ಸ್ತ್ರೀ ಎಂದರೆ ಅಷ್ಟೇ ಸಾಕೇ, ಎದೆ ತುಂಬಿ ಹಾಡಿದೆನು ಅಂದು, ಬೆಳಗು ಬಾ ಹಣತೆ, ಕಾಣದ ಕಡಲಿಗೆ ಹಂಬಲಿಸಿದ ಮನ, ಹಾಡು ಹಳೇಯದಾದರೇನು-ಭಾವ ನವನವೀನ ಎಂಬ ಗೀ ತೆಗಳು ಗಾಯಕರ ಕಂಠದಲ್ಲಿ ಮೂಡಿಬಂದು ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲ್ಲಿ ನಾದ ಚೈತನ್ಯ ಗೀತಗಾಯ ನ ಸಂಪೂರ್ಣ ಯಶಸ್ವಿಗೊಂಡಿತು.
ಚಿಕ್ಕಮಗಳೂರು ನಗರದ ಕುವೆಂಪು ಕಲಾಮಂದಿರದಲ್ಲಿ ಶುಕ್ರವಾರ ಸಂಜೆ ಸಾಂಸ್ಕøತಿಕ ಯುವ ಕಲಾ ವೇದಿಕೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಆಶ್ರಯ ಫೌಂಡೇಷನ್ ಸಹಯೋಗದಲ್ಲಿ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಜನ್ಮ ಶತಮಾನೋತ್ಸವ ಹಿನ್ನೆಲೆ ಹಾಡು ಹಳೆಯದಾದರೇನು ಭಾವ ನವನವೀನ ಶೀರ್ಷಿಕೆಯಡಿ ನಡೆದ ನಾದ ಚೈತನ್ಯ ಕಾರ್ಯಕ್ರಮವು ಸುಂದರವಾಗಿ ಮೂಡಿಬಂದಿತು.
ರೇಖಾಪ್ರೇಮ್ಕುಮಾರ್, ಹಿರೇನಲ್ಲೂರು ಶ್ರೀನಿವಾಸ್, ದಿನಕರ್, ದಿವ್ಯಾಂಗ ಜಯಣ್ಣ, ಪುಟಾಣಿ ಶ್ವೇ ತ, ಲಕ್ಷ್ಮೀಶ್, ಡಾ.ಅನಗ ಸೇರಿದಂತೆ ನಾದ ಚೈತನ್ಯ ತಂಡದ ಪುಟಾಣಿ ಮಕ್ಕಳ ಸುಮಧುರ ಕಂಠದಲ್ಲಿ ಹಲವಾರು ಗೀತೆಗಳು ಹಾಡುವ ಮುಖೇನಾ ಕಲಾಸಕ್ತರನ್ನು ಆಸನದಲ್ಲಿ ಗಟ್ಟಿಯಾಗಿ ಹಿಡಿದಿಟ್ಟುಕೊಂಡಿತು.
ಒಂದೊಂದು ಗೀತೆಗಳ ಸಾಲುಗಳನ್ನು ಪ್ರೇಕ್ಷಕರನ್ನು ಅತ್ಯಂತ ಋಷಿಯಿಂದ ಆನಂದಿಸಿದರು. ವಿಶೇಷ ವಾಗಿ ಪುಟಾಣಿ ಮಕ್ಕಳ ಹಾಡುಗಳು ಕೆಲವರಲ್ಲಿ ಆನಂದದ ಕಣ್ಣೀರು ಚಿಮ್ಮಿತು. ನಾದ ಚೈತನ್ಯ ಕಾರ್ಯಕ್ರಮವು ಕೊನೆವರೆಗೂ ನೂರಾರು ಕಲಾಭಿಮಾನಿಗಳು ಎಲ್ಲೂ ಅಲುಗಾಡದಂತೆ ಗೀತಗಾಯನ ಕಾರ್ಯಕ್ರಮವು ಸಂ ಭ್ರಮದ ಮನೆಮಾಡಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸುಗಮ ಸಂಗೀತ ಗಂಗಾದ ಅಧ್ಯಕ್ಷ ಡಾ|| ಜೆ.ಪಿ.ಕೃಷ್ಣೇಗೌಡ ರವಿ ಕಾಣದನ್ನ, ಕವಿ ಕಾಣುವನು ಎಂಬುದಕ್ಕೆ ಜಿ.ಎಸ್.ಶಿವರುದ್ರಪ್ಪ ಸಾಹಿತ್ಯ ಹೇಳಿ ಮಾಡಿದಂತಿದೆ. ಕನ್ನಡದ ರಾಷ್ಟ್ರಕವಿಗಳಲ್ಲೊಬ್ಬರು ಶಿವರುದ್ರಪ್ಪನವರು. ವಿಮರ್ಶಕ, ಕವಿಗಳಾಗಿ ಕನ್ನಡ ಸಾಹಿತ್ಯಕ್ಕೆ ಅವರ ಕೊಡುಗೆ ಅ ಪಾರವಾಗಿದೆ ಎಂದರು.
ಪ್ರಾಚೀನ ಕನ್ನಡ ಸಾಹಿತ್ಯವನ್ನು ಸಂಧಾನ ಮಾಡಿದ ವಿದ್ವಾಂಸರ ತಂಡದಲ್ಲಿ ಜಿಎಸ್ಎಸ್ನವರು ಪ್ರ ಮುಖರಾಗಿದ್ದರು. ಇವರ ಸಂಪಾದಕತ್ವದಲ್ಲಿ ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆ ಆರು ಸಂಪುಟಗಳಲ್ಲಿ ಪ್ರಕಟ ಗೊಂಡಿರುವುದು ಕನ್ನಡ ಸಾಹಿತ್ಯ ಚರಿತ್ರೆಗೆ ಮಹತ್ವದ ಕೊಡುಗೆಯಾಗಿದೆ ಎಂದು ಹೇಳಿದರು.
ಶಿವರುದ್ರಪ್ಪನವರು ಸಮನ್ವಯ, ನವಯುಗ ಮತ್ತು ಅಂತರಾಳದ ಕವಿಗಳಾದವರು. ಕುವೆಂಪು ಅವರ ಅತ್ಯಂತ ಆಪ್ತ ಶಿಷ್ಯರು. ಅವರ ಮಾರ್ಗದರ್ಶನದಲ್ಲಿ ಡಾಕ್ಟರೇಟ್ ಪಡೆದ ಬಳಿಕ ತಿರುಗಿ ನೋಡಿದ ಉದಾಹ ರಣೆ ಇಲ್ಲ. ಉತ್ತಮ ಪ್ರಾಧ್ಯಾಪಕ, ವಿಮರ್ಶಕ, ನಾಟಕಕಾರರಾಗಿ, ರಚನೆಕಾರರಾಗಿ ಹೆಸರು ಗಳಿಸಿದ ಸುಪ್ರ ಸಿದ್ಧ ಕವಿ ಎಂದು ತಿಳಿಸಿದರು.
1984ರಲ್ಲಿ ನಾಡಿನ ಶ್ರೇಷ್ಟ ರಾಜ್ಯೋತ್ಸವ ಪ್ರಶಸ್ತಿ ಭಾಜನರಾಗುವ ಮೂಲಕ ನೂರಾರು ಪ್ರಶಸ್ತಿಗಳ ಒಡೆ ಯರಾದವರು. ಅವರ ತಂದೆ ಶಾಂತವೀರಪ್ಪ, ತಾಯಿ ವೀರಮ್ಮನವರು. ಸಾಮಗಾನ, ಚೆಲುವು-ಒಲವು, ಎದೆ ತುಂಬಿ ಹಾಡಿದೆನು ಸೇರಿದಂತೆ ಅನೇಕ ಕೃತಿಗಳು ಶಿವರುದ್ರಪ್ಪನವರು ರಚಿನೆಗಳು ಎಂದರು.
ಆಶ್ರಯ ಫೌಂಡೇಷನ್ ಸಂಸ್ಥಾಪಕಿ ಡಾ. ವರ್ಷ ಅಭಿಷೇಕ್ ಮಾತನಾಡಿ ನೂರಾರು ಕೃತಿಗಳ ಮುಖೇ ನಾ ಸಮಾಜಕ್ಕೆ ಶಿವರುದ್ರಪ್ಪನವರು ಅರ್ಥವನ್ನು ಬಿಚ್ಚಿಟ್ಟಿರುವ ಅಪರೂಪದ ಕವಿ. ಅಕ್ಕ-ಪಕ್ಕದಲ್ಲಿ ದೊರಕುವ ಪ್ರೀತಿ, ವಿಶ್ವಾಸ ಎಲ್ಲೋ ಹುಡುಕದೇ, ಅವರಲ್ಲಿಯೇ ಭಗವಂತನನ್ನು ಕಾಣಬೇಕು ಎಂಬುವ ಸಂದೇಶ ನೀಡಿ ದವರು ಎಂದು ಹೇಳಿದರು.
ಜೀವನದ ಸಾರ ಎಲ್ಲರೊಂದಿಗೆ ಹೊಂದಿಕೊಂಡೇ ಹೋಗುವುದೇ ಹೊರತು ಅಹಂನಿಂದಲ್ಲ ಎಂಬ ನಾಲ್ಕು ಸಾಲುಗಳಲ್ಲಿ ಶಿವರುದ್ರಪ್ಪ ನೀಡಿದ್ದಾರೆ. ಅವರ ಪ್ರತಿಯೊಂದು ಸಾಲಿನಲ್ಲೂ ಸಮಾಜಕ್ಕೆ ತಿಳಿಸುವ ಆಳವಾದ ಸಂದೇಶ ಹಾಗೂ ಅರ್ಥವಿದೆ. ಕುವೆಂಪುರವರ ಅನುಯಾಯಿಗಳಾಗಿ, ದೇವರೆಂದೇ ಭಾವಿಸಿಕೊ ಂಡಿದ್ದರು ಎಂದರು.
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದ ನಾದ ಚೈತನ್ಯ ಅಧ್ಯಕ್ಷ ಸಿ.ಆರ್.ಪ್ರೇಮ್ಕುಮಾರ್ ಕವಿತೆ ಬರೆಯುವುದು ವ್ಯಕ್ತಿಯ ಮನಸ್ಸಿನೊಳಗಿನ ಭಾವನೆಗಳನ್ನು ಮತ್ತು ನೋಡುವ ದೃಷ್ಟಿಕೋನ ಬದಲಾಯಿಸಿ ಕೊಳ್ಳಲು ಎಂದು ಜಿಎಸ್ಎಸ್ ನಂಬಿದ್ದರು. ಈ ಮಹಾಚೇತನ ನಾಡಿನ ಶ್ರೇಷ್ಟರಾಗಿ ನಮ್ಮೊಳಗಿರುವುದು ಪ್ರತಿ ಕನ್ನಡಿಗರಿಗೂ ಹೆಮ್ಮೆಯ ವಿಷಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ರಮೇಶ್, ನಾದಚೈತನ್ಯ ಸದಸ್ಯರಾದ ಪ್ರದೀಪ್, ಮ್ಯೂಸಿಕಲ್ ವಿಭಾಗದಲ್ಲಿ ಮೋಹನ್ ತಂಡ, ಕೀಬೋರ್ಡ್ನಲ್ಲಿ ನಾಗಭೂಷಣ್, ವಕೀಲೆ ಅರುಂಧತಿ ಸೇ ರಿದಂತೆ ಮುಂತಾದವರು ಉಪಸ್ಥಿತರಿದ್ದರು.


