areef 1

 

 

ಮೂಡಿಗೆರೆ ಪಟ್ಟಣದಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು , ಗುರುತು ಪತ್ತೆಗೆ ಪೊಲೀಸರು ಪ್ರಯತ್ನ ನಡೆಸಿದ್ದಾರೆ.

ಮೂಡಿಗೆರೆ ಪಟ್ಟಣದ ಗಂಗನಮಕ್ಕಿ ಪೆಟ್ರೋಲ್ ಬಂಕ್ ಸಮೀಪ ಅಂದಾಜು 35 ವರ್ಷದ ವ್ಯಕ್ತಿಯೊಬ್ಬರು ಅನಾಥವಾಗಿ ಬಿದ್ದಿದ್ದನ್ನು  ಇಂದು ಬೆಳಿಗ್ಗೆ ಗಮನಿಸಿದ ಸಾರ್ವಜನಿಕರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ.

ಮೂಡಿಗೆರೆ ಠಾಣೆ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ವ್ಯಕ್ತಿಯ ಬಾಯಲ್ಲಿ ನೊರೆ ಬಂದಿದ್ದು ಸಾವು ಬದುಕಿನ ನಡುವೆ ಇದ್ದದ್ದು ಗಮನಕ್ಕೆ ಬಂದಿತ್ತು. ನಂತರ ಮೂಡಿಗೆರೆ ಪೊಲೀಸರ ಸಮ್ಮುಖದಲ್ಲಿ ಸಾಮಾಜಿಕ ಸಕ್ರೀಯಾ ಸೇವಾ ಸಂಸ್ಥೆ ರಿ. ಇದರ ಅಧ್ಯಕ್ಷ ಫಿಶ್ ಮೋಣು, ಗೌರವ ಅಧ್ಯಕ್ಷ ಅಬ್ದುಲ್ ರಹಿಮಾನ್, ಉಪಾಧ್ಯಕ್ಷ ಆರೀಫ್ ಬಣಕಲ್ ಇವರ ನೆರವಿನಿಂದ ಮೂಡಿಗೆರೆ ಎಂ.ಜಿ.ಎಂ. ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಲು ಪ್ರಯತ್ನಿಸಿದರು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ವ್ಯಕ್ತಿ ಕೊನೆಯುಸಿರೆಳೆದಿದ್ದಾರೆ.

ಮೇಲ್ನೋಟಕ್ಕೆ ವ್ಯಕ್ತಿ ವಿಷ ಸೇವನೆ ಮಾಡಿದ್ದು ಕಂಡುಬಂದಿದ್ದು, ಮೃತ ದೇಹವನ್ನು ಮೂಡಿಗೆರೆ ಶವಾಗಾರದಲ್ಲಿ ಇರಿಸಿ ನಂತರ ಚಿಕ್ಕಮಗಳೂರು ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿ ಅಲ್ಲಿ ಇರಿಸಲಾಗಿದೆ. ಆದರೆ ಈ ವ್ಯಕ್ತಿ ಯಾರೂ ಎಂಬುದು ಇನ್ನೂ ಪತ್ತೆಯಾಗಿಲ್ಲ. ವ್ಯಕ್ತಿ ಅಂದಾಜು 30 ರಿಂದ 35 ವರ್ಷ ವಯಸ್ಸಾಗಿದ್ದು, ಜನಿವಾರ ಧರಿಸಿರುತ್ತಾರೆ.

ಈ ವ್ಯಕ್ತಿಯ ಗುರುತು ಪತ್ತೆಗಾಗಿ ಪೊಲೀಸರು ಪ್ರಯತ್ನ ನಡೆಸಿದ್ದಾರೆ. ಈ ವ್ಯಕ್ತಿಯ ಗುರುತು ಪರಿಚಯ ಸಿಕ್ಕವರು ಮೂಡಿಗೆರೆ ಠಾಣೆಗೆ ಮಾಹಿತಿ ನೀಡಬೇಕಾಗಿ (08263-220333), (9480805150) ಠಾಣಾಧಿಕಾರಿಗಳು ಕೋರಿದ್ದಾರೆ.

 

 

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ