ನವೆಂಬರ್ 19 ಗುರುವಾರ ಬೆಳಿಗ್ಗೆ 11 ಗಂಟೆಗೆ. ಮೂಡಿಗೆರೆ ಪಟ್ಟಣದ ಎಂಜಿ ರಸ್ತೆಯ ಹೃದಯ ಭಾಗದಲ್ಲಿ ಟಿಎಪಿಸಿಎಂಎಸ್ ಸಂಸ್ಥೆಯ ವಾಣಿಜ್ಯ ಮಳಿಗೆ ಮತ್ತು ಆಡಳಿತ ಕಚೇರಿ ಕಟ್ಟಡದ ಗುದ್ದಲಿ ಪೂಜೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಧ್ಯಕ್ಷ ಎಂ.ಎಲ್. ಕಲ್ಲೇಶ್ ಮಾಕೋನಹಳ್ಳಿ ತಿಳಿಸಿದ್ದಾರೆ.

ಅವರು ಹೇಳಿಕೆಯಲ್ಲಿ ತಿಳಿಸಿ. ಸುಮಾರು 2. 65 ಕೋಟಿ ರೂ ವೆಚ್ಚದಲ್ಲಿ 3 ಅಂತಸ್ತು ಹೊಂದಿರುವ ಈ ಕಟ್ಟಡದಲ್ಲಿ 22 ಅಂಗಡಿ ಮಳಿಗೆಗಳು ಸೇರಿದಂತೆ ಆಡಳಿತ ಕಚೇರಿಯನ್ನು ನಿರ್ಮಿಸಲಾಗುತ್ತಿದ್ದು. ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಿ ಟಿ ರವಿ ಗುದ್ದಲಿ ಪೂಜೆ ನೆರವೇರಿಸಲಿದ್ದು. ಶಾಸಕಿ ನಯನಾ ಮೋಟಮ್ಮ, ಮಾಜಿ ಉಪಸಭಾಪತಿ ಪ್ರಾಣೇಶ್. ಡಿಸಿಸಿ ಬ್ಯಾಂಕ್ ನಿರ್ದೇಶಕ ಹಳಸೆ ಶಿವಣ್ಣ. ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಜಿ.ಕೆ. ದಿವಾಕರ್. ಟಿಎಪಿಸಿಎಂಎಸ್ ಉಪಾಧ್ಯಕ್ಷ ಗಣೇಶ್ ಕೆಸವಳಲು, ಆಡಳಿತ ಮಂಡಳಿಯ ನಿರ್ದೇಶಕರು. ಹಿರಿಯ ಸಹಕಾರಿಗಳು. ಮಾಜಿ ಅಧ್ಯಕ್ಷರು. ಸಹಕಾರಿ ಸಂಘಗಳ ನಿರ್ದೇಶಕರು. ಶೇರುದಾರರು ಮತ್ತು ಸಾರ್ವಜನಿಕರು, ಸಿಬ್ಬಂದಿ ವರ್ಗ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.


