ಸಾಂದರ್ಭಿಕ ಚಿತ್ರ
ಚಿಕ್ಕಮಗಳೂರು ಸಮೀಪದ ಕಾಫಿ ತೋಟವೊಂದರಲ್ಲಿ ಎರಡು ಹುಲಿಗಳು ಕಾಣಿಸಿಕೊಂಡಿವೆ. ಚಿಕ್ಕಮಗಳೂರು ಸಮೀಪದ ಹಿರೇಕೊಳಲೆ ಗ್ರಾಮದಲ್ಲಿ ಕಾಫಿ ತೋಟವೊಂದರಲ್ಲಿ ಎರಡು ಹುಲಿಗಳು ಕಂಡುಬಂದಿವೆ.
ಹಿರೇಕೊಳಲೆ ಗ್ರಾಮದ ಶ್ರೀಕಂಠೇಗೌಡ ಅವರ ಕಾಫಿ ತೋಟದಲ್ಲಿ ಶನಿವಾರ ಸಂಜೆ ಹುಲಿಗಳು ಘರ್ಜಿಸಿದ ಶಬ್ಧ ಕೇಳಿ ಬಂದಿದೆ. ಕೂಡಲೇ ಕೆಲಸ ಮಾಡುವ ಕಾರ್ಮಿಕರನ್ನು ಕರೆದುಕೊಂಡು ತೋಟಕ್ಕೆ ಹೋಗಿ ನೋಡಿದಾಗ ಎರಡು ಹುಲಿಗಳು ಪ್ರತ್ಯಕ್ಷವಾಗಿದೆ.
ಶ್ರೀಕಂಠೇಗೌಡರು ಹಾಗೂ ತೋಟದ ಕಾರ್ಮಿಕರು ಜೋರಾಗಿ ಅರಚಿದ್ದು. ಆಗ ಹುಲಿಗಳು ಸ್ಥಳದಿಂದ ಓಡಿ ಹೋಗಿವೆ ಎಂದು ತಿಳಿದುಬಂದಿದೆ.
ಸ್ಥಳದಲ್ಲಿ ಹುಲಿಹೆಜ್ಜೆಗಳು ಮೂಡಿರುವುದು ಸ್ಪಷ್ಟವಾಗಿ ಗೋಚರಿಸಿದೆ. ಇದರಿಂದ ಸುತ್ತಮುತ್ತಲ ಕಾಫಿ ಎಸ್ಟೇಟ್ ಮಾಲೀಕರು, ಸಾರ್ವಜನಿಕರು ಮತ್ತು ಕಾರ್ಮಿಕರಲ್ಲಿ ಆತಂಕ ಮೂಡಿದೆ.




