ಯುಗಾದಿ ದಿನವೇ (ಏಪ್ರಿಲ್ 09) ಕರ್ನಾಟಕದ ಹಲವೆಡೆ ಮಳೆಯಾಗಿದೆ. ಇದೊಂದಿಗೆ ಬಿಸಿಲಿನ ತಾಪಕ್ಕೆ ಬೆಂಡಾದ ಜನರಿಗೆ ಮಳೆರಾಯ ಕೊಂಚ ತಂಪೆರೆದಿದ್ದಾನೆ. ಯುಗಾದಿ ಹಬ್ಬದ ದಿನವೇ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮೊದಲ ಮಳೆ ಸುರಿದಿದೆ. ಕೊಪ್ಪಳ, ಹಾವೇರಿ ಮತ್ತು ಬಾಗಲಕೋಟೆಯಲ್ಲಿ ಮಳೆಯಾಗಿದ್ದು, ಬರಗಾಲದಲ್ಲಿ ವರುಣನ ಆಗಮನದಿಂದ ಜನರಿಗೆ ಖುಷಿ ತಂದಿದೆ.
ರಾಜ್ಯದಲ್ಲಿ ಈ ಭಾರಿಯ ಭೀಕರ ಬರಗಾಲ ಮತ್ತು ಸುಡು ಬಿಸಿಲಿನ ಝಳಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. , ರಣ, ರಣ ಬಿಸಿಲಿನ ತಾಪಕ್ಕೆ ಬೆಂದಿದ್ದ ಕರ್ನಾಟಕದ ಜನತೆಗೆ ಯುಗಾದಿಯ ದಿನವೇ ಮಳೆರಾಯ ತಂಪೆರೆದಿದ್ದಾನೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಂಗಳವಾರ ಮಳೆಯಾಗಿದೆ. ಕೊಪ್ಪಳ, ವಿಜಯನಗರ, ಹಾವೇರಿ ಮತ್ತು ಬಾಗಲಕೋಟೆ ಜಿಲ್ಲೆಯಲ್ಲಿ ವರುಣ ತನ್ನ ಕೃಪೆ ತೋರಿಸಿದ್ದಾನೆ. ಬಿಸಿಲಿನ ತಾಪಕ್ಕೆ ಸುಸ್ತಾಗಿದ್ದ ಜನ ದಿಡೀರನೇ ಸುರಿದ ಮಳೆಯನ್ನು ಕಂಡು ಕುಳಿದು ಕುಪ್ಪಳಿಸಿದ್ದಾರೆ.
ಇನ್ನೂ ಮೂರ್ನಾಲ್ಕು ದಿನ ರಾಜ್ಯದಲ್ಲಿ ಮಳೆಯ ವಾತಾವರಣ ಇರಲಿದ್ದು, ಗುರುವಾರ ಮತ್ತು ಶುಕ್ರವಾರ ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.



