13112

 

 

ಚುನಾವಣಾ ನೀತಿಸಂಹಿತೆಯನ್ನು ರಾಜಕೀಯ ಪಕ್ಷಗಳು ಕಟ್ಟುನಿಟ್ಟಾಗಿ ಪಾಲಿಸಬೇಕು. ಉಲ್ಲಂಘಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮೂಡಿಗೆರೆ ಕ್ಷೇತ್ರದ ಚುನಾವಣಾ ಅಧಿಕಾರಿ ರಾಜೇಶ್ ಎಚ್ಚರಿಸಿದರು.

ಅವರು ಗುರುವಾರ ತಾಲೂಕು ಕಚೇರಿಯಲ್ಲಿ ನಡೆಸಿದ ವಿವಿಧ ರಾಜಕೀಯ ಪಕ್ಷಕ್ಕೆ ಚುನಾವಣೆ ನೀತಿಸಂಹಿತೆಯ ಮಾಹಿತಿ ನೀಡುವ ಸಭೆಯಲ್ಲಿ ಮಾತನಾಡಿ ಬ್ಯಾನರ್,  ಬಂಟಿಂಗ್ಸ್, ಗೋಡೆಬರಹಕ್ಕೆ ಆಯಾ ಸ್ಥಳೀಯ ಸಂಸ್ಥೆಯಿಂದ ಅನುಮತಿ ಕಡ್ಡಾಯ. ಸ್ವಂತಮನೆ, ವಾಹನದಲ್ಲಿ ರಾಜಕೀಯ ಪಕ್ಷದ ಪ್ರಚಾರ ನಡೆಸುವ ಬಾವುಟ, ಬ್ಯಾನರ್, ಅಭ್ಯರ್ಥಿಯ ಭಾವಚಿತ್ರ ಕಟ್ಟಲು ಅನುಮತಿ ಕಡ್ಡಾಯ.  ಚುನಾವಣೆಯಲ್ಲಿ ಪ್ರತಿಅಭ್ಯರ್ಥಿ 40ಲಕ್ಷ ಹಣ ಖರ್ಚುಮಾಡಲು ಅವಕಾಶವಿದೆ. ಎಲ್ಲಾ ಅಭ್ಯರ್ಥಿಗಳು ಬ್ಯಾಂಕ್  ಖಾತೆ ಮೂಲಕವೇ ಹಣಸಂದಾಯ ಮಾಡಬೇಕು.

ಸಾರ್ವಜನಿಕರು 50ಸಾವಿರಕ್ಕಿಂತ ಹೆಚ್ಚು ಹಣ ಸಾಗಿಸಲು ದಾಖಲೆಯ ಅಗತ್ಯವಿದೆ.

ರಾಜಕೀಯ ಪಕ್ಷಗಳು ಸಭೆ, ಸಮಾರಂಭ ಆಯೋಜಿಸಲು ಅನುಮತಿ ಪಡೆಯಬೇಕು. ಒಂದೆ ಸ್ಥಳದಲ್ಲಿ ವಿವಿಧ ರಾಜಕೀಯ ಪಕ್ಷಗಳು ಪ್ರಚಾರ ನಡೆಸಲು ಅನುಮತಿ ಕೇಳಿದರೆ ಮೊದಲು ಅನುಮತಿಪಡೆದವರಿಗೆ ಮೊದಲ ಆದ್ಯತೆ ನೀಡಲಾಗುವುದು.

ಮದುವೆ ಇತರೆ ಖಾಸಗಿ ಕಾರ್ಯಕ್ರಮಕ್ಕೆ ಅಡ್ಡಿಯಿಲ್ಲ. ಅಂತಹ ಕಾರ್ಯಕ್ರಮಗಳಲ್ಲಿ ರಾಜಕಾರಣಿಗಳು ಮತ್ತು ಅಭ್ಯರ್ಥಿಗಳು ಭಾಗವಹಿಸಿದಲ್ಲಿ ಮತಯಾಚನೆಯಲ್ಲಿ ಕೊಡಗುಅಂತಿಲ್ಲ ಹಾಗೊಂದು ವೇಳೆ ತೊಡಗಿದರೆ ಅಂತಹ ಮದುವೆ ಅಥವಾ ಇತರೆ ಯಾವುದೆ ಕಾರ್ಯಕ್ರಮವಾದರು ಅದರ ಸಂಪೂರ್ಣ ಖರ್ಚುವೆಚ್ಚವನ್ನು ಭಾಗವಹಿಸಿದ ಪಕ್ಷದ ಅಭ್ಯರ್ಥಿಯ ಲೆಕ್ಕಕ್ಕೆ ಹಾಕಿ ಅನುಮತಿ ಪಡೆಯದಿದ್ದಕ್ಕೆ ದೂರು ದಾಖಲಿಸಲಾಗುವುದು ಎಂದು ತಿಳಿಸಿದರು.

ಚುನಾವಣೆ ಪ್ರಚಾರದವೇಳೆ ಹಣ, ಹೆಂಡ ಹಂಚುವುದು ಅಥವಾ ಮತ್ತಿತರ ಅಕ್ರಮ ಚಟುವಟಿಕೆಯಲ್ಲಿ ತೊಡಗುವುದು ಕಂಡುಬಂದರೆ ಟೋಲ್ ಫ್ರೀ 1800 425 6114 ಸಂಖ್ಯೆಗೆ ಸಾರ್ವಜನಿಕರು ಕರೆಮಾಡಿ ಮಾಹಿತಿ ನೀಡಬಹುದಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಮೂಡಿಗೆರೆ  ತಹಸಿಲ್ದಾರ್ ತಿಪ್ಪೇಸ್ವಾಮಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಕುಮಾರ್, ವಿವಿಧ ಪಕ್ಷಗಳ ಮುಖಂಡರು, ಪತ್ರಿಕಾ ಪ್ರತಿನಿಧಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ