ಕರ್ನಾಟಕ ರಕ್ಷಣಾ ವೇದಿಕೆ ಮೂಡಿಗೆರೆ ತಾಲ್ಲೂಕು ಯುವ ಘಟಕದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಮೂಡಿಗೆರೆ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಅಭಿಜಿತ್ ಎಚ್. ಬಿ., ಉಪಾಧ್ಯಕ್ಷರಾಗಿ ಅನಿಲ್ ಕುಮಾರ್ ಎನ್., ಪ್ರದಾನ ಕಾರ್ಯದರ್ಶಿಯಾಗಿ ಪ್ರತಾಪ್, ಕಾರ್ಯದರ್ಶಿಯಾಗಿ ಗಣೇಶ,
ಸಂಘಟನ ಕಾರ್ಯದರ್ಶಿಗಳಾಗಿ ಸಫ್ರೀಜ್, ಕಿಶೋರ್. ಎ.ಎಸ್, ಶಿವಪ್ರಸಾದ್. ಪಿ. ಜಿ, ರಂಜಿತ್, ನಿಖಿಲ್, ರವಿ ಅಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ತಾಲ್ಲೂಕು ಅಧ್ಯಕ್ಷರಾದ ವಿನೋದ್ ಬಿದರಳ್ಳಿ ಮಾತನಾಡಿ ; ಕನ್ನಡ ನಾಡು ನುಡಿ ಸ್ವಾಭಿಮಾನ ರಕ್ಷಣೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ಕನ್ನಡ ಪರ ಸಂಘಟನೆಗಳು ಉತ್ತಮ ಕಾರ್ಯ ನಿರ್ವಹಿಸುತ್ತಿವೆ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡ ಪರ ಸಂಘಟನೆ ಮತ್ತು ಕಾರ್ಯಚಟುವಟಿಕೆಗಳಲ್ಲಿ ಭಾಗವಹಿಸಿ ಕನ್ನಡ ನಾಡು ನುಡಿಗೆ ತಮ್ಮ ಸೇವೆ ಸಲ್ಲಿಸಬೇಕು ಎಂದು ಕರೆ ನೀಡಿದರು.




