ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರ ಅಸ್ತಿತ್ವಕ್ಕೆ ಬಂದಿದ್ದು, ಕಾಂಗ್ರೇಸ್ ಮುಖಂಡ ಎಂ.ಸಿ. ಶಿವಾನಂದ ಸ್ವಾಮಿ ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.
ಉಪಾಧ್ಯಕ್ಷರಾಗಿ ಸಖರಾಯಪಟ್ಟಣದ ಎಸ್. ಎನ್ ಮಂಜುನಾಥ್, ತರೀಕೆರೆಯ ಸಮಿಉಲ್ಲಾ ಷರೀಫ್, ಆಲ್ದೂರು ಹವ್ವಳ್ಳಿಯ ಎಚ್.ಎಸ್. ಕೃಷ್ಣೆಗೌಡ, ನಿಡಘಟ್ಟದ ಎನ್.ಎಸ್. ಹೇಮಾವತಿ, ಕಡೂರಿನ ಬಿ.ಜಿ. ಚಂದ್ರ ಮೌಳಿ ನೇಮಕವಾಗಿದ್ದಾರೆ.
15 ಜನ ಸದಸ್ಯರು ಹಾಗೂ ಅಪರ ಜಿಲ್ಲಾಧಿಕಾರಿಯನ್ನು ಸದಸ್ಯ ಕಾರ್ಯದರ್ಶಿಯಾಗಿ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.




