November 25, 2026
;
24Mudigere3A

 

 

ಬೇಲೂರು ಭಾಗದಿಂದ ಮೂಡಿಗೆರೆ ತಾಲೂಕಿನತ್ತ ಕಾಡಾನೆಗಳ ಹಿಂಡನ್ನು ಓಡಿಸುತ್ತಿರುವ ಅರಣ್ಯ ಇಲಾಖೆಯ ಆಪರೇಷನ್ ಗಜ ಕಾರ್ಯಾಚರಣೆಗೆ ತೀವ್ರ ವಿರೋಧ ವ್ಯಕ್ತಪಡಿಸಿ, ಕಾಂಗ್ರೆಸ್ ಕಾರ್ಯಕರ್ತರು ಮೂಡಿಗೆರೆ ಪಟ್ಟಣದ ಅರಣ್ಯ ಇಲಾಖೆ ಕಚೇರಿ ಮುಂಭಾಗದಲ್ಲಿ ಮಂಗಳವಾರ  ಪ್ರತಿಭಟನೆ ನಡೆಸಿದರು.

ಸರಕಾರದ ಸಚಿವರು ಅರಣ್ಯ ಇಲಾಖೆ ಅಧಿಕಾರಿಗಳು  ಶಾಸಕರಾದ ನಯನ ಮೊಟಮ್ಮ, ಎಚ್.ಡಿ.ತಮ್ಮಯ್ಯ , ಟಿ.ಡಿ.ರಾಜೇಗೌಡ,  ಶ್ರೀನಿವಾಸ್  ಇವರ ಗಮನಕ್ಕೆ ಬಾರದೆ ಭದ್ರಾ ಅಭಯರಣ್ಯಕ್ಕೆ ಕಾಡಾನೆಗಳನ್ನು ಭದ್ರಾ ಅಭಯಾರಣ್ಯಕ್ಕೆ ಅಟ್ಟುವ  ಕಾರ್ಯವನ್ನು  ರಾತ್ರೋ ರಾತ್ರಿ ಮಾಡಿರುವುದರಿಂದ ಆ ಭಾಗದ ಬೆಳೆಗಾರರು, ಸಾರ್ವಜನಿಕರು ಭಯದಲ್ಲಿ ಇರುವಂತಾಗಿದೆ. ಬೇಲೂರಿನಿಂದ ಕಾಡಾನೆಗಳನ್ನು ತತ್ಕೊಳ ಅರಣ್ಯ ಪ್ರದೇಶದತ್ತ ಅಟ್ಟುತ್ತಿರುವುದರಿಂದ ಸ್ಥಳೀಯ ರೈತರು ಮತ್ತು ಗ್ರಾಮಸ್ಥರಿಗೆ ತೀವ್ರ ತೊಂದರೆಯಾಗುತ್ತಿದೆ. ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ನಮ್ಮ ಶಾಸಕರು ರಾಜೀನಾಮೆ ನೀಡುವಂತಾಗಿದೆ  ಕೂಡಲೇ ಆನೆಗಳನ್ನು ವಾಪಾಸು ಕಳಿಸಬೇಕೆಂದು ಕಾಂಗ್ರೆಸ್ ಕಾರ್ಯಕರ್ತರು ಒತ್ತಾಸಿದರು.

ಹಾಸನ ಜಿಲ್ಲೆಗೆ ಹೊಂದಿಕೊಂಡಿರುವ ಬಿಸ್ಲೆ, ನಾಗರಹೊಳೆ, ಬಂಡೀಪುರ ಅಭಯಾರಣ್ಯಕ್ಕೆ ಕಾಡಾನೆಗಳನ್ನು ಒಡಿಸುವುದನ್ನು  ಬಿಟ್ಟು ಮೂಡಿಗೆರೆ ತತ್ಕೊಳ ಮುಖಾಂತರ ಭದ್ರ ಅಭಯರಣ್ಯಕ್ಕೆ  ಓಡಿಸುವಾಗ ಎಷ್ಟು ಗ್ರಾಮ ಹಾಗೂ ಜನಪ್ರದೇಶ ಸಿಗುತ್ತದೆ ಎಂಬುದನ್ನು ಯೋಚಿಸಬೇಕಿತ್ತೆಂದು ಆಕ್ರೋಶ ವ್ಯಕ್ತಪಡಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರವಿ, ಅಲ್ದೂರು ಬ್ಲಾಕ್ ಅಧ್ಯಕ್ಷ ಮುದಶಿರ್,  ಕಳಸ ಬ್ಲಾಕ್ ಅಧ್ಯಕ್ಷ  ಶ್ರೇಣಿಕ್, ಗ್ಯಾರಂಟಿ ಸಮಿತಿ ಅಧ್ಯಕ್ಷ  ಸಿ.ಬಿ.ಶಂಕರ್, ವಿವಿಧ ಹೋಬಳಿ ಅಧ್ಯಕ್ಷರುಗಳು ಸೇರಿದಂತೆ ಪಕ್ಷದ ಅನೇಕ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

 

 

Leave a Reply

Your email address will not be published. Required fields are marked *