ಮಂಗಳವಾರ ಚಿಕ್ಕಮಗಳೂರು ಜಿಲ್ಲಾ ಪ್ರವಾಸ ಕೈಗೊಂಡಿದ್ದ ಬಿ.ಜೆ.ಪಿ. ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಚಿಕ್ಕಮಗಳೂರಿನಲ್ಲಿ ಭೇಟಿ ಮಾಡಿದ ಬೆಳೆಗಾರರ ಸಂಘಟನೆಗಳ ನಿಯೋಗ ಬೆಳೆಗಾರರ ಪರವಾಗಿ ಅಹವಾಲು ಸಲ್ಲಿಸಿದೆ.
ಕಾಡಾನೆ ಸಮಸ್ಯೆ ಬಗ್ಗೆ, ಬ್ಯಾಂಕುಗಳ ಸಿಬಿಲ್ ಸ್ಕೋರ್ ಅನ್ನು ಕಾಫಿ ಕೃಷಿಯಿಂದ ಹೊರಗೆ ಇಡುವಂತೆ, ರಾಷ್ಟ್ರೀಯ ವಿಪತ್ತು ಯೋಜನೆ ಅಡಿಯಲ್ಲಿ ಕಾಫಿಗೆ ನೀಡುವ ಪರಿಹಾರವನ್ನು ಹಾಗೂ ವಿಸ್ತೀರ್ಣವನ್ನು ಹೆಚ್ಚಿಸುವಂತೆ, ಅಡಿಕೆ ಮತ್ತು ಕಾಳುಮೆಣಸಿಗೆ ಬೆಳೆ ವಿಮೆಯನ್ನು ಮಾಡಿರುವಂತೆ ಕಾಫಿ ಬೆಳೆ ಯನ್ನು ಸಹ ವಿಮಾ ವ್ಯಾಪ್ತಿಗೆ ತರುವುದು, ಬ್ಯಾಂಕುಗಳ ಸರ್ಫೇಸಿ ಕಾಯ್ದೆಯಿಂದ ಕಾಫಿ ಬೆಳಗಾರರನ್ನು ಹೊರಗೆ ಇಡುವಂತೆ ಮನವಿ ಮಾಡಲಾಯಿತು
ನಿಯೋಗದಲ್ಲಿ ಕರ್ನಾಟಕ ಬೆಳೆಗಾರರ ಒಕ್ಕೂಟದ ಉಪಾಧ್ಯಕ್ಷರಾದ ವಸಂತೆ ಗೌಡ,ಮೂಡಿಗೆರೆ ತಾಲೂಕು ಬೆಳೆಗಾರರ ಸಂಘದ ಅಧ್ಯಕ್ಷರಾದ ಬಿ. ಆರ್ ಬಾಲಕೃಷ್ಣ, ಕಾರ್ಯದರ್ಶಿ ಕೆ.ಡಿ ಮನೋಹರ ಹಾಗೂ ವಸ್ತಾರೆ ಬೆಳೆಗಾರ ಸಂಘದ ಅಧ್ಯಕ್ಷರಾದ ಟಿ.ಡಿ. ಮಲ್ಲೇಶ್, ಕಾರ್ಯದರ್ಶಿ ಕೆ.ಯು ರತೀಶ್, ಖಾಂಡ್ಯ ಬೆಳೆಗಾರರ ಸಂಘದ ಅಧ್ಯಕ್ಷರಾದ ಎಸ್ ವಿ ಶಂಕರ್ , ಅವತಿ ಬೆಳಗಾರರ ಸಂಘದ ಅಧ್ಯಕ್ಷರಾದ ಶ್ರೀಧರ್ ಕಾರ್ಯದರ್ಶಿ ಮಹೇಶ್ ಹಾಗೂ ಇತರರು ಇದ್ದರು.




