baby elephant 2

 

 

ಇತ್ತೀಚೆಗೆ ತಮಿಳುನಾಡು ಅರಣ್ಯ ಇಲಾಖೆಯ ಸಿಬ್ಬಂದಿ ಆನಮಲೈ ಹುಲಿ ಮೀಸಲು ಪ್ರದೇಶದಲ್ಲಿ  ಸಿಕ್ಕಿದ್ದ ಆನೆ ಮರಿಯನ್ನು ಅದರ ಹಿಂಡಿನೊಂದಿಗೆ ಮತ್ತೆ ಸೇರಿಸಿದ್ದರು. ಇದೀಗ ಆ ಮರಿ ಆನೆ ತನ್ನ ತಾಯಿಯ ತೋಳಿನಲ್ಲಿ ತಲೆ ಇಟ್ಟು ಮಲಗಿರುವ ಹೃದಯಸ್ಪರ್ಶಿ ಚಿತ್ರ ವೈರಲ್‌ ಆಗಿದೆ .

ರಾಜ್ಯ ಪರಿಸರ ಮತ್ತು ಅರಣ್ಯ ಕಾರ್ಯದರ್ಶಿ ಸುಪ್ರಿಯಾ ಸಾಹು ಐಎಎಸ್ ಈ ಫೋಟೊವನ್ನು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಶೇರ್‌ ಮಾಡಿದ್ದಾರೆ. ಅರಣ್ಯ ಕ್ಷೇತ್ರ ಸಿಬ್ಬಂದಿ ತೆಗೆದ ಈ ಫೋಟೊದಲ್ಲಿ ಮರಿ ಆನೆ ತನ್ನ ತಾಯಿಯ ಬೆಚ್ಚಗಿನ ಅಪ್ಪುಗೆಯಲ್ಲಿ ಮಧ್ಯಾಹ್ನದ ಕಿರು ನಿದ್ದೆ ಮಾಡುತ್ತಿರುವುದು ಕಂಡು ಬಂದಿದೆ. “ಕೆಲವೊಮ್ಮೆ ಒಂದು ಚಿತ್ರ ಸಾವಿರ ಪದಗಳನ್ನು ಆಡುತ್ತದೆ. ಬೇರ್ಪಟ್ಟ ಮರಿ ಆನೆ ಮರಳಿ ತನ್ನ ಕುಟುಂಬದೊಂದಿಗೆ ಸೇರಿದ ಬಳಿಕ ತನ್ನ ತಾಯಿಯ ತೋಳಿನಲ್ಲಿ ಸುರಕ್ಷಿತವಾಗಿ ವಿಶ್ರಾಂತಿ ಪಡೆಯುತ್ತಿದೆ. ಪ್ರಾಣಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕಣ್ಗಾವಲು ಇಡುತ್ತಿರುವ ಅರಣ್ಯ ಕ್ಷೇತ್ರ ಸಿಬ್ಬಂದಿ ಆನಮಲೈ ಹುಲಿ ಮೀಸಲು ಪ್ರದೇಶದಲ್ಲಿ ತೆಗೆದ ಚಿತ್ರ ಇದು” ಎಂದು ಸಾಹು  ತನ್ನ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಆನೆ ಮರಿಯನ್ನು ರಕ್ಷಿಸಿದ್ದ ಅರಣ್ಯ  ಸಿಬ್ಬಂದಿ

2023ರ ಡಿಸೆಂಬರ್‌ 30ರಂದು ಸುಮಾರು 4-5 ತಿಂಗಳ ಕಾಡಾನೆ ಮರಿಯೊಂದು ಏಕಾಂಗಿಯಾಗಿ ಆನಮಲೈ ಹುಲಿ ಮೀಸಲು ಪ್ರದೇಶದಲ್ಲಿ ಪತ್ತೆಯಾಗಿತ್ತು. ತನ್ನವರಿಂದ ಬೇರ್ಪಟ್ಟ  ಆನೆ ಮರಿ ತನ್ನ ತಾಯಿಗಾಗಿ ಹುಡುಕಾಟ ನಡೆಸುತ್ತಿತ್ತು. ಬಳಿಕ ಇದು ಅರಣ್ಯ ಕ್ಷೇತ್ರ ಸಿಬ್ಬಂದಿ ಕಣ್ಣಿಗೆ ಬಿತ್ತು. ಆನೆ ಹಿಂಡನ್ನು ಪತ್ತೆಹಚ್ಚಲು ಶೋಧ ತಂಡವನ್ನು ಕಳುಹಿಸಲಾಯಿತು. ಡ್ರೋನ್‌ಗಳ ಸಹಾಯದಿಂದ ಸುಮಾರು 3 ಕಿ.ಮೀ. ದೂರದಲ್ಲಿ ಆನೆ ಹಿಂಡನ್ನು ಗುರುತಿಸಲಾಯಿತು. ನಂತರ ಆನೆ ಮರಿಯನ್ನು ಅಲ್ಲಿಗೆ ಕರೆದೊಯ್ಯಲಾಯಿತು. ಮರಿ ಆನೆಯನ್ನು ಹಿಂಡಿನ ಬಳಿ ಬಿಡುವ ಮುನ್ನ ಅದರ ಶರೀರಕ್ಕೆ ಮಣ್ಣನ್ನು ಲೇಪಿಸಿ ಮಾನವ ಹಸ್ತಕ್ಷೇಪದ ಕುರುಹು ಅಳಿಸಲಾಗಿತ್ತು. ಮರಿ ಆನೆಯನ್ನು ತಾಯಿ ಮತ್ತೆ ತನ್ನ ಮಡಿಲಿಗೆ ಸೇರಿಸಿಕೊಂಡಿತ್ತು.

 

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ