coffee 2

 

 

ಚಿಕ್ಕಮಗಳೂರು ನಗರದ ಎಐಟಿ ವೃತ್ತದಲ್ಲಿರುವ ಒಕ್ಕಲಿಗರ ಸಮುದಾಯ ಭವನದಲ್ಲಿ ಜಿಲ್ಲೆಯ ಎಲ್ಲಾ ಕಾಫಿ ಬೆಳೆಗಾರರು ಮತ್ತು ಕಾಫಿ ಮಂಡಳಿ ವಿಶೇಷ ಸಭೆಯನ್ನು ಆಯೋಜಿಸಲಾಗಿತ್ತು. ಸಭೆಯಲ್ಲಿ  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಕ್ರಮ ಅಮಟೆ ಮಾತನಾಡಿ, ಜಿಲ್ಲೆಯಲ್ಲಿ ತುಂಬಾ ಬೇಡಿಕೆ ಇರುವ ನಾಗರೀಕ ಬಂದೂಕು ತರಬೇತಿಯನ್ನು ಈ ವರ್ಷದ ಕೊನೆಯಲ್ಲಿ ಅಥವಾ ಮುಂದಿನ ಜನವರಿಯಲ್ಲಿ ತರಬೇತಿ ನೀಡಲು ಯೋಜನೆ ರೂಪಿಸಿದ್ದೇವೆ ಎಂದರು.

ಈಗಾಗಲೇ ಜಿಲ್ಲೆಯಲ್ಲಿ ಸುಮಾರು 10 ಸಾವಿರ ಪರವಾನಗಿ ಸಹಿತ ಬಂದೂಕುಗಳಿವೆ, ಈ ಪೈಕಿ ಪರವಾನಗಿ ಪಡೆದಿರುವವರಲ್ಲಿ ಬಹುತೇಕರಿಗೆ ಬಂದೂಕು ಉಪಯೋಗಿಸುವ ಕುರಿತು ತರಬೇತಿ ಹೊಂದಿಲ್ಲ ಎಂಬುದು ಪರಿಶೀಲಿಸಿದಾಗ ತಿಳಿದುಬಂದಿದೆ ಎಂದು ಹೇಳಿದರು.

ಕಳೆದ ಎರಡು ವರ್ಷಗಳಿಂದ ಈ ತರಬೇತಿಯನ್ನು ನೀಡಲಾಗಿಲ್ಲ, ಜಿಲ್ಲೆಯಲ್ಲಿ ಮೂರು ಭಾಗದಲ್ಲಿ ತರಬೇತಿ ನೀಡಲು ಯೋಜನೆ ರೂಪಿಸಿದ್ದು, ಈ ಅವಧಿಯಲ್ಲಿ ತರಬೇತಿ ಪಡೆದವರು ಮನೆಯಲ್ಲಿರುವ ಬಂದೂಕು ಸಾಗಾಣೆಗೆ ಮೊದಲ ಆದ್ಯತೆ ನೀಡುತ್ತೇವೆ ಎಂದು ತಿಳಿಸಿದರು.

ಕಾಫಿ ಬೆಳೆಗಾರರ ಸಮಸ್ಯೆ ನಿವಾರಣೆಗೆ ಸರಿಯಾದ ವೇದಿಕೆ ಈವರೆಗೆ ಸಿಕ್ಕಿರಲಿಲ್ಲ. ಅದು ಇಂದು ಕೂಡಿಬಂದಿದೆ, ಬಂದೂಕು ಪರವಾನಗಿ ದುರುಪಯೋಗವಾಗುತ್ತಿದೆ, ಚುನಾವಣೆ ಸಂದರ್ಭದಲ್ಲಿ ಡಿಪಾಜಿಟ್ ಮಾಡಲು ಸೂಚಿಸಿದರೂ ಹಿಂಜರಿಯುತ್ತಿದ್ದಾರೆ ಎಂದು ವಿಷಾಧಿಸಿದರು.

ವಲಸೆ ಕಾರ್ಮಿಕರು ಉತ್ತರ ಭಾರತದ ಬೇರೆ ಬೇರೆ ರಾಜ್ಯಗಳಿಂದ ಜಿಲ್ಲೆಯ ಕಾಫಿ ತೋಟಗಳಿಗೆ ಆಗಮಿಸುತ್ತಿದ್ದಾರೆ ಆದರೆ ಕಾಫಿ ಬೆಳೆಗಾರರು ಕಾರ್ಮಿಕರ ಸಂಪೂರ್ಣ ದಾಖಲೆ ಪರಿಶೀಲಿಸಿ ನಿರ್ವಹಣೆ ಮಾಡುವ ಜೊತೆಗೆ ಅವರ ಆಧಾರ್, ಓಟರ್ ಐಡಿ, ಪಡಿತರ ಚೀಟಿ ಮುಂತಾದ ದಾಖಲೆಗಳನ್ನು ಪಡೆದು ಸ್ಥಳೀಯ ಪೊಲೀಸ್ ಇಲಾಖೆಗೆ ನೀಡಿದಾಗ ವಲಸೆ ಕಾರ್ಮಿಕರು ಕ್ರಿಮಿನಲ್ ಹಿನ್ನೆಲೆ ಉಳ್ಳವರೇ, ಇಲ್ಲವೇ ಎಂಬುದು ತಿಳಿಯುತ್ತದೆ ಎಂದರು.

ಕಾಫಿ ತೋಟಕ್ಕೆ ಸಂಬಂಧಿಸಿದ ಕಾಫಿ ಬೆಳೆಗಾರರು ತಮ್ಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಲಸೆ ಕಾರ್ಮಿಕರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸುವ ಜೊತೆಗೆ ಪಿಎಸ್‌ಐ, ಆರ್‌ಎಫ್‌ಓ, ಕಾರ್ಮಿಕ ಇಲಾಖೆಯ ಇನ್ಸ್‌ಪೆಕ್ಟರ್ ದೂರವಾಣಿ ಸಂಖ್ಯೆಗಳನ್ನು ಇಟ್ಟುಕೊಳ್ಳುವಂತೆ ಸಲಹೆ ನೀಡಿದರು.

ಇದರಿಂದ ಮುಂದೆ ಆಗಬಹುದಾದ ಅನಾಹುತಗಳನ್ನು ತಡೆಯಲು ಸಹಕಾರಿಯಾಗುತ್ತದೆ. ವಲಸೆ ಕಾರ್ಮಿಕರಲ್ಲಿ ಅನುಮಾನಾಸ್ಪದ ಚಟುವಟಿಕೆಗಳು ಕಂಡುಬಂದರೆ ತಕ್ಷಣ ಹತ್ತಿರದ ಠಾಣೆಗೆ ದೂರು ಸಲ್ಲಿಸಿ ವಿವರ ನೀಡುವಂತೆ ಮನವಿ ಮಾಡಿದರು. ಬಂದೂಕು ಪರವಾನಗಿ ಪಡೆದವರು ಬೇರೆಯವರಿಗೆ ಗನ್‌ಗಳನ್ನು ಕೊಡಬಾರದು, ಅಪಾಯ ಸಂಭವಿಸಿದಾಗ ಪರವಾನಗಿ ಯಾರ ಹೆಸರಿನಲ್ಲಿರುತ್ತದೋ ಅವರೇ ಹೊಣೆಗಾರರಾಗುತ್ತಾರೆ ಎಂದು ಎಚ್ಚರಿಸಿದರು.

 

 

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ