niduvale

 

 

ಯುವಕರು ಹಾಗೂ ಮಕ್ಕಳಲ್ಲಿ ಮೊಬೈಲ್ ಬಳಕೆ ಹೆಚ್ಚಾಗಿದ್ದು ಗ್ರಾಮೀಣ ಕ್ರೀಡೆಗಳು ಹಿನ್ನಲೆಗೆ ಸರಿದಿದೆ ಎಂದು ಕಲ್ಮನೆ ಎಸ್ಟೇಟ್ ಮಾಲೀಕರಾದ ಧೀರಜ್ ಪ್ರಭು ಅಭಿಪ್ರಾಯ ವ್ಯಕ್ತಪಡಿಸಿದರು.

ಮೂಡಿಗೆರೆ ತಾಲ್ಲೂಕಿನ ನಿಡುವಾಳೆಯಲ್ಲಿ ನಿಡುವಾಳೆ ಗ್ರಾಮಸ್ಥರ ವತಿಯಿಂದ ನಡೆದ ಬಾಳೂರು ಹೋಬಳಿ ಮಟ್ಟದ ಗ್ರಾಮೀಣ ಕೆಸರುಗದ್ದೆ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.

ಹಲವು ದಶಮಾನಗಳ ಹಿಂದಿನ ಕ್ರೀಡೆ, ಆಧುನಿಕತೆಯ ಭರಾಟೆಯಲ್ಲಿ ನಶಿಸುತ್ತಿದೆ. ಮಕ್ಕಳು ಹೊರಾಂಗಣದ ಆಟಗಳನ್ನು ಆಡದೇ ಅತಿಯಾದ ಮೊಬೈಲ್ ಬಳಕೆಯಿಂದ ಅಪಾಯದ ಮೊಬೈಲ್ ಗೇಮ್ಸ್ ಗಳನ್ನು ಆಡುವುದರಲ್ಲಿ ತಲ್ಲೀನರಾಗಿದ್ದಾರೆ. ಒಟ್ಟಾಗಿ ಸೇರಿ ಆಡುವ ಆಟಗಳು ಮರೆಯಾಗುತ್ತಿರುವುದು ಕಳವಳಕಾರಿಯಾಗಿದೆ ಎಂದರು.

ಬಿಜೆಪಿ ಮುಖಂಡರಾದ ಬಿ.ಎಂ.ಭರತ್ ಮಾತನಾಡಿ ಕೆಸರುಗದ್ದೆಯಂತಹ ಕ್ರೀಡೆಗಳು ಮನೋರಂಜನೆ ಜೊತೆಗೆ ದೈಹಿಕ ಆರೋಗ್ಯಕ್ಕೆ ಸಹಕಾರಿಯಾಗಿದೆ. ಇಂತಹ ಕ್ರೀಡೆಗಳಲ್ಲಿ ಕ್ರೀಡಾಸಕ್ತರು ಪಾಲ್ಗೊಳ್ಳಬೇಕು ಎಂದರು.

ಪುರುಷರ ಹಗ್ಗಜಗ್ಗಾಟದಲ್ಲಿ ಭಗತ್ ಸಿಂಗ್ ತಂಡ (ಪ್ರಥಮ), ಗಬ್ಗಲ್ ತಂಡ (ದ್ವಿತೀಯ), ಮಹಿಳೆಯರ ಹಗ್ಗಜಗ್ಗಾಟದಲ್ಲಿ ಗಬ್ಗಲ್ ತಂಡ (ಪ್ರಥಮ),ಮಾಳಿಂಗನಾಡು ತಂಡ (ದ್ವಿತೀಯ), ವಾಲಿಬಾಲ್ ಪಂದ್ಯಾಟದಲ್ಲಿ ಮಾಳಿಂಗನಾಡು ಶಬರಿಗಿರಿ ತಂಡ (ಪ್ರಥಮ), ಜಾವಳಿ ಮಲೆಮನೆ ತಂಡ (ದ್ವಿತೀಯ), ಕೆಸರುಗದ್ದೆ 100ಮೀ ಓಟದಲ್ಲಿ ಸೌರವ್ ಬಾಳೂರು (ಪ್ರಥಮ), ಮದನಶೆಟ್ಟಿ (ದ್ವಿತೀಯ) ಸ್ಥಾನ ಪಡೆದರು.

ಕಾರ್ಯಕ್ರಮದಲ್ಲಿ ಮುಖಂಡರಾದ ನವೀನ್ ಹಾವಳಿ, ನಾಗೇಶ್ ಗೌಡ, ರಮೇಶ್ ಕೆಳಗೂರು, ಬ್ಯಾಂಡ್ ರವಿ, ಸುಂದರ ಹಡತಾಳು, ತನಿಯಪ್ಪ, ಸೋಮೇಶ್ ಮರ್ಕಲ್, ಎನ್.ಎಸ್.ಸುಧಾಕರ್, ಪರೀಕ್ಷಿತ್ ಜಾವಳಿ, ಆಟೋ ಸಂಘದ ಅಧ್ಯಕ್ಷ ಮಹೇಶ್,ಕೂವೆ ಚಂದ್ರು, ಉಮೇಶ್ ಮರ್ಕಲ್, ಮಹೇಶ್,ಬಿ.ಕೆ.ಸಂಜೀವ, ವಸಂತ ನಿಡುವಾಳೆ, ಜೀವನ್, ಸಂತೋμï ಸಾಲಿಯಾನ್ ಮುಂತಾದವರು ಇದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ