ಮಲೆನಾಡು ಮತ್ತು ತುಳುನಾಡ ಸಂಪರ್ಕ ಸೇತು ಶಿಶಿಲ ಭೈರಾಪುರ ರಸ್ತೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಹಾಗೂ ಸ್ಥಳೀಯರೊಂದಿಗೆ ಚರ್ಚಿಸಿ ಕೇಂದ್ರ ಸರ್ಕಾರ ಕ್ಕೆ ವರದಿ ಸಲ್ಲಿಸಲು ಕರ್ನಾಟಕ ರಾಜ್ಯ ಗ್ರಾಮೀಣಾ ರಸ್ತೆ ಅಭಿವೃದ್ದಿ ಸಂಸ್ಥೆ ಯೊಂದಿಗೆ ತಕ್ಷಣವೇ ಮಾತನಾಡಿ ಡಿಟೇಲ್ ಡಿಪಿಆರ್ ಕೇಂಧ್ರಕ್ಕೆ ಸಲ್ಲಿಸಲು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿದರು.
ಮಂಗಳವಾರ ಸಂಜೆ ಬೈರಾಪುರಕ್ಕೆ ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಿ, ಸ್ಥಳೀಯರ ಸಮಸ್ಯೆಗಳನ್ನು ಆಲಿಸಿ, ರಸ್ತೆ ಅಭಿವೃದ್ಧಿಯ ಅಗತ್ಯತೆ ಹಾಗೂ ಜನರ ಬಹುದಿನಗಳ ಬೇಡಿಕೆಯ ಕುರಿತು ಚರ್ಚಿಸಿದರು. ವಿಸ್ತ್ರುತ ಯೋಜನೆ ಬಂದ ನಂತರ ಕೇಂದ್ರ ಸರ್ಕಾರದಿಂದ ಇದಕ್ಕೆ ಅನುಮೋದನೆ ಹಾಗೂ ಅನುಧಾನ ಕೊಡಿಸಬೇಕೆಂದು ನಾನು ಕೇಂದ್ರ ಗ್ರಾಮೀಣ ಮಂತ್ರಿಗಳೊಂದಿಗೆ ಚರ್ಚಿಸಿಸುವುದಾಗಿ ತಿಳಿಸಿದರು. ಕೇಂದ್ರ ಸರ್ಕಾ ರದ ಮಂತ್ರಿಯ ಮೇರೆಗೆ ಪ್ರಸ್ತಾವಬಂದಿದ್ದು. ರಾಜ್ಯ ಸರ್ಕರವು ಸಹಕರಿ ಸಿದ್ದು. ಕೆಆರ್‍ಡಿಎಲ್ ಗೆ ಪ್ರಸ್ತಾವನೆ ಬಂದ ನಂತರ ನಾನು ಮುಂದಿನ ಕ್ರಮಗಳನ್ನು ಅನುಧನವನ್ನು ಒದಗಿಸುವ ಬಗ್ಗೆ. ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಅನುಧಾನ ಒದಗಿಸಲು ಅವಕಾಶ ಮಾಡಿಕೊಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಮುಖ್ಯ ಮಂತ್ರಿ ಗ್ರಾಮೀಣಾ ಯೋಜನೆ ಯಡಿಯಲ್ಲಿ 16 ಸಾವಿರದ 500 ಕೋಟಿಯಲ್ಲಿ ಮೂಡಿಗೆರೆ ಕ್ಷೇತ್ರಕ್ಕೆ ತಾಲ್ಲೂಕಿಗೆ 89 ಕೋಟಿ ಬಂದಿದ್ದು ಅದರಲ್ಲಿ ಎಲ್ಲಾ ಹಳೆಯ ರಸ್ತೆ ಅಭಿವೃದ್ದಿ ಮಂಜೂರಾಗಿದ್ದು, ಶಿಶಿಲಾ – ಬೈರಾಪುರ ಕಚ್ಚಾ ಗ್ರಾಮೀಣಾ ರಸ್ತೆಗೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಗಡಿಯವರೆಗೂ 11 ಕೋಟಿ ಮಂಜುರಾಗಿದ್ದು, ಆನಂತರದಲ್ಲಿ ಮೂಡಿಗೆರೆ ಗಡಿಯಿಂದ ಬೆಳ್ತಂಗಡಿ ಕ್ಷೇತ್ರದ ಶಿಶೀಲಾ ದೇವಾಸ್ಥಾನದ ರಸ್ತಯ ನಿರ್ವಹಣೆಗೆ ಒಟ್ಟು 20 ಕೋಟಿ ಮಂಜೂರಾಗಿದ್ದು ಮುಖ್ಯಮಂತ್ರಿಗಳು ಮಲೆನಾಡು ಮತ್ತು ತುಳು ನಾಡ ಸಂಪರ್ಕ ಸೇತು ರಸ್ತೆಗೆ ಸೇರಿಸಲು ಸೆ.18 ರ ಕ್ಯಾಬಿನೆಟ್ ನಲ್ಲಿ ತಾವು ನೀಡಿದ ಮಾಹಿತಿಯನ್ನು ಪರಿಶೀಲಿಸಿ ಬಿಡುಗಡೆ ಮಾಡಿದ್ದು ಅಭಿನಂದನಿಯವಾಗಿದೆ ಎಂದು ಗೃಹ ಮಂಡಲಿಯ ಮಾಜಿ ಅಧ್ಯಕ್ಷ ಜಿ.ಹೆಚ್. ಹಾಲಪ್ಪ ಗೌಡ ಮತ್ತು ನಿವೃತ್ತ ಅಭಿ ಯಂತರ ಹೆಚ್.ಎಂ.ಶಿವಪ್ರಕಾಶ್ ತಿಳಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಬಿ.ಕೆ. ಲಕ್ಷ್ಮಣಕುಮಾರ್, ಬಿಜೆಪಿ ಮಂಡಲ ಅಧ್ಯಕ್ಷ ಗಜೇಂದ್ರ ಕೊಟ್ಟಿಗೆಹಾರ, ದೀಪಕ್ ದೊಡ್ಡಯ್ಯ ಜೆ.ಎಸ್.ರಘು, ವಿಭಾ ಸುಶ್ಮಾ, ಪ್ರಸನ್ನ ಕೃಷ್ಣಪ್ಪ ಸೇರಿದಂತೆ ಊರುಬಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾಗೂ ಬೈರಾಪುರ ಗ್ರಾಮದ ವಿವಿಧ ಪಕ್ಷಗಳ ಮುಖಂಡರು, ಗ್ರಾಮಸ್ಥರು ಉಪಸ್ಥಿತರಿದ್ದರು


