ಮಗನ ಎರಡೂ ಕಿಡ್ನಿಗಳು ವೈಫಲ್ಯ ಹೊಂದಿದ್ದು, ಮಗನ ಜೀವ ಉಳಿಸಿಕೊಳ್ಳಲು ತಾಯಿಯೊಬ್ಬರು ನೆರವಿಗೆ ಮೊರೆ ಇಡುತ್ತಿದ್ದಾರೆ.
ಮೂಡಿಗೆರೆ ತಾಲ್ಲೂಕು, ಸಂಗಮಾಪುರ ಗ್ರಾಮದ ರತ್ನಮ್ಮ ಎನ್ನುವವರ 25 ವರ್ಷಗಳ ತುಂಬು ಹರೆಯದ ಮಗ ಗುರುರಾಜ್ ನ ಎರಡೂ ಕಿಡ್ನಿಗಳು ವೈಫಲ್ಯ ಹೊಂದಿವೆ.
ಬೆಂಗಳೂರಿಲ್ಲಿ ಫುಡ್ ಡಿಲಿವೆರಿ ಕೆಲಸ ಮಾಡುತ್ತಿದ್ದ ಗುರುರಾಜ್ ಈಗ ಕಿಡ್ನಿ ವೈಫಲ್ಯದಿಂದ ಕೆಲಸವನ್ನು ಮಾಡಲಾಗದ ಸ್ಥಿತಿಯಲ್ಲಿ ಮರಳಿ ತನ್ನ ಮನೆಗೆ ಬಂದಿದ್ದಾರೆ. ತಾಯಿ ರತ್ನಮ್ಮ ಗಂಡನನ್ನು ಕಳೆದುಕೊಂಡಿದ್ದು, ಮಗನ ದುಡಿಮೆಯಿಂದ ಮತ್ತು ಸರ್ಕಾರದ ಪಿಂಚಣಿ ಹಣದಿಂದ ಜೀವನ ಸಾಗಿಸುತ್ತಿದ್ದವರು ಈಗ ಮಗ ಕಿಡ್ನಿ ವೈಫಲ್ಯದಿಂದ ಮನೆಗೆ ಮರಳಿದ್ದು, ಮಗನಿಗೆ ಡಯಲಿಸೀಸ್ ಮತ್ತು ಚಿಕಿತ್ಸೆಗೆ ಹಣಹೊಂದಿಸಲು ತಾಯಿ ಪರದಾಡುತ್ತಿದ್ದಾರೆ.
ಮಗನ ಜೀವ ಉಳಿಸಿಕೊಳ್ಳಲು ಜನರ ಬಳಿ ನೆರವಿಗಾಗಿ ಮೊರೆ ಇಟ್ಟಿದ್ದಾರೆ. ಸಹೃದಯಿಗಳು ತಮ್ಮ ಕೈಲಾದ ಸಹಾಯ ಮಾಡಬೇಕೆಂದು ಬೇಡಿಕೊಂಡಿದ್ದಾರೆ.
ಮೊಬೈಲ್ : ಗುರುರಾಜ್ 7019397157, ರತ್ನಮ್ಮ : 9019141494
ಗುರುರಾಜ್ ಅವರ ಬ್ಯಾಂಕ್ ಖಾತೆ ವಿವರ
Ac Name : Guru Raj H.P
Ac.No – 309015914817
IFSC Code : RATN0000383
RBL BANK, KORAMANGALA, BANGALORE
Googlepay : 7019397157


