IMG20241025120332_copy_381x215

 

 

ಹಿರಿಯ ರಾಜಕೀಯ ಮುತ್ಸದ್ದಿ, ಸಂಸದೀಯ ಪಟು, ಮಾಜಿ ಸಚಿವ ದಿವಂಗತ ಡಿ.ಬಿ. ಚಂದ್ರೇಗೌಡರ ನೆನಪಿನ ಸ್ಮಾರಕವನ್ನು ಲೋಕಾರ್ಪಣೆ ಮಾಡಲಾಯಿತು.

ಚಂದ್ರೇಗೌಡ ಒಂದನೇ ವರ್ಷದ ಪುಣ್ಯತಿಥಿಯಂದು ದಾರದಹಳ್ಳಿ ಪೂರ್ಣಚಂದ್ರ ಎಸ್ಟೇಟ್ ನ ಅವರ ಸಮಾಧಿ ಸ್ಥಳದಲ್ಲಿ ನಿರ್ಮಿಸಿರುವ ಸ್ಮಾರಕವನ್ನು ಅವರ ಪತ್ನಿ ಪೂರ್ಣ ಅವರು ದೀಪಬೆಳಗುವ ಮೂಲಕ ಅನಾವರಣಗೊಳಿಸಿದರು.

ಈ ಸಂದರ್ಭದಲ್ಲಿ ಸಾಹಿತಿ ಹಳೇಕೋಟೆ ರಮೇಶ್ ಅವರು ಮಾತನಾಡಿ ಡಿ.ಬಿ. ಚಂದ್ರೇಗೌಡರು ರಾಜ್ಯ ಮತ್ತು ರಾಷ್ಟ್ರದ ಒಬ್ಬ ಅಪರೂಪದ ರಾಜಕೀಯ ನೇತಾರರಾಗಿದ್ದರು. ನಾಲ್ಕೂ ಸದನಗಳ ಸದಸ್ಯರಾಗಿ, ವಿರೋಧ ಪಕ್ಷದ ನಾಯಕರಾಗಿ, ಸಭಾಪತಿಯಾಗಿ, ಸಚಿವರಾಗಿ ಅವರ ಅವರ ರಾಜಕೀಯ ಜೀವನ ಅತ್ಯಂತ ಸ್ಪುಟವಾಗಿ ಮತ್ತು ಪ್ರಾಮಾಣಿಕವಾಗಿ ಇತ್ತು. ಅವರೊಬ್ಬ ಅಪರೂಪದ ನಾಯಕರಾಗಿದ್ದರು, ಆಳವಾದ ಜ್ಞಾನವನ್ನು ಹೊಂದಿದ್ದರು. ಕುವೆಂಪು ಅವರ ವಿಚಾರಗಳಿಂದ ಅಪಾರವಾಗಿ ಪ್ರಭಾವಿತರಾಗಿದ್ದರು ಎಂದರು.

ಚಂದ್ರೇಗೌಡರ ಪುತ್ರಿ ಮತ್ತು ಮುಂಬೈ ಹೈಕೋರ್ಟ್ ವಕೀಲೆ ವೀಣಾ ಅವರು ಮಾತನಾಡಿ ; ನಮ್ಮ ತಂದೆಯವರೇ ತಮ್ಮ ಆತ್ಮಕಥನದಲ್ಲಿ ಹೇಳಿಕೊಂಡಿರುವಂತೆ “ಸಾಮಾನ್ಯರಲ್ಲಿ ಸಾಮಾನ್ಯ , ಮಲೆನಾಡಿನಲ್ಲಿ ಹುಟ್ಟಿಬೆಳೆದ ಕಾಡು ಸಸಿ ನಾನು” ಎಂಬಂತೆ ಅವರಿಗೆ ಮಲೆನಾಡು, ಚಿಕ್ಕಮಗಳೂರು, ಮೂಡಿಗೆರೆ ಎಂದರೆ ವಿಶೇಷ ಆಕರ್ಷಣೆ ಇತ್ತು. ಇಲ್ಲಿನ ಪರಿಸರ ಅವರ ಬದುಕಿನ ಮೇಲೆ ಗಾಢವಾದ ಪ್ರಭಾವ ಬೀರಿತ್ತು. ಹಾಗಾಗಿ ಅವರ ಸ್ಮಾರಕದಲ್ಲಿ ನಾಡಿನ ಜೀವನದಿಗಳಾದ ಹೇಮಾವತಿ, ತುಂಗಾ, ಭದ್ರ, ಕಾವೇರಿ ಮತ್ತು ನೇತ್ರಾವತಿ ನದಿಗಳಿಂದ ಆಯ್ದ ಶಿಲೆಗನ್ನು ಬಳಸಲಾಗಿದೆ ಎಂದರು.


ಮಾಜಿ ಸಭಾಪತಿ ಬಿ.ಎಲ್.ಶಂಕರ್, ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಂ.ಎಲ್. ಮೂರ್ತಿ, ಮೂಡಿಗೆರೆ ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಹಳಸೆ ಶಿವಣ್ಣ, ಮೂಡಿಗೆರೆ ತಾ.ಪಂ. ಮಾಜಿ ಅಧ್ಯಕ್ಷ ಡಿ.ಬಿ.ಜಯಪ್ರಕಾಶ್ ಸೇರಿದಂತೆ ಅನೇಕ ಗಣ್ಯರು, ಡಿ.ಬಿ. ಚಂದ್ರೇಗೌಡರ ಅಭಿಮಾನಿಗಳು, ಕುಟುಂಬದ ಸದಸ್ಯರು, ಬಂಧುಗಳು, ಗ್ರಾಮಸ್ಥರು ಸ್ಮಾರಕಕ್ಕೆ ಭೇಟಿ ನೀಡಿ ತಮ್ಮ ಗೌರವ ನಮನ ಸಲ್ಲಿಸಿದರು.

ಶ್ರೀಮತಿ ರೇಷ್ಮಾ ಸುಧೀರ್ ಅವರು ಕುವೆಂಪು ಅವರ ಓ ನನ್ನ ಚೇತನ ಗೀತೆಯ ಮೂಲಕ ಗೀತಾ ನಮನ ಸಲ್ಲಿಸಿದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ