usthuvari 3_page-0001

 

 

ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಯಲ್ಲಿ ಕಳ್ಳತನವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಮತ್ತು ರಾಜ್ಯದ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರ ಕಛೇರಿಯಲ್ಲಿ ಕಳ್ಳತನವಾಗಿರುವ ಘಟನೆ ನಡೆದಿದೆ.

ಸಚಿವ ಕೆ.ಜೆ ಜಾರ್ಜ್  ಆಪ್ತ ಸಹಾಯಕನ ಬ್ಯಾಗ್ ಕಳ್ಳತನವಾಗಿದೆ. ಆ ಬ್ಯಾಗ್ ನಲ್ಲಿ ಪ್ರಮುಖ ಕಡತಗಳು, ದಾಖಲಾತಿಗಳು ಮತ್ತು 15 ಸಾವಿರ ಹಣ ಇತ್ತೆಂದು ತಿಳಿದುಬಂದಿದೆ.

ಸಚಿವರ ಆಪ್ತ ಸಹಾಯಕ ಮೋಗಣ್ಣ ಅವರಿಗೆ ಸೇರಿದ ಬ್ಯಾಗ್ ಸಹಿತ ಕಡತಗಳು ಮತ್ತು ಹಣ ಕಳ್ಳತನವಾಗಿದೆ.

ಚಿಕ್ಕಮಗಳೂರು ನಗರದ ಪ್ರವಾಸಿ ಮಂದಿರದಲ್ಲಿರುವ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಯಲ್ಲಿ ಬ್ಯಾಗ್ ಇಟ್ಟು ಮೊಗಣ್ಣ ಅವರು ಹೊರಹೋಗಿದ್ದು ಮರಳಿ ಬಂದು ನೋಡಿದಾಗ ಬ್ಯಾಗ್ ಕಣ್ಮರೆಯಾಗಿದೆ.

ಪ್ರವಾಸಿ ಮಂದಿರದಲ್ಲಿ   ಸಿಸಿ ಕ್ಯಾಮರಾಗಳು ಕೆಟ್ಟು ಹೋಗಿದ್ದು, ಇದನ್ನು ಬಳಸಿಕೊಂಡು ಕಛೇರಿಯೊಳಗೆ ಇದ್ದ ಬ್ಯಾಗ್ ಅನ್ನು ಕಳ್ಳರು ಎಗರಿಸಿದ್ದಾರೆ.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ