ಫಲ್ಗುಣಿ ಪದ್ಮಾವತಿ ದೇವಿ ಯುವಕ ಸಂಘದಿಂದ ಸದಸ್ಯರಿಂದ ಮಹೇಂಧ್ರ ಕುಮಾರ್ ಅವರಿಗೆ ಸನ್ಮಾನ
ಫಲ್ಗುಣಿ ಒಕ್ಕೂಟ ವಾಟ್ಸಾಪ್ ಗ್ರೂಪ್ ನಲ್ಲಿ ಗ್ರೂಪ್ ನ ಸದಸ್ಯರಿಗೆ ಗಾಯನ ಸ್ಪರ್ಧೆಗಳನ್ನು ಏರ್ಪಡಿಸುತ್ತಿದ್ದು ಇದರಿಂದ ಉದಯೋನ್ಮುಖ ಯುವ ಗಾಯಕರಿಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಫಲ್ಗುಣಿ ಒಕ್ಕೂಟ ಗ್ರೂಪ್ ನ ಸಂಸ್ಥಾಪಕ, ರಾಜ್ಯ ಯುವ ಜಾಗೃತಿ ಮತದಾರರ ವೇದಿಕೆ ಅಧ್ಯಕ್ಷ ಮಹೇಂದ್ರಕುಮಾರ್ ಪಲ್ಗುಣಿ ತಿಳಿಸಿದ್ದಾರೆ.

ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಅವರು ಯುವಕರು ಸದಾ ಒತ್ತಡದಲ್ಲಿ ಇರುವ ಕಾರಣ ಇಂತಹ ಗಾಯನ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ ಈ ಗಾಯನ ಸ್ಪರ್ಧೆ ಯಿಂದ ಒತ್ತಡ ದ ನಿವಾರಣೆ ಸಾಧ್ಯವಿದೆ, ಜೊತೆಗೆ ತಮ್ಮ ಪ್ರತಿಭೆ ಪ್ರದರ್ಶನಕ್ಕೆ ಉತ್ತಮ ವೇದಿಕೆ ಒದಗಿಸಿದಂತಾಗುತ್ತದೆ ಎಂದಿದ್ದಾರೆ.
ಈ ಒಕ್ಕೂಟ ದಲ್ಲಿ ಸರಿಸುಮಾರು, ನಾನೂರು ಜನರಿದ್ದಾರೆ ಎಂದಿದ್ದಾರೆ. ವಾಟ್ಸಾಪ್ ಏನೇನೆಲ್ಲಾ ಕ್ರಿಯೇಟಿವಿಟಿ ಮಾಡಬಹುದು ಎಂದು ವಿವರಿಸಿದರು.
ಮೊದಲು ವಾಟ್ಸಾಪ್ ಅಲ್ಲಿ ಅಡ್ಮಿನ್ ಚುನಾವಣೆ ಮಾಡಿತ್ತು ಗೆದ್ದವರನ್ನು ಅಡ್ಮಿನ್ ಮಾಡಿತ್ತು ನಂತರ ರಂಗೋಲಿ ಸ್ಪರ್ಧೆ ಮಾಡಿತ್ತು, ಈಗ ಗಾಯನ ಸ್ಪರ್ಧೆ ಏರ್ಪಡಿಸಿದೆ ಗೆದ್ದವರಿಗೆ ಬಹುಮಾನ ನೀಡಲಾಗುತ್ತಿದೆ ಎಂದಿದ್ದಾರೆ.



