moju2

 

 

ಪ್ರಸಿದ್ಧ ಯಾತ್ರಾಸ್ಥಳ ದೇವರಮನೆ ದೇವಸ್ಥಾನದ ಸುತ್ತಮುತ್ತ ಪ್ರವಾಸಿಗರ ಮೋಜುಮಸ್ತಿ ಮಿತಿಮೀರಿದೆ. ಇಲ್ಲಿನ ರಮಣೀಯ ಪ್ರಾಕೃತಿಕ ಸೌಂದರ್ಯ ವೀಕ್ಷಣೆಗೆ ಬರುವ ಪ್ರವಾಸಿಗರಲ್ಲಿ ಕೆಲವರು ಮೋಜು ಮಸ್ತಿ ಮಾಡುತ್ತಾ ಇತರೆ ಪ್ರವಾಸಿಗರಿಗೆ ಮುಜುಗರ ಉಂಟುಮಾಡುತ್ತಿದ್ದಾರೆ.

ಮೊನ್ನೆ ಯುವಕರ ತಂಡವೊಂದು ದೇವಸ್ಥಾನದ ಸಮೀಪವೇ ಕಾರಿನಲ್ಲಿ ಜೋರಾಗಿ ಹಾಡು ಹಾಕಿಕೊಂಡು, ಕೈಯಲ್ಲಿ ಬಿಯರ್ ಟಿನ್ ಹಿಡಿದುಕೊಂಡು ಪಾನಮತ್ತರಾಗಿ ಕುಣಿಯುತ್ತಾ ಬೇರೆಯವರಿಗೆ ಇರುಸುಮುರುಸು ಉಂಟುಮಾಡುತ್ತಿದ್ದ ವಿಡಿಯೋ ಒಂದು ಈಗ ವೈರಲ್ ಆಗಿದೆ.

ಇದು ಇಲ್ಲಿ ನಿತ್ಯದ ದೃಶ್ಯವಾಗಿದೆ. ಕೆಲವು ಯುವಕರ ತಂಡ ಇಲ್ಲಿ ಮದ್ಯಪಾನ ಮಾಡುವುದು, ಮದ್ಯದ ಬಾಟಲಿಗಳನ್ನು ಎಸೆಯುವುದು, ಅಸಭ್ಯವಾಗಿ ವರ್ತಿಸುವುದು, ಜೋರಾಗಿ ಸ್ಪೀಕರ್ ಹಾಕಿಕೊಂಡು ಡ್ಯಾನ್ಸ್ ಮಾಡುವುದು ಹೆಚ್ಚಾಗಿದೆ. ಇದರಿಂದ ಈ ಸ್ಥಳದ ಪಾವಿತ್ರ್ಯತೆ ಹಾಳಾಗುವುದರ ಜೊತೆಗೆ ಇತರೆ ಪ್ರವಾಸಿಗರಿಗೆ ತುಂಬಾ ತೊಂದರೆಯಾಗುತ್ತಿದೆ.

ಈ ಬಗ್ಗೆ ಪೊಲೀಸ್ ಇಲಾಖೆ ಕ್ರಮ ಜರುಗಿಸಬೇಕಾಗಿದೆ. ವಾರಾಂತ್ಯದಲ್ಲಿ ಇಲ್ಲಿಗೆ ಪೊಲೀಸ್ ನಿಯೋಜನೆ ಮಾಡಿ ಇಂತಹ ಅತಿರೇಕದ ಕೃತ್ಯಗಳಿಗೆ ಕಡಿವಾಣ ಹಾಕಬೇಕಾಗಿದೆ.

 

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ