ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶ್ರೀ ಸೀತಾ ರಾಮ ದೇವಸ್ಥಾನಕ್ಕೆ ಮಧುಗುಂಡಿಯ ರಿವರ್ ಮಿಸ್ಟ್ ರೆಸಾರ್ಟ್ ಮಾಲಿಕರಾದ ಶ್ರೀಜಿತ್ ರವರು ಸೋಲಾರ್ ಲೈಟ್ ಗಳನ್ನು ಕೊಡಿಗೆಯಾಗಿ ನೀಡಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಹಲವಾರು ದಿನಗಳಿಂದ ಈ ಕ್ಷೇತ್ರಕ್ಕೆ ಸೋಲಾರ್ ಲೈಟ್ ಅನ್ನು ನೀಡಬೇಕೆಂದು ನಿರ್ಧರಿಸಿದೆ ಆದರೆ ಇಂದು ಕಾಲ ಕೂಡಿಬಂದಿದೆ ಈ ಕ್ಷೇತ್ರಕ್ಕೆ ಸಾವಿರಾರು ಭಕ್ತಾದಿಗಳು ಬರುವುದರಿಂದ ಇದರ ಉಪಯೋಗವನ್ನು ಪಡೆದುಕೊಳ್ಳಬೇಕೆಂದು ಅವರು ಹೇಳಿದರು.
ಧರ್ಮಸ್ಥಳ ಶಿವರಾತ್ರಿ ಪಾದಯಾತ್ರೆ ಸಮಯದಲ್ಲಿ ಸಾವಿರಾರು ಭಕ್ತಾದಿಗಳು ಇಲ್ಲಿ ಸೇರುವುದರಿಂದ ಸೋಲಾರ್ ಲೈಟ್ ಉಪಯೋಗಕ್ಕೆ ಬರುತ್ತದೆ ಎಂದರು.
ಈ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕರಾದ ಕಾರಂತ್ ದೇವಸ್ಥಾನದ ಮುಖ್ಯಸ್ಥರಾದ ನರೇಂದ್ರ ಗೌಡ .ವೇಣುಗೋಪಾಲ್ ಪೈ. ಅಶ್ವಥ್ .ಸಾಗರ್. ಮೊದಲಾದವರಿದ್ದರು


