ಮೂಡಿಗೆರೆ ತಾಲ್ಲೂಕಿನ ಬಣಕಲ್ ಫ್ರೆಂಡ್ಸ್ ಕ್ಲಬ್ ವತಿಯಿಂದ ಬಣಕಲ್ ಪ್ರೌಢಶಾಲಾ ಆವರಣದಲ್ಲಿ ಸ್ಲೋ ಬೈಕ್ ರೇಸ್ ಹಾಗೂ ಕಾರು ರಿವರ್ಸ್ ಗೇರ್ ಸ್ಪರ್ಧೆಯ ಕ್ರೀಡಾಕೂಟ ನಡೆಯಿತು.
ಕಾರು ರಿವರ್ಸ್ ಗೇರ್ ರೇಸ್ ನಲ್ಲಿ ಮಹೇಂದ್ರ (ಪ್ರಥಮ), ಅರುಣ್ ಪೂಜಾರಿ (ದ್ವಿತೀಯ), ಆರ್ಭಜ್ ಖಾನ್ (ತೃತೀಯ) ಸ್ಥಾನ ಪಡೆದರು.
ಸ್ಲೋ ಬೈಕ್ ರೇಸ್ ನಲ್ಲಿ ಇಮ್ರಾನ್ (ಪ್ರಥಮ), ಮೊದಲಿಗರಾಗಿ ಟ್ರೋಪಿಯೊಂದಿಗೆ ರೂ 3333 ನಗದು ಬಹುಮಾನ ಪಡೆದರು. ದರ್ಶಿತ್ (ದ್ವಿತೀಯ) ಸ್ಥಾನ ಪಡೆದು ಟ್ರೋಪಿಯೊಂದಿಗೆ ರೂ 1777 ನಗದು ಬಹುಮಾನ ಪಡೆದರು. ಆಶಿಫ್ (ತೃತೀಯ), ಸ್ಥಾನಕ್ಕೆ ತೃಪ್ತಿ ಪಟ್ಟು ಟ್ರೋಪಿ ಪಡೆದರು.
ಮ್ಯೂಸಿಕಲ್ ಚೇರ್ ಸ್ಪರ್ಧೆಯಲ್ಲಿ ಶೈನಾಜ್ (ಪ್ರಥಮ), ಮೇಘ (ದ್ವಿತೀಯ), ದೀಪ್ತಿ (ತೃತೀಯ), 14 ವಯೋಮಿತಿಯ ಬಾಲಕರ ನೂರು ಮಿ ಓಟದಲ್ಲಿ ತಷ್ರೀಫ್ (ಪ್ರಥಮ), ಸಮರ್ಥ್ (ದ್ವಿತೀಯ), ಹುಸೈನ್ (ತೃತೀಯ),
ಬಾಲಕಿಯರ ವಿಭಾಗದಲ್ಲಿ ನಿತ್ಯಾ (ಪ್ರಥಮ), ಪ್ರಗತಿ (ದ್ವಿತೀಯ), ವರ್ಷಿಣಿ (ತೃತೀಯ), 17 ವರ್ಷದ ಬಾಲಕರ ಓಟದಲ್ಲಿ ಅರ್ಜುನ್ (ಪ್ರಥಮ), ಸಾನ್ವಿತ್ (ದ್ವಿತೀಯ), ಅಜ್ವೀತ್ (ತೃತೀಯ), ಬಾಲಕೀಯರ ವಿಭಾಗದಲ್ಲಿ ದೀಪ್ತಿ (ಪ್ರಥಮ), ಭಾಗ್ಯ (ದ್ವಿತೀಯ), ರಚನಾ (ತೃತೀಯ) ಸ್ಥಾನ ಪಡೆದರು.
ಎಸ್.ಎಸ್.ಎಲ್.ಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ಈಶ್ವರಿ ಸಿರಿಗಂಧ, ಮನುಕುಮಾರ್, ವಿದ್ಯಾಭಾರತಿ ಶಾಲೆಯ ರಚನಾ ಅವರನ್ನು ಶಾಲು ಹೊದಿಸಿ ಸನ್ಮಾನಿಸಿ ಪ್ರೋತ್ಸಾಹ ಧನ ನೀಡಲಾಯಿತು.
ಈ ಸಂದರ್ಭದಲ್ಲಿ ಬಣಕಲ್ ಪ್ರೆಂಡ್ಸ್ ಕ್ಲಬ್ ಗೌರವಾಧ್ಯಕ್ಷ ಬಿ.ಸಿ.ಪ್ರವೀಣ್, ಅಧ್ಯಕ್ಷರಾದ ಬಿ.ಎಂ.ಸಿದ್ದೀಕ್, ಉಪಾಧ್ಯಕ್ಷರಾದ ಮಧುಕುಮಾರ್, ರಂಗನಾಥ್, ಪ್ರಧಾನ ಕಾರ್ಯದರ್ಶಿ ಬಿ.ಎಂ.ರಶೀದ್, ಖಜಾಂಚಿ ಅಮೀನ್ ಸಿರಾಜ್, ಸಹಕಾರ್ಯದರ್ಶಿಗಳಾದ ನಿಶಾಂತ್, ವಲೇರಿಯನ್ ರೊಡ್ರಿಗಸ್, ಸದಸ್ಯರು ಇದ್ದರು.



