ಚಿಕ್ಕಮಗಳೂರು ಉಪವಿಭಾಗದ ನೂತನ ಡಿವೈಎಸ್ಪಿಯಾಗಿ ಹೆಚ್.ಎಂ. ಶೈಲೇಂದ್ರ ನೇಮಕವಾಗಿದ್ದಾರೆ. ಮೈಸೂರು ಡಿ ಸಿ ಆರ್ ಇ ನಲ್ಲಿ ಕಾಯನಿರ್ವಹಿಸುತ್ತಿದ್ದ ಶೈಲೇಂದ್ರ ಅವರು ಇದೀಗ ಚಿಕ್ಕಮಗಳೂರು ಡಿವೈಎಸ್ಪಿಯಾಗಿ ವರ್ಗಾವಣೆ ಗೊಂಡಿದ್ದಾರೆ.
ಚಿಕ್ಕಮಗಳೂರು ಉಪವಿಭಾಗದ ಡಿವೈಎಸ್ಪಿಯಾಗಿದ್ದ ಪುರುಷೋತ್ತಮ್ ಎನ್. ಇವರನ್ನು ಸಿ.ಐ.ಡಿ. ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ.
ಗೃಹ ಇಲಾಖೆ ನಿನ್ನೆ 21 ಮಂದಿ ಡಿವೈಎಸ್ಪಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಹೆಚ್.ಎಂ. ಶೈಲೇಂದ್ರ ಅವರು 2001ರಲ್ಲಿ ಮೂಡಿಗೆರೆ ತಾಲ್ಲೂಕಿನ ಗೋಣಿಬೀಡು ಠಾಣೆಯ ಎಸ್.ಐ. ಆಗಿ, ಕೆಲ ಸಮಯ ಮೂಡಿಗೆರೆ ಠಾಣೆಯ ಇನ್ ಚಾರ್ಜ್ ಎಸ್.ಐ. ಆಗಿ, ಚಿಕ್ಕಮಗಳೂರು ನಗರ ಠಾಣೆ ಎಸ್.ಐ ಆಗಿ, ಚಿಕ್ಕಮಗಳೂರು ನಗರ ಸರ್ಕಲ್ ಇನ್ಸ್ ಪೆಕ್ಟರ್ ಆಗಿ ಸೇವೆ ಸಲ್ಲಿಸಿದ್ದರು. ಶೈಲೇಂದ್ರ ಅವರು ತಮ್ಮ ದಕ್ಷತೆಗೆ ಹೆಸರು ಮಾಡಿದ್ದರು. ಇದೀಗ ಮತ್ತೊಮ್ಮೆ ಉನ್ನತ ಅಧಿಕಾರಿಯಾಗಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸೇವೆ ಸಲ್ಲಿಸಲು ಅವಕಾಶ ಪಡೆದಿದ್ದಾರೆ.
ನಿನ್ನೆಯಷ್ಟೇ ಜಿಲ್ಲಾ ಎಸ್ಪಿ ಉಮಾಪ್ರಶಾಂತ್ ಅವರನ್ನು ವರ್ಗಾವಣೆ ಮಾಡಿ ಅವರ ಸ್ಥಾನಕ್ಕೆ ಅಮಾತೆ ವಿಕ್ರಂ ಅವರನ್ನು ನೂತನ ಎಸ್ಪಿಯಾಗಿ ನೇಮಕ ಮಾಡಿತ್ತು.





