karthika deepa 4

 

 

ಪಟ್ಟಣದ ಶ್ರೀ ಪರಿಮಳಮ್ಮ ದೇವಿ ಸೇವಾ ಸಮಿತಿ ವತಿಯಿಂದ ಶ್ರೀ ಪರಿಮಳಮ್ಮ ದೇವಸ್ಥಾನದಲ್ಲಿ 3 ದಿನ ಕಾರ್ತಿಕ ಪೂಜಾ ದೀಪೋತ್ಸವ ಕಾರ್ಯಕ್ರಮ ಅದ್ದೂರಿಯಿಂದ ಆಚರಿಸಲಾಗುತ್ತಿದೆ.

ಭಾನುವಾರ ಕುರುಕುಮಕ್ಕಿ ಶ್ರೀ ಚೌಡೇಶ್ವರಿ ದೇವಸ್ಥಾನದಲ್ಲಿ ಕಾರ್ತಿಕ ವಿಶೇಷ ಪೂಜೆ ದೀಪೋತ್ಸವ ಮತ್ತು ಪ್ರಸಾದ ವಿನಿಯೋಗ ನಡೆಯಿತು. ಸೋಮವಾರ ಬೆಳಿಗ್ಗೆ ಮಹಿಳೆಯರು ಪಟ್ಟಣದ ಶ್ರೀ ಹಿರೇ ದೇವಿರಮ್ಮ ಬನದಿಂದ ಶ್ರೀ ಪರಿಮಳಮ್ಮ ದೇವಿ ಸನ್ನಿಧಿಗೆ ಗಂಗೆ ಹೊತ್ತು ತಂದರು. ಬಳಿಕ ದೇವಸ್ಥಾನದಲ್ಲಿ ಗಣಹೋಮ ಮತ್ತು ಕಲ ಹೋಮ ನಡೆದಿದ್ದು, ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಿತು.

ಇಂದು ಮಂಗಳವಾರ ಬೆಳಗ್ಗೆ ಶ್ರೀ ಪರಿಮಳಮ್ಮ ದೇವಿಯವರಿಗೆ ಪಂಚಾಮೃತ ಅಭಿಷೇಕ ಮತ್ತು ವಿಶೇಷ ಪೂಜೆ ನೆರವೇರಲಿದ್ದು, ಸಂಜೆ ದೇವಿಗೆ ಹೂವಿನ ಅಲಂಕಾರ, ಲಲಿತ ಸಹಸ್ರನಾಮದೊಂದಿಗೆ ಕುಂಕುಮಾರ್ಚನೆ, ದೀಪೋತ್ಸವ ನಡೆಯಲಿದೆ. ಅಲ್ಲದೇ ಮಂಗಳವಾರ ಬೆಳಗ್ಗೆ ಮಹಿಳೆಯರಿಗೆ ಹೂ ಕಟ್ಟುವ ಸ್ಪರ್ಧೆ ಮಧ್ಯಾಹ್ನ ರಂಗೋಲಿ ಸ್ಪರ್ಧೆ ಏರ್ಪಡಿಸಿದ್ದು, ಬಳಿಕ ವಿಶೇಷ ಆಕರ್ಷಣೆಯಾಗಿ ಸಿಡಿಮದ್ದು ಸಿಡಿಸುವ ಕಾರ್ಯಕ್ರಮ ನಡೆಯಲಿದೆ.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ