suddi-26

 

 

ಚಿಕ್ಕಮಗಳೂರು ಕ್ಷೇತ್ರದ ಮತದಾರರನ್ನು ಬೆಂಗಳೂರಿನಲ್ಲಿ ಮ್ಯಾಪಿಂಗ್ ಮಾಡಿರುವ ಬಿಎಲ್‍ಓಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಬಿಜೆಪಿ ಮುಖಂಡರುಗಳು ಗುರುವಾರ ಸಂಜೆ ಜಿಲ್ಲಾಧಿಕಾರಿ ಭನ್ವಾರ್‍ಸಿಂಗ್ ಮೀನಾ ಅವರ ಮೂಲಕ ಮುಖ್ಯ ಚುನಾವಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಈ ಕುರಿತು ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಸೀತರಾಮಭರಣ್ಯ ಮಾತನಾಡಿ ಜೂನ್ 30 ರಿಂದ ರಾಜ್ಯದಲ್ಲಿ ನಡೆಯುವ ಎಸ್‍ಐಆರ್ ಕುರಿತು ಈಗಾಗಲೇ 2002-2025 ರ ಮತದಾರರ ಮ್ಯಾಪಿಂಗ್ ನಡೆಯುತ್ತಿದ್ದು ಕ್ಷೇತ್ರದ 2002ನೇ ಇಸವಿಯ ಕ್ಷೇತ್ರದ ಕೆಲ ಮತದಾರರನ್ನು ಬೆಂಗಳೂರಿನಲ್ಲಿ ಮ್ಯಾ ಪಿಂಗ್ ಮಾಡಲಾಗಿದೆ ಎಂದು ದೂರಿದರು.

ಅರಿಶಿನಗುಪ್ಪೆ ಗ್ರಾಮದ ರುಕ್ಮಿಣಿ ಎಂಬುವರ ಮತದಾರರ ಚೀಟಿ ಸಂಖ್ಯೆಯನ್ನು ಬಿಎಲ್‍ಓಗಳು ಅನಧಿ ಕೃತವಾಗಿ ಬೆಂಗಳೂರಿನಲ್ಲಿ ಮ್ಯಾಪಿಂಗ್ ಮಾಡಿರುತ್ತಾರೆ. ಈ ಸಂಬಂಧ ಬಿಎಲ್‍ಓಗಳಿಗೆ ವಿಚಾರಿಸಿದರೆ ಉ ಡಾಫೆಯಾಗಿ ಉತ್ತರಿಸುತ್ತಿದ್ದು, ಜವಾಬ್ದಾರಿ ಮರೆತಿರುವ ಬಿಎಲ್‍ಓಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು  ಎಂದರು.

ಅದರಂತೆ ಕ್ಷೇತ್ರದ ಮತದಾರ ಪ್ರವೀಣ್‍ಕುಮಾರ್ ಆಚಾರ್ಯ ಎಂಬುವವರ ಹೆಸರನ್ನು ಬೆಂಗಳೂರಿ ನ ಪ್ರವೀಣ್ ಕುಲಕರ್ಣಿ ಎಂಬುವವರ ಹೆಸರಿಗೆ ಮ್ಯಾಪಿಂಗ್ ಮಾಡಲಾಗಿದೆ. ಈ ರೀತಿ ರಾಜ್ಯದ ವಿವಿಧ ವಿಧಾನಸಭಾ ಕ್ಷೇತ್ರಗಳ ಒಂದು ಲಕ್ಷಕ್ಕೂ ಅಧಿಕ ಮತದಾರರನ್ನು ಬೆಂಗಳೂರಿನಲ್ಲಿ ಮ್ಯಾಪಿಂಗ್ ಮಾಡಿರುವ ಅನುಮಾನವಿದೆ ಎಂದು ದೂರಿದರು.

ಈ ಹಿಂದೆ ಬೆಂಗಳೂರಿನಲ್ಲಿರುವ ಅನಧಿಕೃತ ಮತದಾರರನ್ನು ಉಳಿಸುವ ಹುನ್ನಾರ ಅಡಗಿದೆಯೆ ಎನ್ನು ವ ಸಂಶಯ ಮೂಡುತ್ತಿದೆ. ಆದ್ದರಿಂದ ಮುಖ್ಯ ಚುನಾವಣಾ ಆಯೋಗ ಎಚ್ಚೆತ್ತುಕೊಂಡು ರಿ-ಮ್ಯಾಪಿಂಗ್ ಮಾಡಿಸಬೇಕು ಮತ್ತು ತಪ್ಪಿತಸ್ಥ ಬಿಎಲ್‍ಓಗಳ ವಿರುದ್ಧ ಕಾನೂನು ಕ್ರಮ ಜರುಗಿಸದ್ದಲ್ಲಿ ದಾಖಲೆ ಸಮೇತ ನ್ಯಾಯಾಲಯದ ಮೊರೆ ಹೊಗಲಾಗುವುದು ಎಂದರು.ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರುಗಳಾದ ವಿನೋದ್ ಬೊಗಸೆ, ಎಸ್‍ಡಿಎಂ ಮಂಜು ಇದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ