manasika

 

 

ಮೂಡಿಗೆರೆ ತಾಲೂಕು  ಜನ್ನಾಪುರ ಬಸ್ ಸ್ಟ್ಯಾಂಡ್ ನಲ್ಲಿ ಸುಮಾರು ಒಂದು ತಿಂಗಳಿಂದ ಹಿಂದಿ ಮಾತನಾಡುವ ಪಶ್ಚಿಮ ಬಂಗಾಳ ಮೂಲದ ವ್ಯಕ್ತಿಯೊಬ್ಬರು ಮಾನಸಿಕ ಅಸ್ವಸ್ಥತೆಯಿಂದ ಬಳಲಿ ತಿರುಗಾಡುತ್ತಿದ್ದರು. ಈ ವ್ಯಕ್ತಿಯನ್ನು ಮೂಡಿಗೆರೆಯ ಸಾಮಾಜಿಕ ಸಕ್ರಿಯ ಸೇವಾ ಸಂಸ್ಥೆಯ ತಂಡದವರಾದ ಫಿಶ್ ಮೋಣು, ಸಚ್ಚಿನ್ ಮರೆಬೈಲು, ಅಬ್ದುಲ್ ರಹಿಮಾನ್, ಹಸೇನರ್ ಬಿಳಗುಳ, ಅಂಬುಲೆನ್ಸ್ ಡ್ರೈವರ್ ರಹಿಮಾನ್, ಆರಿಫ್… ಇವರ ತಂಡದವರ ನೇತೃತ್ವದಲ್ಲಿ ಉಪಚರಿಸಿ ವ್ಯಕ್ತಿಗೆ ಸ್ನಾನ ಮಾಡಿಸಿ ಆಶ್ರಮಕ್ಕೆ ಸೇರಿಸಲಾಗಿದೆ.

ಈ ಕಾರ್ಯದಲ್ಲಿ ಚಿನ್ನಿಗ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಎನ್, ಆರ್, ಲಕ್ಷ್ಮಿ, ಅವರ ಸಹೋದರಿ.. ವೀಣಾ, ಜೆ .ಆರ್.ಪ್ರಹ್ಲಾದ್ ಗ್ರಾಮ ಪಂಚಾಯಿತಿ ಸದಸ್ಯರುಗಳು,  ಚಿನ್ನಿಗ -ಜನ್ನಾಪುರ  ವರ್ತಕರು ಮತ್ತು ವರ್ತಕರ ಸಂಘ ದ ಪದಾಧಿಕಾರಿಗಳು ಸಹಕಾರ ನೀಡಿದರು.

ವ್ಯಕ್ತಿಗೆ ಬಿಸಿ ನೀರಿನಲ್ಲಿ ಸ್ನಾನ ಮಾಡಿಸಿ ಹೊಸ ಬಟ್ಟೆ ಧರಿಸಿ  ಬೆಂಗಳೂರು ಬನ್ನೇರುಘಟ್ಟದ ಅನಾಥ ಆಶ್ರಮಕ್ಕೆ ಸೇರಿಸಲಾಯಿತು.  ಸಮಾಜಸೇವಕರು ಮತ್ತು ಗ್ರಾಮ ಪಂಚಾಯಿತಿ ಪ್ರತಿನಿಧಿಗಳು ಮತ್ತು ವರ್ತಕರ ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ