body

 

 

ಇತ್ತೀಚೆಗೆ ಕಡೂರಿನಲ್ಲಿ ಶನಿವಾರ ನಡೆದ ಕರ್ನಾಟಕ ರಾಜ್ಯಮಟ್ಟದ ದೇಹದಾರ್ಡ್ಯ ಸ್ಪರ್ಧೆಯಲ್ಲಿ ಮೂಡಿಗೆರೆ ಪ್ರತಿಭೆ ಎಂ. ಪೃಥ್ವಿಗೌಡ ಗ್ರೂಪ್ 4 ವಿಭಾಗದಲ್ಲಿ ತೃತೀಯ ಸ್ಥಾನ ಗಳಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಗಳಿಸಿದ್ದಾರೆ.

ಮೂಡಿಗೆರೆ X-Sports ಫಿಟ್ನೆಸ್ ಹೈಟೆಕ್ ಜಿಮ್ ಸೆಂಟರ್ ನ ತರಬೇತುದಾರರಾದ ಎಂ. ಪೃಥ್ವಿಗೌಡ ಚಿಕ್ಕಮಗಳೂರು ಜಿಲ್ಲಾ ಮಟ್ಟದ ಒಟ್ಟಾರೆ ವಿಭಾಗದದಲ್ಲಿ ಅತ್ಯುತ್ತಮ ಸ್ನಾಯು ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ದೇಹದಾರ್ಡ್ಯ ಸ್ಪರ್ಧೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯಿಂದ ರಾಜ್ಯಮಟ್ಟದಲ್ಲಿ ಯಾರೂ ಮಾಡದ ಸಾಧನೆಯನ್ನು ಪೃಥ್ವಿಗೌಡ ಮಾಡಿದ್ದಾರೆ. ಪೃಥ್ವಿ ಅವರು ಮೂಡಿಗೆರೆ ಪಟ್ಟಣದ ಎಂ.ಡಿ. ಮಹಿಪಾಲ್ ಮತ್ತು ಶ್ರೀಮತಿ ನಂದಿನಿ ಅವರ ಪುತ್ರ.

ಪೃಥ್ವಿಗೌಡ ತಮ್ಮ ಸಾಧನೆಯಿಂದ ಮೂಡಿಗೆರೆ X-Sports ಫಿಟ್ನೆಸ್ ಹೈಟೆಕ್ ಜಿಮ್ ಸೆಂಟರ್ ಮತ್ತು ಪೋಷಕರಿಗೆ ಹೆಸರು ತಂದಿದ್ದಾರೆ.


Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ