IMG_20231026_144210_copy_422x587

 

 

ಚಾಲಕನ ನಿಯಂತ್ರಣ ತಪ್ಪಿ ಕಾರು ಕಂದಕಕ್ಕೆ ಉರುಳಿಬಿದ್ದು ಯುವಕನೋರ್ವ ಮೃತಪಟ್ಟಿರುವ ಘಟನೆ ನಡೆದಿದೆ.

ಕಳಸ ಬಾಳೂರು ರಸ್ತೆ ಅಬ್ರುಗುಡಿಗೆ ಎಂಬಲ್ಲಿ ದುರ್ಘಟನೆ.  200 ಅಡಿ ಆಳದ ಪ್ರಪಾತಕ್ಕೆ ಬಿದ್ದ ಮಾರುತಿ 800 ಕಾರು. ಕಾರು ಚಲಾಯಿಸುತ್ತಿದ್ದ ಅಂಜನ್ (38 ವರ್ಷ) ಸಾವು.

ಮೂಡಿಗೆರೆ ತಾಲೂಕಿನ ಜನ್ನಾಪುರ ಬಳಿಯ ಅಣಜೂರು ಗ್ರಾಮದ ದಿವಂಗತ ನಾಗೇಶ್ ಮತ್ತು ಶ್ರೀಮತಿ ಜಯಮ್ಮ ಎಂಬುವವರ ಪುತ್ರ.

ಜನ್ನಾಪುರದಲ್ಲಿ ಹೋಟೆಲ್ ನಡೆಸುತ್ತಿದ್ದ ಅಂಜನ್ ಇಂದು ಮುಂಜಾನೆ ಹೊರನಾಡು ದೇವಸ್ಥಾನಕ್ಕೆಂದು ತಮ್ಮ ಕಾರಿನಲ್ಲಿ ಒಬ್ಬರೆ ಪ್ರಯಾಣಿಸುತ್ತಿದ್ದರು.

ತಡೆಗೋಡೆ ಇಲ್ಲದೆ ಏಕಾಏಕಿ ಪ್ರಪಾತಕ್ಕೆ ಉರುಳಿ ಬಿದ್ದ ಕಾರು.

ಬಾಳೂರು ಠಾಣೆ ವ್ಯಾಪ್ತಿಯ ಅಬ್ರುಗುಡಿಗೆ ಎಂಬಲ್ಲಿ ಈ ಘಟನೆ ನಡೆದಿದೆ.

ಅಂಜನ್ ತಾಯಿ, ಓರ್ವ ಸಹೋದರನನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ