aranya 4

 

 

ಜಿಲ್ಲೆಯ ಸಾರಗೋಡು ಮೀಸಲು ಅರಣ್ಯ ಪ್ರದೇಶದಲ್ಲಿ ಅತಂತ್ರ ಜೀವನ ನಡೆಸುತ್ತಿದ್ದ 18 ಕುಟುಂಬಗಳಿಗೆ ಅರಣ್ಯರೋಧನದಿಂದ ಮುಕ್ತಿದೊರೆಯುವ ಕಾಲ ಕೂಡಿಬಂದಿದೆ.

ಮೂಡಿಗೆರೆ ತಾಲ್ಲೂಕಿನ ಸಾರಗೋಡು ಮೀಸಲು ಅರಣ್ಯ ವ್ಯಾಪ್ತಿಯ ಬೈರಿಗದ್ದೆ, ಮಂಡುಗುಳಿಹರ ನಿವಾಸಿಗಳು ದಟ್ಟ ಅರಣ್ಯದ ನಡುವೆ ಮನೆ ಮತ್ತು ಜಮೀನು ಹೊಂದಿದ್ದರು. ಅಲ್ಲಿ ಬದುಕು ನಡೆಸಲು ಸಾಧ್ಯವಿಲ್ಲ ಎಂದು ತಮ್ಮನ್ನು ಇಲ್ಲಿಂದ ಬೇರೆಡೆಗೆ ಸ್ಥಳಾಂತರಿಸಿ ಎಂದು ಒತ್ತಾಯಿಸುತ್ತಿದ್ದರು.

ಕಳೆದ 15 ವರ್ಷಗಳಿಂದ ತಮ್ಮನ್ನು ಈ ನರಕಸದೃಶ ಬದುಕಿನಿಂದ ಬಿಡುಗಡೆ ಮಾಡಿ ಎಂದು ಸರ್ಕಾರಕ್ಕೆ ಅವಲತ್ತುಕೊಳ್ಳುತ್ತಿದ್ದ 18 ಬಡ ಕುಟುಂಬಗಳ ಬೇಡಿಕೆಗೆ ಒಂದು ಹಂತದ ಸ್ಪಂದನೆ ದೊರೆತಿದೆ.

ಇವರ ಪುನರ್ವಸತಿ ಬೇಡಿಕೆಯ ಕಡತ ಸರ್ಕಾರಿ ಕಛೇರಿಗಳಲ್ಲಿ ದೂಳುಹಿಡಿಯುತ್ತ ಕುಳಿತ್ತಿದ್ದವು. ಇದರ ಬಗ್ಗೆ ಹಿಂದಿನಿಂದಲೂ ಅರಣ್ಯ ಮತ್ತು ಕಂದಾಯ ಅಧಿಕಾರಿಗಳಿಂದ ತೀವ್ರ ನಿರ್ಲಕ್ಷ್ಯ ವಹಿಸಲಾಗಿತ್ತು.

ಇದರಿಂದ ರೋಸಿಹೋಗಿದ್ದ ಇಲ್ಲಿನ ನಿವಾಸಿಗಳು ಬಿ.ಜೆ.ಪಿ. ಮುಖಂಡ, ಭದ್ರ ಇಕೋ ಕನ್ಸರ್ವೇಷನ್ ಫೌಂಡೇಷನ್ ಅಧ್ಯಕ್ಷ, ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಬಿ.ಜೆ.ಪಿ. ಟಿಕೇಟ್ ಆಕಾಂಕ್ಷಿ

ಡಾ.ಶಿವಪ್ರಸಾದ್

ಡಾ. ಶಿವಪ್ರಸಾದ್ ಅವರ ಮಾರ್ಗದರ್ಶನದಲ್ಲಿ ಚಿಕ್ಕಮಗಳೂರು ಜಿಲ್ಲಾಧಿಕಾರಿ ಕೆ.ಎನ್. ರಮೇಶ್ ಅವರನ್ನು ಕಂಡು ತಮ್ಮ ನೋವನ್ನು ಹೇಳಿಕೊಂಡಿದ್ದರು.

ಇವರ ಸಮಸ್ಯೆಯನ್ನು ಸಾವದಾನವಾಗಿ ಆಲಿಸಿದ ಜಿಲ್ಲಾಧಿಕಾರಿಗಳು ಈಗ ಒಂದು ಹಂತದ ಸ್ಪಂದನೆ ನೀಡಿರುತ್ತಾರೆ. ಸಾರಾಗೋಡು ಮೀಸಲು ಅರಣ್ಯದಿಂದ ನಿರಾಶ್ರಿತರಾಗಿ ಹೊರಬರುವ ಈ ಕುಟುಂಬಗಳಿಗೆ ಪರ್ಯಾಯ ಭೂಮಿ ನೀಡುವ ಪ್ರಸ್ತಾಪನೆಗೆ ಸಹಿ ಹಾಕಿ ಆದೇಶ ನೀಡಿರುತ್ತಾರೆ.

ಮೂಡಿಗೆರೆ ತಾಲ್ಲೂಕು ಗೋಣಿಬೀಡು ಹೋಬಳಿ ಜಿ.ಅಗ್ರಹಾರದ ಸ.ನಂ. 825ರಲ್ಲಿ 16 ಎಕರೆ ಮತ್ತು ಕಸಬಾ ಹೋಬಳಿ ಜೋಗಣ್ಣಕೆರೆ ಗ್ರಾಮದ ಸ.ನಂ.195ರಲ್ಲಿ 6 ಎಕರೆ ಸರ್ಕಾರಿ ಜಮೀನನನ್ನು ಅರಣ್ಯ ಇಲಾಖೆಗೆ ವರ್ಗಾಯಿಸಿ ಅದನ್ನು ಸಾರಗೋಡು ಮೀಸಲು ಅರಣ್ಯದಿಂದ ನಿರ್ವಶಿತರಾಗುವ 18 ಕುಟುಂಬಗಳಿಗೆ ಹಂಚುವ ಉದ್ದೇಶಕ್ಕೆ ಬಳಸಬೇಕೆಂದು ಆದೇಶ ಮಾಡಿರುತ್ತಾರೆ.

ಈ ವಿಚಾರವಾಗಿ ದರ್ಪಣ ಪತ್ರಿಕೆಯೂ ಕಳೆದ ಎರಡು ತಿಂಗಳಿಂದ ಸಮಸ್ಯೆಗೆ ಬೆಳಕು ಚೆಲ್ಲಿ ವರದಿಗಳನ್ನು ಪ್ರಕಟಿಸಿತ್ತು.

ಸಂತ್ರಸ್ತ ಕುಟುಂಬದ ಸದಸ್ಯರು ಡಾ. ಶಿವಪ್ರಸಾದ್ ಅವರ ನೇತೃತ್ವದಲ್ಲಿ ತಮ್ಮ ಸಮಸ್ಯೆಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಮತ್ತು ಉಪವಿಭಾಗಾಧಿಕಾರಿಗಳನ್ನು ಭೇಟಿಯಾಗಿ ಅಭಿನಂದಿಸಿದ್ದಾರೆ.

 

ಅರಣ್ಯದಿಂದ ಆಚೆ ಬರಲು ಕುಟುಂಬಗಳ ಅಹವಾಲು : ಹದಿನೈದು ವರ್ಷವಾದರೂ ದೊರಕಿಲ್ಲ ಪರ್ಯಾಯ ವ್ಯವಸ್ಥೆ


Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ