suddi-21

 

 

ಶಾಲಾ-ಕಾಲೇಜು ವಿದ್ಯಾರ್ಥಿಗಳ ಬಹುದಿನಗಳ ಬೇಡಿಕೆಯಾದ ಉಚಿತ ಬಸ್‍ಪಾಸ್ ಸೌಲಭ್ಯವನ್ನು ಒದಗಿಸಲು ರಾಜ್ಯಸರ್ಕಾರ ತೀರ್ಮಾನಿಸಿರುವುದು ಸ್ವಾಗತಾರ್ಹ ಎಂದು ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ ಹೇಳಿದರು.

ನಗರದ ಕೆ.ಎಸ್.ಆರ್.ಟಿ.ಸಿ. ಬಸ್‍ನಿಲ್ದಾಣದಲ್ಲಿ ಎನ್‍ ಎಸ್‍ ಯು ಐ ಜಿಲ್ಲಾ ಸಮಿತಿಯಿಂದ ಶುಕ್ರವಾರ ಬೆಳಿಗ್ಗೆ ವಿದ್ಯಾರ್ಥಿಗಳಿಗೆ ಸುವರ್ಣ ಯುಗದ ಶುಭಾರಂಭ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಸಿಹಿಹಂಚಿ ಸ್ವಾಗತಿಸುವ ಮೂಲಕ ಅವರು ಮಾತನಾಡಿದರು.

ಮನೆಯಿಂದ ಉದ್ಯೋಗ ಅಥವಾ ತವರಿಗೆ ತೆರಳಲು ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪಯಣ ಸರ್ಕಾರ ಕಲ್ಪಿಸಿದೆ. ಅದರಂತೆ ಅಣ್ಣ-ತಮ್ಮಂದಿರಿಗೆ ಶಾಲಾ-ಕಾಲೇಜಿಗೆ ತೆರಳಲು ಬಸ್‍ಪಾಸ್ ಯೋಜನೆ ಜಾರಿಗೊಳಿಸುವ ಮೂಲಕ ಮುಖ್ಯಮಂತ್ರಿ ಡಿಕೆಶಿಯವರು ಹೊಸಪರ್ವ ಸೃಷ್ಟಿಸಿದ್ದಾರೆ ಎಂದರು.

ರಾಜ್ಯದಲ್ಲಿ ಒಂದನೇ ತರಗತಿಯಿಂದ ಪಿಜಿವರೆಗೆ ವ್ಯಾಸಂಗಕ್ಕೆ ತೆರಳುವ ಎಲ್ಲಾ ವಿದ್ಯಾರ್ಥಿಗಳಿಗೆ ಸಕಾ ್ರಿ ಬಸ್‍ಗಳಲ್ಲಿ ಉಚಿತ ಪಯಣಕ್ಕೆ ವ್ಯವಸ್ಥೆ ರೂಪಿಸುವ ಮೂಲಕ ಆರನೇ ಗ್ಯಾರಂಟಿಯಾಗಿ ಘೋಷಿಸಿದ್ದಾ ರೆ. ಆ ನಿಟ್ಟಿನಲ್ಲಿ ಎನ್‍ಎಸ್‍ಯುಐ ಜಿಲ್ಲಾ ಘಟಕ ಸಾರಿಗೆ ಇಲಾಖೆ ಅಧಿಕಾರಿಗಳು, ವಿದ್ಯಾರ್ಥಿಗಳ ಜೊತೆಗೂ ಡಿ ಸಂಭ್ರಮಿಸುತ್ತಿದ್ದಾರೆ ಎಂದು ಹೇಳಿದರು.

ಸರ್ಕಾರದಿಂದ ಕೆಲವೇ ದಿನಗಳಲ್ಲಿ ಉಚಿತ ಬಸ್‍ಪಾಸ್ ಸಂಬಂಧ ಮಾರ್ಗಸೂಚಿಯನ್ನು ಸರ್ಕಾರ ಹೊರಡಿಸಲಿದೆ. ಇದಕ್ಕೆ ಕಾಲೇಜು ಅನುಮತಿ ಪತ್ರ, ಪಾಸ್ ಪಡೆಯುವ ನಿಯಮ, ಪಾಸಿನ ಅವಧಿ ಎಷ್ಟಿದೆ ಹಾಗೂ ಎಲ್ಲಿಯವರೆಗೆ ಸಂಚರಿಸುವುದು ಎಂಬ ಸಂಪೂರ್ಣ ಮಾಹಿತಿ ಸರ್ಕಾರ ಆದೇಶಿಸಲಿದೆ ಎಂದರು.

ಉಚಿತ ಪಯಣ ಸಂಬಂಧ ಮಹಿಳೆಯರು ಸೇರಿದಂತೆ ಬಸ್‍ಪಾಸ್ ವಿದ್ಯಾರ್ಥಿಗಳು ಅನಾವಶ್ಯಕವಾಗಿ ದುರುಪಯೋಗ ಮಾಡಿಕೊಳ್ಳದೇ, ಒಳ್ಳೆಯ ರೀತಿಯಲ್ಲಿನ ಉಪಯೋಗಿಸಿಕೊಳ್ಳಬೇಕು. ಸಾರಿಗೆ ಇಲಾಖೆ, ರಾಜ್ಯಸರ್ಕಾರ ಸಾರ್ವಜನಿಕರ ಆಸ್ತಿ. ಆದ್ದರಿಂದ ಬಸ್‍ನಲ್ಲಿ ಸ್ಚಚ್ಚತೆ ಕಾಪಾಡಬೇಕು ಹಾಗೂ ಸೀಟ್‍ಗಳನ್ನು ಹಾಳುಮಾಡಬಾರದು ಎಂದು ತಿಳಿಸಿದರು.

ಎನ್‍ಎಸ್‍ಯುಐ ಜಿಲ್ಲಾ ಅಧ್ಯಕ್ಷ ಸುಮಂತ್ ಮಾತನಾಡಿ ಡಿಕೆಶಿ ಅಧಿಕಾರ ವಹಿಸಿಕೊಂಡ ಐದು ಗಂಟೆ ಗಳಲ್ಲಿ ಐದು ಗ್ಯಾರಂಟಿ ಘೋಷಿಸಿದ್ದು, ಈ ಪೈಕಿ ವಿದ್ಯಾರ್ಥಿಗಳಿಗೆ ಉಚಿತ ಬಸ್‍ಪಾಸ್ ಕಲ್ಪಿಸಿರುವುದು ಸ್ವಾ ಗತಾರ್ಹ. ಇದಕ್ಕೆ ವಿದ್ಯಾರ್ಥಿ ಒಕ್ಕೂಟ ಬೆಂಬಲಿಸುವ ಮೂಲಕ ಇಂದು ಬಸ್‍ನಿಲ್ದಾಣದಲ್ಲಿ ಸಂಭ್ರಮಾಚರಣೆ ನಡೆಸುತ್ತಿದೆ ಎಂದರು.

ಈ ಸಂದರ್ಭದಲ್ಲಿ ಎನ್‍ಎಸ್‍ಯುಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚೇತನ್, ಅಸ್ಲೆಂಬಿ ಉಪಾಧ್ಯಕ್ಷ ಕಾರ್ತಿಕ್, ಪದಾಧಿಕಾರಿಗಳಾದ ವಿಕ್ರಜ್‍ಖಾನ್, ತಶೀರ್‍ಅಹ್ಮದ್, ಕಿರಣ್, ದಯಾನಂದ್, ಮಿಲನ್ ಹಾಗೂ ಕೆಎಸ್‍ಆರ್‍ಟಿಸಿ ಅಧಿಕಾರಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ