ಮೂಡಿಗೆರೆ ಪಟ್ಟಣ ಸಮೀಪದ ಕುದ್ರೆಗುಂಡಿಯ ಸಿದ್ದಾರ್ಥ ವನ ಬಳಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ಚಿರತೆ ಬೆಕ್ಕು ಸಾವನ್ನಪ್ಪಿದೆ.
ಚಿಕ್ಕಮಗಳೂರು- ಮೂಡಿಗೆರೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ.
ಚಿರತೆ ಮರಿಯನ್ನು ಹೋಲುವ ಪ್ರಾಣಿ ಅಪರಿಚಿತ ವಾಹನದ ಅಡಿಗೆ ಸಿಲುಕಿ ರಸ್ತೆಯಲ್ಲೇ ಸಾವನ್ನಪ್ಪಿದೆ.
ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.




