avli sahodariyaru

 

 

ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿ ಪರೀಕ್ಷೆಯಲ್ಲಿ ಸಮಾನ ಅಂಕ ಪಡೆದು ಅವಳಿ ಸಹೋದರಿಯರು ಅಚ್ಚರಿ ಮೂಡಿಸಿದ್ದಾರೆ.

ಹಾಸನದದಲ್ಲಿ ಈ ಹಿಂದೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಹಿರಿಯ ಉಪ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸಿದ್ದ ವಿನೋದ್ ಚಂದ್ರ ಅವರ ಅವಳಿ ಪುತ್ರಿಯರಾದ ಚುಕ್ಕಿ ಚಂದ್ರ ಮತ್ತು ಇಬ್ಬನಿ ಚಂದ್ರ ಈ ಅಚ್ಚರಿಯ ಸಾಧನೆ ಮಾಡಿದ್ದಾರೆ.

ಇತ್ತೀಚೆಗೆ ಪ್ರಕಟವಾದ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಇಬ್ಬರೂ 600ರಲ್ಲಿ 571 ಅಂಕಗಳನ್ನು ಪಡೆದಿದ್ದರು.  ಎಸೆಸೆಲ್ಸಿ ಪರೀಕ್ಷೆಯಲ್ಲೂ ಇವರಿಬ್ಬರೂ 625ರಲ್ಲಿ 620 ಅಂಕಗಳನ್ನು ಪಡೆದು  ಸಾಧನೆ ಮಾಡಿದ್ದರು.

ನನ್ನ ಅವಳಿ ಪುತ್ರಿಯರು ಎಸೆಸೆಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಸಮಾನ ಅಂಕಗಳನ್ನು ಗಳಿಸಿದ್ದಾರೆ. ಬಹುಶ: ಭಿನ್ನ ಅಂಕಗಳನ್ನು ಪಡೆದರೆ ಬೇಸರಿಸಿಕೊಳ್ಳುತ್ತಾರೆ ಎಂಬ ಕಾರಣಕ್ಕೆ ದೇವರೇ ಈ ರೀತಿ ಮಾಡಿದ್ದಾರೆ.  ಎಸೆಸೆಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಏಕರೂಪದ ಅಂಕಗಳಿಸಿರುವುದು ಅಚ್ಚರಿ ತಂದಿದೆ.

ವಿನೋದ್ ಚಂದ್ರ, ವಿದ್ಯಾರ್ಥಿನಿಯರ ತಂದೆ

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ