naati

 

 

ಹಿರಿಯ ನಾಟಿ ವೈದ್ಯರಾಗಿದ್ದ ಕೆ.ಬಿ. ವೆಂಕಟೇಗೌಡ ನಿಧನ ಹೊಂದಿದ್ದಾರೆ.

ಮೂಡಿಗೆರೆ ತಾಲ್ಲೂಕಿನ ಕುಂದೂರು ಗ್ರಾಮದ ಕೆ.ಬಿ. ವೆಂಕಟೇಗೌಡ ಅವರು ನಾಟಿವೈದ್ಯರಾಗಿ ಸುತ್ತಮುತ್ತಲ ಪ್ರದೇಶಗಳಲ್ಲಿ ಹೆಸರು ಮಾಡಿದ್ದರು. ಅನೇಕ ಖಾಯಿಲೆಗಳಿಗೆ ಇವರು ನಾಟಿ ಔಷಧಿ ನೀಡುತ್ತಿದ್ದರು. ನಾಟಿ ಔಷಧಿಗಳಿಂದ ಅನೇಕ ಜೀವಗಳನ್ನು ಉಳಿಸಿದ್ದರು.

ಇವರು ಹಾವು ಕಡಿತಕ್ಕೆ ನೀಡುತ್ತಿದ್ದ ನಾಟಿ ವೈದ್ಯಕೀಯ ಚಿಕಿತ್ಸೆಗೆ ವಿಶೇಷವಾಗಿ ಹೆಸರು ಮಾಡಿದ್ದರು. ಎಂತಹ ವಿಷಕಾರಿ ಹಾವು ಕಡಿದಿದ್ದರು ಸಹ ಇವರು ನೀಡುತ್ತಿದ್ದ ಚಿಕಿತ್ಸೆಯಿಂದ ಗುಣಮುಖರಾಗುತ್ತಿದ್ದರು. ಇವರು ಸುಮಾರು 400ಕ್ಕೂ ಅಧಿಕ ಮಂದಿಗೆ ಹಾವು ಕಡಿತದ ಸಂದರ್ಭದಲ್ಲಿ ಚಿಕಿತ್ಸೆ ನೀಡಿ ಜೀವ ಉಳಿಸಿದ್ದರು.

ವೆಂಕಟೇಗೌಡ ಅವರ ನಿಧನದಿಂದ ಈ ಭಾಗದ ಓರ್ವ ಹಿರಿಯ ನಾಟಿ ವೈದ್ಯರನ್ನು ಕಳೆದುಕೊಂಡಂತಾಗಿದೆ. ಅವರ ನಿಧನಕ್ಕೆ ಕುಂದೂರು ಮತ್ತು ಸುತ್ತಮುತ್ತಲ ಗ್ರಾಮಸ್ಥರು, ಬಂಧುಗಳು, ಕುಟುಂಬದವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ