guru 1

 

 

ಸಮಾಜದಲ್ಲಿ ಜಾತಿ ಪದ್ದತಿ ಹೋಗಿಲ್ಲ ನಮ್ಮನ್ನು ನಾವು ಅರಿತುಕೊಂಡಿಲ್ಲಾ. ಸಮಾಜದಲ್ಲಿ ಸಂಕುಚಿತ ಮನೋಭಾವನೆ ತೊಲಗಿ ವಿಶಾಲ ಮನೋಭಾವನೆ ಬೆಳೆದರೆ ಸಮಸ್ಯೆಗಳಿಗೆ ಆಸ್ಪದವಿರುವುದಿಲ್ಲ ಈ ನಿಟ್ಟಿನಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ ಬದುಕು ಮತ್ತು ವಿಚಾರ ನಮಗೆಲ್ಲಾ ಆದರ್ಶವಾದುದಾಗಿದೆ ಎಂದು ಚಿಕ್ಕಮಗಳೂರು ಜಿಲ್ಲಾ ಬ್ರಹ್ಮಶ್ರೀ ನಾರಾಯಣ ಗುರು ಒಕ್ಕೂಟ ಯುವ ವೇದಿಕೆಯ ಅಧ್ಯಕ್ಷ ಪ್ರವೀಣ್ ಪೂಜಾರಿ ತಿಳಿಸಿದರು.

ಅವರು ಗುರುವಾರ ಮೂಡಿಗೆರೆ ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ತಾಲೂಕು ಆಡಳಿತದ ವತಿಯಿಂದ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಆತಿಥಿಯಾಗಿ ಮಾತನಾಡಿದ ಅವರು.

ಇಂದು ಮಹಾಪುರುಷರ ದಿನಾಚರಣೆಗಳು ಆಯಾ ಜನಾಂಗಕ್ಕೆ ಸೀಮಿತವಾಗುತ್ತಿವೆ. ಇದು ತಪ್ಪು ದಾರ್ಶನಿಕ ವ್ಯಕ್ತಿಗಳು ಜಾತಿ ಜನಾಂಗವನ್ನು ಮೀರಿ ಬೆಳದವರು. ವಿಶ್ವಮಾನವ ಸಂದೇಶವನ್ನು ಸಾರಿದವರು ಅಂತಹ ಮಹನೀಯರ ದಿನಾಚರಣೆಯನ್ನು ಎಲ್ಲರೂ ಒಟ್ಟಾಗಿ ಆಚರಿಸಬೇಕು.
ನಾರಾಯಣ ಗುರು ಜಯಂತಿ ಬಿಲ್ಲವ, ಮಳೆಯಾಳಿ  ಪಂಗಡಗಳಿಗೆ ಸೀಮಿತವಾಗಿದೇಯೇ ಎಂಬುವುದು ತಮ್ಮ ಭಾವನೆಯಾಗಿದೆ. ವೇದಿಕೆಯಲ್ಲಿ ಜನಪ್ರತಿನಿಧಿಗಳ ಗೈರು ಹಾಜರಿ, ನಮ್ಮ ಜನಾಂಗವೆಂದರೆ ತಾತ್ಸರಕ್ಕೆ ಒಳಗಾಗುತ್ತಿದ್ದಿವೆಯೋ ಎಂಬಂತಾಗಿದೆ. ಚುನಾವಣೆ ಬಂದಾಗ ನಮ್ಮ ಜನಾಂಗದ ಮುಖ್ಯ ವ್ಯಕ್ತಿಗಳನ್ನು ಮಾತನಾಡಿಸಿ ಅವರ ಓಟನ್ನು ಪಡೆಯಲು ಮಾತ್ರ ಇಂತಹ ಸಮಾರಂಭಗಳಲ್ಲಿ ಜನಪ್ರತಿನಿದಿಗಳು ಭಾಗವಹಿಸಿದ್ದರೆ ನಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಸಾಧ್ಯ ಆದರೆ ಅಂತಹ ಸಮಸ್ಯೆಗಳನ್ನು ನಾವುಗಳೆ ಹೇಳಿಕೊಳ್ಳುವಂತಹ ಕಾರ್ಯ ನಡೆಯುತ್ತಿದೆ. ಸರ್ಕಾರಕ್ಕೆ ನಮ್ಮ ಕೂಗನ್ನು ತಲುಪಿಸುವ ಜನಪ್ರತಿನಿಧಿಗಳೆ ನಮ್ಮ ಜನಾಂಗವನ್ನು ತಾತ್ಸರ ಮಾಡುತಿದ್ದಾರೆ ಎಂಬ ಅಭಿಪ್ರಾಯ ಮೂಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು

ಸಮಾಜದಲ್ಲಿ ಅಸ್ಪೃಶ್ಯತೆ ತಾಂಡವವಾಡುತ್ತಿದ್ದಂತಹ ಸಂದರ್ಭದಲ್ಲಿ ಕೆಳವರ್ಗದ ಜನರಿಗೆ ದೇವಾಲಯ ಪ್ರವೇಶವಿಲ್ಲದಂತಹ ಕಾಲದಲ್ಲಿ ನಾರಾಯಣ ಗುರುಗಳು ಐವತ್ತಕ್ಕೂ ಹೆಚ್ಚು ದೇವಾಲಯಗಳನ್ನು ನಿರ್ಮಿಸಿದರು, ಮಾನವತ್ವದಿಂದ ದೈವತ್ವದೆಡೆಗೆ ಹೋಗಬಹುದು ಎನ್ನುವುದಕ್ಕೆ ನಾರಾಯಣ ಗುರುಗಳು ಉದಾಹರಣೆಯಾಗಿದ್ದಾರೆ.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಗೌರವಾಧ್ಯಕ್ಷ ಯೋಗೇಶ್ ಪೂಜಾರಿ ಬ್ರಹ್ಮಶ್ರೀ ನಾರಾಯಣ ಗುರುಗಳ ಸಾಧನೆಗಳು ಸಮಾಜದ ಎಲ್ಲಾ ವರ್ಗದ ಜನರಿಗೆ ತಲುಪಬೇಕು. ಅವರ ಹಾದಿಯಲ್ಲಿ ನಾವೆಲ್ಲರೂ ನಡೆಯಬೇಕಾಗಿದೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ಸಾಗೋಣ ಎಂದು ತಿಳಿಸಿದರು.
ಮಹಿಳಾಧ್ಯಕ್ಷೆ ಗಂಗಮ್ಮ ಮಾನಾಡಿ. ಬ್ರಹ್ಮ ಶ್ರೀ ನಾರಾಯಣ ಗುರುಗಳು ಜಾತಿ ಭೇದವನ್ನು ತೊಡೆದು ಹಾಕಿದರು. ಮಕ್ಕಳಿಗೆ ಮಹಾನ ಪುರುಷರ ಜೀವನ ಚರಿತ್ರೆಯನ್ನು ತಿಳಿಸಬೇಕಾಗಿದೆ. ಇಂತಹ ಜಯಂತಿ ಕಾರ್ಯಕ್ರಮದ ಮೂಲಕ ಮಕ್ಕಳಿಗೆ ಮನದಟ್ಟು ಮಾಡಬೇಕು. ಅವರ ಮಾರ್ಗದರ್ಶನದಲ್ಲಿ ನಾವೆಲ್ಲರೂ ನಡೆಯೋಣ ಎಂದರು.

ಕಾರ್ಯಕ್ರಮಕ್ಕೂ ಮುನ್ನಾ ಮೂಡಿಗೆರೆ ಪ್ರವಾಸಿಮಂದಿರದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಾರಾಯಣ ಗುರುಗಳ ಬಾವಚಿತ್ರದೊಂದಿಗೆ ಮೆರವಣಿಗೆ ನಡೆಸಲಾಯಿತು.

ವೇದಿಕೆಯಲ್ಲಿ ತಹಸೀಲ್ದಾರ್ ವೈ.ತಿಪ್ಪೇಸ್ವಾಮಿ, ಲೋಕೋಪಯೋಗಿ ಇಲಾಖೆಯ ಹಿರಿಯ ಅಭಿಯಂತರ ಬಿ.ಟಿ.ಚನ್ನಕೇಶವ , ಮಳೆಯಾಳಿ ಸಂಘದ ಅಧ್ಯಕ್ಷ ಮಹೇಶ್, ಮಲಯಾಳಿ ಸಂಘದ ಗೌರವಾಧ್ಯಕ್ಷ ಮೋಹನ್ , ಉಪನ್ಯಾಸ ರವಿಕಿರಣ್ ಪೂಜಾರಿ ಬಿಳುಗುಳ, ಪಟ್ಟಣ ಪಂಚಾಯಿತಿ ಸದಸ್ಯರು ಮನೋಜ್ ಕುಮಾರ್, ರಮೇಶ್ ಲೋಕವಳ್ಳಿ ಹಾಗೂ ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವ ಸಂಘದ ಎಲ್ಲಾ ಪದಾಧಿಕಾರಿಗಳು ಹಾಗೂ ಮಲಯಾಳಿ ಸಂಘದ ಎಲ್ಲ ಪದಾಧಿಕಾರಿಗಳು ಹಾಗೂ ಕುಲಬಾಂಧವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ