mane 2

 

 

ಮನೆಯ ಮೇಲೆ ಮರವೊಂದು ಬಿದ್ದು ಮನೆ ಭಾಗಶ‍ಃ ಹಾನಿಯಾಗಿರುವ ಘಟನೆ ನಡೆದಿದೆ.

ಮೂಡಿಗೆರೆ ತಾಲ್ಲೂಕಿನ ಬಾಳೂರು ಹೋಬಳಿ ಜಾವಳಿ ಸಮೀಪದ ಮಲೆಮನೆ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಮಲೆಮನೆ ಗ್ರಾಮದ ಸುಧಾಕರ್ ಎಂಬುವವರ ಮನೆ ಮೇಲೆ ಬುಧವಾರ ಮುಂಜಾನೆ 4 ಗಂಟೆಯ ಸಮಯದಲ್ಲಿ ಮನೆಯ ಸಮೀಪದಲ್ಲಿದ್ದ ಬಗನೆ ಮರವು ಉರುಳಿ ಬಿದ್ದಿದೆ. ಮರಬಿದ್ದ ಸಮಯದಲ್ಲಿ ಕುಟುಂಬದವರು ಮನೆಯ ಮನೆಯ ಒಳಗೆ ಮಲಗಿದ್ದರು. ಅದೃಷ್ಟಾವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸುಧಾಕರ್ ಅವರು ಕೃಷಿ ಕಾರ್ಮಿಕರಾಗಿದ್ದು, ಅವರ ಮನೆಯು ಶಿಥಿಲವಾಗಿದೆ. ಇದೀಗ ಮನೆಯ ಮೇಲೆ ಮರಬಿದ್ದು ನಷ್ಟ ಸಂಭವಿಸಿದೆ. ಅವರಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಮತ್ತು ಹೊಸ ಮನೆ ಮಂಜೂರು ಮಾಡಿಕೊಡಬೇಕಾಗಿ ಸ್ಥಳೀಯರು ಆಗ್ರಹಿಸಿದ್ದಾರೆ.


Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ