ಆಲ್ದೂರು ಪೊಲೀಸ್ ಠಾಣೆ ನೂತನ ಠಾಣಾಧಿಕಾರಿಯಾಗಿ ಕೆ.ಪಿ. ಅಕ್ಷಿತ ಅಧಿಕಾರ ವಹಿಸಿಕೊಂಡಿದ್ದಾರೆ.
ಅಕ್ಷಿತ ಅವರು ಈ ಹಿಂದೆ ಮೂಡಿಗೆರೆ ತಾಲ್ಲೂಕು ಬಾಳೂರು ಪೊಲೀಸ್ ಠಾಣೆಯ ಅಪರಾಧ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಆಲ್ದೂರು ಠಾಣೆಯಲ್ಲಿ ಪಿ.ಎಸ್.ಐ. ಆಗಿದ್ದ ಸಜಿತ್ ಕುಮಾರ್ ಅವರು ಬೀರೂರು ಠಾಣೆಗೆ ವರ್ಗಾವಣೆಗೊಂಡಿದ್ದು, ಆಲ್ದೂರು ಠಾಣೆಯಲ್ಲಿ ತೆರವಾಗಿದ್ದ ಕಾನೂನು ಸುವ್ಯವಸ್ಥೆ ವಿಭಾಗದ ಠಾಣಾಧಿಕಾರಿಯಾಗಿ ಕೆ.ಪಿ. ಅಕ್ಷಿತ ನಿಯೋಜನೆಗೊಂಡಿದ್ದಾರೆ.
ಆಲ್ದೂರು ಠಾಣಾಧಿಕಾರಿಯಾಗಿ ನಿಯೋಜನೆಗೊಂಡ ಅಕ್ಷಿತ ಅವರನ್ನು ಗುರುವಾರ ಎ.ಎಸ್.ಐ. ಪರಮೇಶ್‍ಗೌಡ ಅವರು ಸ್ವಾಗತಿಸಿದರು.



