charana1

 

 

ಕಳಸ ತಾಲ್ಲೂಕು ಸಂಸೆ ಗ್ರಾಮದಿಂದ ನೇತ್ರಾವತಿ ಶಿಖರಕ್ಕೆ ಚಾರಣಕ್ಕೆ ತೆರಳಿದ್ದ ವ್ಯಕ್ತಿ ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ.

ಮೃತಪಟ್ಟ ಚಾರಣಿಗ ಮೈಸೂರು ಜೆಪಿ ನಗರ ನಿವಾಸಿ ರಕ್ಷಿತ್ (27 ವರ್ಷ) ಎಂದು ಗುರುತಿಸಲಾಗಿದೆ.

ಇಂದು ಮುಂಜಾನೆ ರಕ್ಷಿತ್ ಸೇರಿ ಆರು ಜನರ ಚಾರಣಿಗರ ತಂಡ ಸಂಸೆ ಮಾರ್ಗವಾಗಿ ಕುದುರೆಮುಖ ಬೆಟ್ಟದ ಸಾಲಿನ ನೇತ್ರಾವತಿ ಶಿಖರಕ್ಕೆ ತೆರಳಿದ್ದರು.

ಶಿಖರ ಏರಿದ ನಂತರ ಮಧ್ಯಾಹ್ನದ ಹೊತ್ತಿಗೆ ರಕ್ಷಿತ್ ಗೆ ಎದೆ ನೋವು ಕಾಣಿಸಿಕೊಂಡಿದೆ. ಎದೆ ನೋವು ಹೆಚ್ಚಾಗಿ ರಕ್ಷಿತ್ ಹೃದಯಾಘಾತದಿಂದ ಪ್ರಾಣ ಕಳೆದುಕೊಂಡಿದ್ದಾರೆ.

ಸ್ಥಳೀಯರ ನೆರವಿನಿಂದ ರಕ್ಷಿತ್ ಮೃತದೇಹವನ್ನು ಕಳಸ ಆಸ್ಪತ್ರೆಗೆ ತರಲಾಗಿದೆ.

ಮೃತ ರಕ್ಷಿತ್ ಇತ್ತೀಚೆಗಷ್ಟೇ ಎಂ.ಬಿ.ಬಿ.ಎಸ್. ವ್ಯಾಸಾಂಗ ಪೂರ್ಣಗೊಳಸಿದ್ದರು ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ