suncue1

 

 

ಕಾಫಿ, ಅಡಿಕೆ, ಕಾಳುಮೆಣಸು ಸೇರಿದಂತೆ ಎಲ್ಲಾ ಬಗೆಯ ಬೆಳೆಗಳನ್ನು ಒಣಗಿಸುವ ಡ್ರೈಯರ್ ಯಂತ್ರದ ಪ್ರಾತ್ಯಕ್ಷಿಕೆಯನ್ನು ಮೂಡಿಗೆರೆ ತೋಟಗಾರಿಕಾ ಕಾಲೇಜು ಆವರಣದಲ್ಲಿ ಏರ್ಪಡಿಸಲಾಗಿತ್ತು.

ತೈವಾನ್ ಮೂಲಕ ಸನ್ ಕ್ಯೂ ಕಂಪನಿಯಿಂದ ತಯಾರಿಸಲ್ಪಟ್ಟಿರುವ ಯಂತ್ರದ ಮಾದರಿಯನ್ನು ರೈತರಿಗೆ ಪರಿಚಯಿಸುವ ಈ ಕಾರ್ಯಕ್ರಮದಲ್ಲಿ ಕಂಪನಿಯ ರೀಜಿನಲ್ ಮ್ಯಾನೇಜರ್ ಲಿಯಾನ್‍ಲಿನ್ ಯಂತ್ರದ ಬಗ್ಗೆ ವಿವರಣೆ ನೀಡಿದರು. ಅಕಾಲಿಕ ಮಳೆಯಿಂದ ಫಸಲು ಬಂದ ಬೆಳೆಯನ್ನು ಒಣಗಿಸಲು ರೈತರು ಸಂಕಟಪಡುವ ಅಗತ್ಯವಿಲ್ಲ. ಕಾಫಿ, ಕಾಳುಮೆಣಸು, ಏಲಕ್ಕಿ ಸೇರಿದಂತೆ ಇತರೆ ಬೆಳೆಗಳನ್ನು ಕೇವಲ 8ರಿಂದ 10 ಗಂಟೆಯೊಳಗೆ ಒಣಗಿಸಲು ಸಾಧ್ಯವಿದೆ. ಇದರಿಂದ ಧಾನ್ಯಗಳನ್ನು ಏಕಪ್ರಮಾಣದಲ್ಲಿ ಒಣಗಿಸಲು ಸಾಧ್ಯ, ಧಾನ್ಯಗಳ ತೇವಾಂಶ ನಿರ್ವಹಣೆ, ಗುಣಮಟ್ಟ ಕಾಪಾಡಿಕೊಳ್ಳಲು ಮತ್ತು ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಪಡೆಯಲು ಇದರಿಂದ ಸಾಧ್ಯವಾಗುತ್ತದೆ ಎಂದರು. suncue ಕಂಪನಿಯು ವಿಶ್ವಮಟ್ಟದಲ್ಲಿ ಉನ್ನತ ಗುಣಮಟ್ಟದ ಡ್ರೈಯರ್ ತಯಾರಿಗೆ ಹೆಸರಾಗಿದೆ. ನಿರ್ವಹಣೆ ವೆಚ್ಚ ಅತಿ ಕಡಿಮೆಯಿದೆ. ಇದರಿಂದ ರೈತಾಪಿ ವರ್ಗದವರಿಗೆ ಹೆಚ್ಚಿನ ಅನುಕೂಲ ಅಗಲಿದೆ ಎಂದರು.

ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಆಯೋಜಿಸಿದ್ದ ಮೂಡಿಗೆರೆ ಮಲ್ನಾಡ್ ಕಾಫಿ ಅಂಡ್ ಸ್ಪೈಸಸ್ ನ ಮಾಲೀಕ ಹರ್ಷದ್ ಕಮಲ್ ಮಾತನಾಡಿ ಮಲೆನಾಡಿನಲ್ಲಿ ಅಕಾಲಿಕ ಮಳೆಯಿಂದ ಕಾಫಿ ಒಣಗಿಸುವುದು ಒಂದು ಸವಾಲಾಗಿದೆ. ಡ್ರೈಯರ್ ಮೂಲಕ ಕಾಫಿ ಒಣಗಿಸುವ ತಂತ್ರಜ್ಞಾನ ಇತ್ತೀಚೆಗೆ ಹೆಚ್ಚಾಗುತ್ತಿದೆ. ಈ ಯಂತ್ರ ಖರೀದಿಗೆ ಸರಕಾರ ಶೇ.50 ರಷ್ಟು ಸಬ್ಸಿಡಿ ನೀಡುತ್ತದೆ. ಅಲ್ಲದೇ ಯಂತ್ರವನ್ನು ಡೀಸೆಲ್, ವಿದ್ಯುತ್ ಹಾಗೂ ಉರುವಲು ಮೂಲಕ ಉಪಯೋಗಿಸಬಹುದೆಂದು ಮಾಹಿತಿ ನೀಡಿದರು.

ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್.ಭಾಲಕೃಷ್ಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅಕಾಲಿಕ ಮಳೆಯಿಂದಾಗಿ ರೈತರು ಬೆಳೆದ ಬೆಳೆ ಉಳಿಸಿಕೊಳ್ಳಲು ಆಧುನಿಕ ತಂತ್ರಜ್ಞಾನದ ಕಡೆಗೆ ಮುಖ ಮಾಡಬೇಕಿದೆ. ಸನ್ಕ್ಯೂ ಧಾನ್ಯ ಡ್ರೈಯರ್ ಯಂತ್ರದಂತಹ ಅಧುನಿಕ ಉಪಕರಣಗಳು ಹೆಚ್ಚಾಗಿ ಬಳಕೆ ಮಾಡಿಕೊಂಡರೆ ಬೆಳೆಗಾರರ ಸಂಕಷ್ಟ ನಿವಾರಿಸಲು ಸಾಧ್ಯವಿದೆ ಎಂದು ಹೇಳಿದರು.

ಯಂತ್ರಕ್ಕೆ ಸರ್ಕಾರದ ಸಹಾಯಧನದ ಬಗ್ಗೆ ಜಿಲ್ಲಾ ಸಂಯೋಜಕ ಎಸ್.ಬಿ. ರಾಮಚಂದ್ರಪ್ಪ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಬೆಳೆಗಾರರ ಸಂಘದ ಪದಾಧಿಕಾರಿಗಳು, ಸದಸ್ಯರು, ಮೂಡಿಗೆರೆ ಸುತ್ತಮುತ್ತಲ ಅನೇಕ ಬೆಳೆಗಾರರು ಭಾಗವಹಿಸಿ ನೂತನ ಯಂತ್ರದ ಬಗ್ಗೆ ಮಾಹಿತಿ ಪಡೆದರು.

 

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ