vidya 1

 

 

ಮೂಡಿಗೆರೆ ತಾಲ್ಲೂಕಿನ ಬಣಕಲ್ ಶ್ರೀ ವಿದ್ಯಾಭಾರತಿ ವಿದ್ಯಾಸಂಸ್ಥೆಯಲ್ಲಿ ಆರೋಗ್ಯದೆಡೆಗೆ ನಮ್ಮ ಅಡುಗೆ ಎಂಬ ವಿನೂತನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಬಿ.ಶಿವರಾಮ ಶೆಟ್ಟಿ ವಹಿಸಿ ಮಾತನಾಡಿ ; ನಮ್ಮ ವಿದ್ಯಾ ಸಂಸ್ಥೆಯು ಈ ವಿನೂತನ ಕಾರ್ಯಕ್ರಮವನ್ನು ಆಯೋಜಿಸಿರುವ ಉದ್ದೇಶ ಮಕ್ಕಳು ಮತ್ತು  ತಾಯಂದಿರಿಗೆ ಆರೋಗ್ಯದ ಅರಿವು ಮೂಡಿಸುವ ಸಲುವಾಗಿ ಏಕೆಂದರೆ ಕುಟುಂಬದ ಆರೋಗ್ಯವನ್ನು ಕಾಪಾಡುವಲ್ಲಿ ತಾಯಂದಿರ ಪಾತ್ರ ಮುಖ್ಯವಾಗಿದೆ.ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಎಂ.ಜಿ.ಎಂ.ಸಾರ್ವಜನಿಕ ಆಸ್ಪತ್ರೆಯ ಪ್ರಸೂತಿ ತಜ್ಞೆ ಶ್ರೀಮತಿ ಡಾ. ಕಾವ್ಯ ಮಾತನಾಡಿ ಇದೊಂದು ಅರ್ಥಪೂರ್ಣ ಹಾಗೂ ಪ್ರಸ್ತುತ ಸಮಾಜಕ್ಕೆ ಅತ್ಯವಶ್ಯಕ ಕಾರ್ಯಕ್ರಮವಾಗಿದೆ.ಈ ನಿಟ್ಟಿನಲ್ಲಿ ವಿನೂತನ ಕಾರ್ಯಕ್ರಮವನ್ನು ಆಯೋಜಿಸಿದ ವಿದ್ಯಾ ಭಾರತಿ ವಿದ್ಯಾಸಂಸ್ಥೆಯ ಕಾರ್ಯ ಶ್ಲಾಘನೀಯ ಮತ್ತು ಸಮಾಜಕ್ಕೆ ಮಾದರಿ ಎಂದು ತಿಳಿಸಿದರು.

ಮೂಡಿಗೆರೆ ಹೊಯ್ಸಳ ಆಸ್ಪತ್ರೆಯ ವೈದ್ಯರಾದ ಶ್ರೀಮತಿ.ಡಾ. ಗ್ರೀಷ್ಮಾ ತೀರ್ಪುಗಾರರಾಗಿ ಭಾಗವಹಿಸಿ ಪ್ರಸ್ತುತ ಸಮಾಜದಲ್ಲಿ ಪೂರ್ವಜರ ಆಹಾರ ಪದ್ಧತಿ ಮರೆಯಾಗಿರುವ ಕಾಲಘಟ್ಟದಲ್ಲಿ ನಮ್ಮ ಸುತ್ತಮುತ್ತಲಿನಲ್ಲಿ ದೊರೆಯುವ ವಸ್ತುಗಳಿಂದ ಆರೋಗ್ಯಕರ ಆಹಾರ ಪದಾರ್ಥಗಳನ್ನು ಬಳಸುವಲ್ಲಿ ಕುಟುಂಬದ ತಾಯಂದಿರ ಪಾತ್ರ ಮಹತ್ವದ್ದು ಎಂದರು.

ಅತಿಥಿಗಳಾಗಿ ಬಣಕಲ್ ಪೋಲೀಸ್ ಠಾಣಾಧಿಕಾರಿ ಶ್ರೀಮತಿ ರೇಣುಕಾ, ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾದ ಕಣಚೂರು ಆನಂದ್ ಉಪಸ್ಥಿತರಿದ್ದರು.  ಬಣಕಲ್  ಶ್ರೀ ಕೃಷ್ಣ ಆಸ್ಪತ್ರೆಯ ವೈದ್ಯರಾದ  ಡಾ. ಚೈತನ್ಯ ತೀರ್ಪುಗಾರರಾಗಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಬಿ.ಪಿ.ಲಿಂಗಪ್ಪ, ಕೋಶಾಧ್ಯಕ್ಷರಾದ ಯು.ಪಿ.ರಾಮಚಂದ್ರ ಹೊಳ್ಳ. ಪ್ರೌಢಶಾಲಾ ವಿಭಾಗದ ಮುಖ್ಯಶಿಕ್ಷಕಿ ಟಿ.ಆರ್.ಮಾಲತಿ. ಪ್ರಾಥಮಿಕ ಶಾಲಾ ವಿಭಾಗದ ಮುಖ್ಯಶಿಕ್ಷಕ ನಾಗರಾಜು.ಸಿ. ಶಾಲೆಯ ಶಿಕ್ಷಕರು ಮತ್ತು ಪೋಷಕರು ಉಪಸ್ಥಿತರಿದ್ದರು.

ಸ್ಪರ್ಧೆಯಲ್ಲಿ ಶ್ರೀಮತಿ ರಾಜೇಶ್ವರಿ ದಿಲೀಪ್ ಕನ್ನಗೆರೆ – ಪ್ರಥಮ. ಶ್ರೀಮತಿ ಶಿಲ್ಪಾ ಲಿಂಗಪ್ಪ.ಬಣಕಲ್ – ದ್ವಿತೀಯ. ಶ್ರೀಮತಿ ಪ್ರೀತಿ ಬಣಕಲ್ – ತೃತೀಯ ಬಹುಮಾನ ಗಳಿಸಿದ್ದಾರೆ.

ಶ್ರೀಮತಿ ವೀಣಾ ಸುನೀಲ್ ಛೇಗು ಮತ್ತು ಶ್ರೀಮತಿ ಮಮತಾ ಇಂದಿರಾನಗರ ಬಣಕಲ್ ಇವರು ಸಮಾಧಾನಕರ ಬಹುಮಾನ ಪಡೆದರು.

 

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ