ಮೂಡಿಗೆರೆ ಪಟ್ಟಣದಲ್ಲಿ ಅನಾಥವಾಗಿ ತಿರುಗಾಡುತ್ತಿದ್ದ ವ್ಯಕ್ತಿಯನ್ನು ಸಮಾಜಸೇವಕರ ತಂಡ ಅರೈಕೆ ಮಾಡಿ ಅನಾಥಾಶ್ರಮಕ್ಕೆ ಸೇರಿಸಿದ್ದಾರೆ.
ಮೂಡಿಗೆರೆ ಪಟ್ಟಣದಲ್ಲಿ ತಿರುಗುತ್ತಿದ್ದ ಆಂಧ್ರಪ್ರದೇಶದ ಮಲ್ಲೇಶ ಎಂಬುವ ವ್ಯಕ್ತಿಯನ್ನು ಕಾಫಿನಾಡು ಸಮಾಜ ಸೇವಕರು ಮಾತನಾಡಿಸಿ ಅವರನ್ನು ಸ್ವಚ್ಚಗೊಳಿಸಿ ಆಹಾರ ನೀಡಿ ನಂತರ ತುಮಕೂರು ಬಳಿಯ ಶಾರದಾಂಭ ಟ್ರಸ್ಟ್ ಆನಾಥಶ್ರಮಕ್ಕೆ ಸೇರಿಸಿದ್ದಾರೆ.
ಕಾಫಿನಾಡು ಸಮಾಜಸೇವಕರಾದ ಹಸೈನಾರ್ ಬಿಳಗುಳ, ಮುಸ್ತಾಕ್ ಬಿಳಗುಳ, ಆಟೋ ಅನೀಫ್, ರಫೀಕ್, ಗ್ರೀನ್ ಪಾರ್ಕ್ ಹೋಟೆಲ್ ಸಾಲಿ, ಕ.ಸಾ.ಪ. ಕಸಬಾ ಹೋಬಳಿ ಅಧ್ಯಕ್ಷರಾದ ಎಂ.ಎಸ್. ನಾಗರಾಜು ಉಪಸ್ಥಿತರಿದ್ದರು.




