್ದೀನ್ ಜುಮ್ಮಾ ಮಸೀದಿ ಅಧ್ಯಕ್ಷ ಬಿ.ಎಂ. ಆಲಿ ಹಾಜಿ, ಬಣಕಲ್ ಹೋಬಳಿ ಮೀಲಾದ್ ಟ್ರಸ್ಟ್ ಅಧ್ಯಕ್ಷ ಝಕೀರ್ ಹುಸೈನ್, ಚಕ್ಕಮಕ್ಕಿ ಬದ್ರಿಯಾ ಜುಮ್ಮಾ ಮಸೀದಿ ಅಧ್ಯಕ್ಷ ಎ.ಸಿ. ಅಯೂಬ್ ಹಾಜಿ, ಬಣಕಲ್ ಸುನ್ನಿ ಜಮೀಯಾ ಮಸೀದಿ ಅಧ್ಯಕ್ಷ ಮೊಹಮ್ಮದಲಿ ಜಿ.ಜೆ., ಮಸೀದಿ ಉಪಾಧ್ಯಕ್ಷ ಬಿ.ಎ. ಉಮರ್, ಕಾರ್ಯದರ್ಶಿ ಫಾರೂಕ್ ಸೇರಿದಂತೆ ಧಾರ್ಮಿಕ ಮುಖಂಡರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

 

 

Leave a Reply

Your email address will not be published. Required fields are marked *