ಮೂಡಿಗೆರೆ ವಿಧಾನ ಸಭಾ ಕ್ಷೇತ್ರದಲ್ಲಿ ಜೆ.ಡಿ.ಎಸ್. ಪಕ್ಷದಲ್ಲಿ ಬಿ.ಬಿ ನಿಂಗಯ್ಯ ವಿರುದ್ಧ ಬಂಡಾಯ ವ್ಯಕ್ತವಾಗಿದೆ.
ಸ್ವಪಕ್ಷದ ಮುಖಂಡರು, ಕಾರ್ಯಕರ್ತರು ಬಿ.ಬಿ ನಿಂಗಯ್ಯ ಅವರಿಗೆ ಟಿಕೇಟ್ ನೀಡಲು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಇವತ್ತು ಬಣಕಲ್‌ನಲ್ಲಿ ಜೆಡಿಎಸ್ ಪಕ್ಷದ ಬಿ.ಬಿ ನಿಂಗಯ್ಯ ವಿರೋಧಿ ಬಣದಿಂದ ಬಹಿರಂಗ ಸಭೆ ನಡೆದಿದೆ.
ಸಭೆಯಲ್ಲಿ ಮಾತನಾಡಿದ ಮುಖಂಡರು ನಿಂಗಯ್ಯ ವಿರುದ್ಧ ವಾಗ್ದಾಳಿ ನಡೆಸಿದರು. ಕಳೆದ ಚುನಾವಣೆಯಲ್ಲಿ ಅಂತಿಮ ಕ್ಷಣದಲ್ಲಿ ನಿಂಗಯ್ಯ ಪಲಾಯನ ಮಾಡಿದರು. ಕಾರ್ಯಕರ್ತರಿಗೆ ನಂಬಿಕೆ ದ್ರೋಹ ಮಾಡಿದರು. ಅವರಿಗೆ ಟಿಕೆಟ್ ನೀಡಿದರೆ ಜೆ.ಡಿ.ಎಸ್ ಗೆಲ್ಲಲು ಸಾಧ್ಯವಿಲ್ಲ ಹಾಗಾಗಿ ನಿಂಗಯ್ಯನವರ ಬದಲಿಗೆ ಹೊಸ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು ಎಂದು ಒತ್ತಾಯಿಸಿದರು.
ನಿಂಗಯ್ಯ ನವರ ವಿರುದ್ಧ ಸಹಿ ಸಂಗ್ರಹ ಮಾಡಲಾಯಿತು.
ಸಭೆಯಲ್ಲಿ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಲಕ್ಷಣಗೌಡ, ಮುಖಂಡರಾದ ಅಜಿತ್‌ಗೌಡ ಬಾಳೂರು, ರಮೇಶ್ ಬಾನಳ್ಳಿ, ಮಗ್ಗಲಮಕ್ಕಿ ರವಿ, ಸುರೇಂದ್ರ ಹ್ಯಾರಗುಡ್ಡೆ, ಕೆಸುವಿನಮನೆ ಬೈರೆಗೌಡ, ಕೆ.ಪಿ. ಭಾರತಿ, ಎಚ್.ಎಸ್.ಮಂಜುನಾಥ್, ಮಂಜುನಾಥ್ ಬೆಟ್ಟಗೆರೆ, ಅಮ್ಜದ್, ಗೋಪಾಲಗೌಡ, ದೇವರಾಜ್, ಕಣಚೂರು ರಾಜೇಂದ್ರ, ರವಿ, ಮಹೇಶ್, ಅನಿಲ್, ಸುಬ್ಬೆಗೌಡ, ಸೋಮೇಶ್, ರಘು, ಪ್ರವೀಣ್, ಲವ, ಬೈರೆಗೌಡ, ತಮ್ಮಣ್ಣ, ನಾಗರಾಜ್, ವಾಸು, ಆನಂದ್, ದೇವದಾಸ್, ಅಶೋಕ್, ಶಶಿಕಾಂತ್, ರಮೇಶ್ ಸೇರಿದಂತೆ ನೂರಕ್ಕು ಅಧಿಕ ಕಾರ್ಯಕರ್ತರು ಭಾಗವಹಿಸಿದ್ದರು.
ಇದರೊಂದಿಗೆ ಮೂಡಿಗೆರೆ ಕ್ಷೇತ್ರದಲ್ಲಿ ಬಿ.ಜೆ.ಪಿ.ನಂತರ ಇದೀಗ ಜೆ.ಡಿ.ಎಸ್. ನಲ್ಲಿಯೂ ತಮ್ಮ ಅಭ್ಯರ್ಥಿ ವಿರುದ್ಧ ಬಹಿರಂಗ ಅಸಹನೆ ವ್ಯಕ್ತವಾಗಿದೆ.
ಜೆಡಿಎಸ್ ತನ್ನ ಮೊದಲ ಪಟ್ಟಿಯಲ್ಲಿ ಮೂಡಿಗೆರೆ ಕ್ಷೇತ್ರಕ್ಕೆ ಬಿ.ಬಿ.ನಿಂಗಯ್ಯನವರ ಹೆಸರು ಘೋಷಣೆ ಮಾಡಿದೆ. ಇದೀಗ ಪಕ್ಷದ ಪ್ರಮುಖ ಮುಖಂಡರು ಬಂಡಾಯ ಎದ್ದಿರುವುದು ವರಿಷ್ಟರಿಗೆ ತಲೆನೋವು ತಂದಿದೆ



