ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಎರಡು ಸಾರಿಗೆ ಬಸ್ಸುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಎರಡು ಬಸ್ಸುಗಳ ಚಾಲಕರ ಕಾಲುಗಳೀಗೆ ಗಂಭೀರ ಗಾಯವಾಗಿದೆ. ಹಲವು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಚಾಲಕರನ್ನು ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಧರ್ಮಸ್ಥಳದಿಂದ ಚಿತ್ರದುರ್ಗಕ್ಕೆ ಸಾಗುತ್ತಿದ್ದ ಬಸ್ ಹುಬ್ಬಳ್ಳಿಯಿಂದ ಧರ್ಮಸ್ಥಳಕ್ಕೆ ಸಾಗುತ್ತಿದ್ದ ಬಸ್ ಗಳು ಚಾರ್ಮಾಡಿ ಘಾಟ್ ಬಿದಿರುತಳ ರಸ್ತೆಯ ಸಮೀಪ ಇಂದು ಸಂಜೆ ಪರಸ್ಪರ ಮುಖಾಮುಖಿ ಡಿಕ್ಕಿಯಾಗಿ ಅವಘಡ ಸಂಭವಿಸಿದೆ.

ಬಸ್ ಗಳ ನಡುವಿನ ಡಿಕ್ಕಿಯಿಂದ ಕೊಟ್ಟಿಗೆಹಾರದವರೆಗೂ ವಾಹನಗಳು ಸಾಲುಗಟ್ಟಿ ನಿಂತು ಟ್ರಾಫಿಕ್ ಜಾಮ್ ಉಂಟಾಗಿತ್ತು. ಹಲವು ಪ್ರಯಾಣಿಕರು 10 ಕಿ.ಮೀ ನಡೆದು ಕೊಟ್ಟಿಗೆಹಾರ ಸೇರಿದರು. ಸ್ಥಳಕ್ಕೆ ಬಣಕಲ್ ಪೊಲೀಸರು ಮತ್ತು ಹೈವೇ ಪ್ಯಾಟ್ರೋಲ್ ಪೊಲೀಸ್ ತಂಡ ಹಾಗೂ ಸಮಾಜಸೇವಕ ಆರೀಫ್ ಮತ್ತು ತಂಡ ಭೇಟಿ ನೀಡಿ ಸಂಚಾರ ಸುಗಮಗೊಳಿಸಲು ಶ್ರಮಿಸಿದ್ದಾರೆ.
ಚಾರ್ಮಾಡಿ ಘಾಟ್‍ನಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು ಸಂಪೂರ್ಣ ಮಂಜುಮಸುಕಿದೆ. ಮಂಜುನಿಂದಾಗಿ ರಸ್ತೆ ಸರಿಯಾಗಿ ಘೋಚರಿಸದೇ ಈ ಅಪಘಾತ ಸಂಭವಿಸಿದೆ.
ಚಾರ್ಮಾಡಿ ಘಾಟಿಯಲ್ಲಿ ತಡೆಗೋಡೆ ಕಾಮಗಾರಿ ಬೇಗನೇ ಮುಗಿಸಲು ಒತ್ತಾಯ
ಚಾರ್ಮಾಡಿ ಘಾಟಿಯ ಅಪಘಾತ ಸ್ಥಳದಲ್ಲಿ 2019 ರಲ್ಲಿ ಭೂಕುಸಿತದಿಂದ ರಸ್ತೆ ಬದಿ ಕುಸಿದಿತ್ತು.ಅಲ್ಲಿ 4 ವರ್ಷವಾದರೂ ಕಾಮಗಾರಿ ಪೂರ್ಣಗೊಳ್ಳದೇ ರಸ್ತೆ ಇಕ್ಕಟ್ಟಾಗಿದೆ.ರಸ್ತೆಯಲ್ಲಿ ದಟ್ಟ ಮಂಜು ಕವಿದಿದ್ದರಿಂದ ಕಾಮಗಾರಿ ಸ್ಥಳ ಕಾಣದೇ ಬಸ್ ಗಳು ಮುಖಾಮುಖಿ ಡಿಕ್ಕಿಯಾಗಿವೆ.ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಚಾರ್ಮಾಡಿ ಘಾಟಿಯಲ್ಲಿ ನಡೆಯುತ್ತಿರುವ ತಡೆಗೋಡೆ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.



